ಮಂಗಳವಾರ, ಜೂನ್ 15, 2021
27 °C

ಮುಸ್ಲಿಂ ಮಕ್ಕಳ ದಾಖಲಾತಿಯಲ್ಲಿ ಇಳಿಕೆ: ಕೋಲಾಹಲ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ (ಪಿಟಿಐ): ದೆಹಲಿಯ ಖಾಸಗಿ ಶಾಲೆಗಳಲ್ಲಿ ಮುಸ್ಲಿಂ ಮಕ್ಕಳ ದಾಖಲಾತಿಯಲ್ಲಿ ಇಳಿಕೆ ಕಾಣಿಸಿಕೊಂಡಿದೆ ಎಂಬ ವಿಚಾರ ರಾಜ್ಯಸಭೆಯಲ್ಲಿ ಸೋಮವಾರ ಕೋಲಾಹಲಕ್ಕೆ ಕಾರಣವಾಯಿತು.

ಈ ವಿಷಯಕ್ಕೆ ಸಂಬಂಧಿಸಿ ಬಿಜೆಪಿ, ಎಲ್‌ಜೆಪಿ ಹಾಗೂ ಎನ್‌ಸಿಪಿ ಸದಸ್ಯರು ವಾಗ್ವಾದದಲ್ಲಿ ತೊಡಗಿಕೊಂಡು ಗದ್ದಲ ಎಬ್ಬಿಸಿದರು.ಎಲ್‌ಜೆಪಿ ನಾಯಕ ರಾಮ್ ವಿಲಾಸ್ ಪಾಸ್ವಾನ್ ಶೂನ್ಯ ವೇಳೆಯಲ್ಲಿ ಪತ್ರಿಕೆಯೊಂದನ್ನು ತೋರಿಸಿ ದೆಹಲಿಯ ಖಾಸಗಿ ಶಾಲೆಗಳಲ್ಲಿ ಮುಸ್ಲಿಂ ಮಕ್ಕಳ ದಾಖಲಾತಿ ಕಡಿಮೆಯಾಗುತ್ತಿದೆ ಎನ್ನುವ ವರದಿಯತ್ತ ಗಮನ ಸೆಳೆದರು.

ಕೂಡಲೇ ಎದ್ದು ನಿಂತ ಬಿಜೆಪಿ ಸದಸ್ಯ ಬಲ್‌ಬೀರ್ ಪುಂಜ್ ಶಾಲಾ ದಾಖಲಾತಿಯಂತಹ ವಿಚಾರದಲ್ಲೂ ಧರ್ಮವನ್ನು ತರುವುದು ಸರಿಯಲ್ಲ ಎಂದು ಖಂಡಿಸಿದರು. ಎನ್‌ಸಿಪಿಯ ತಾರೀಕ್ ಅನ್ವರ್, ಪಾಸ್ವಾನ್ ಅವರನ್ನು ಬೆಂಬಲಿಸಿದರು.ತಮಗೆ ಈ ವಿಚಾರದಲ್ಲಿ ಮಾತನಾಡಲು ಹೆಚ್ಚು ಕಾಲಾವಕಾಶ ನೀಡಲಿಲ್ಲ ಎಂಬ ಕಾರಣಕ್ಕೆ ಸಭಾಧ್ಯಕ್ಷರ ಪೀಠದಲ್ಲಿದ್ದ ಪಿ.ಜೆ. ಕುರಿಯನ್ ಕಾಂಗ್ರೆಸ್‌ಗೆ ಸೇರಿದ ವ್ಯಕ್ತಿ ಎಂದು ಪಾಸ್ವಾನ್ ನಿಂದಿಸಿದರು.ಸಭಾಧ್ಯಕ್ಷರ ಪೀಠ ಯಾವುದೇ ಪಕ್ಷಕ್ಕೆ ಸೇರಿದ್ದಲ್ಲ. ನಿಂದಾತ್ಮಕ ಮಾತುಗಳನ್ನು ವಾಪಸು ಪಡೆಯಿರಿ ಎಂದು ಬಿಜೆಪಿ ಸದಸ್ಯರು ಪಟ್ಟು ಹಿಡಿದರು. ತಾವು ಅಂತಹ ಟೀಕೆ ಮಾಡಿಲ್ಲ ಎಂದು ಪಾಸ್ವಾನ್ ಆನಂತರ ಸ್ಪಷ್ಟಪಡಿಸಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.