ಮಂಗಳವಾರ, ಜುಲೈ 14, 2020
27 °C

ಮೂರು ನೋಟ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮೂರು ನೋಟ

ಬನ್ನೇರುಘಟ್ಟ ರಸ್ತೆಯ ಟಿ ಜಾನ್ ಕಾಲೇಜಿನ ಫ್ಯಾಷನ್ ಮತ್ತು ಅಪೆರಲ್ ವಿಭಾಗದ ವಿದ್ಯಾರ್ಥಿಗಳು ಪಠ್ಯಕ್ರಮದ ಅಂಗವಾಗಿ ತಾವೇ ವಿನ್ಯಾಸ ಮಾಡಿದ ವಸ್ತ್ರಗಳನ್ನು ಪ್ರದರ್ಶಿಸಿ ಗಮನ ಸೆಳೆದರು. ಈ ಉಡುಪುಗಳು ಚಿತ್ತಾಕರ್ಷಕ ಡಿಸೈನ್, ಹೊಸತನ, ವಿನೂತನ ಪರಿಕಲ್ಪನೆಯಿಂದ ಕೂಡಿ ಗಮನ ಸೆಳೆದವು.ಇತ್ತ ಮಲ್ಲೇಶ್ವರದ ಮಂತ್ರಿ ಸ್ಕ್ವೇರ್‌ನ ಸತ್ಯಾ ಪಾಲ್ ಸ್ಟೋರ್‌ನಲ್ಲಿ ಮಾಜಿ ಭಾರತ ಸುಂದರಿ ಮತ್ತು ಚಿತ್ರಕಲಾವಿದೆ ಅಂಜನಾ ಕುಥಿಯಾಲಾ ಅವರ ‘ಅ ಟ್ರಿಬ್ಯೂಟ್ ಟು ಬೆಂಗಳೂರು ಆನ್ ಕ್ಯಾನ್ವಾಸ್’ ಕಲಾಕೃತಿಯ ಪ್ರದರ್ಶನ ಇತ್ತು. ಮಂತ್ರಿ ಡೆವಲಪರ್ಸ್‌ ಮಾರುಕಟ್ಟೆ ವಿಭಾಗದ ನಿರ್ದೇಶಕಿ ಸ್ನೇಹಲ್ ಮಂತ್ರಿ ಅನಾವರಣಗೊಳಿಸಿ ಖುಷಿಪಟ್ಟರು.ಮಗದೊಂದು ಕಡೆ ವಿಶ್ವಕಪ್ ಕ್ರಿಕೆಟ್ ವ್ಯಾಮೋಹ ಸೀರೆಯನ್ನೂ ಬಿಟ್ಟಿಲ್ಲ. ಕುಮಾರಸ್ವಾಮಿ ಬಡಾವಣೆಯ ಹವ್ಯಾಸಿ ಡಿಸೈನರ್ ಸವಿತಾ ನಿರಂಜನ ಅವರು ವಿಶ್ವಕಪ್ ಡಿಸೈನ್ ಸೀರೆ ಮತ್ತು ರವಿಕೆಯನ್ನು ವಿನ್ಯಾಸಗೊಳಿಸಿ  ಪ್ರದರ್ಶಿಸಿ ಕ್ರಿಕೆಟ್ ಪ್ರೀತಿ ಪ್ರದರ್ಶಿಸಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.