ಶುಕ್ರವಾರ, ಜೂನ್ 25, 2021
22 °C

ಮೂಲಸೌಕರ್ಯಕ್ಕೆ ಆಗ್ರಹಿಸಿ ಪ್ರತಿಭಟನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಸಿಂದಗಿ: ಪಟ್ಟಣದ 17ನೇ ವಾರ್ಡ್ ಬಡಾವಣೆಗೆ ಮೂಲಸೌಲಭ್ಯ ಒದಗಿಸಿಕೊಡುವಂತೆ ಆಗ್ರಹಿಸಿ ನಿವಾಸಿಗಳು ಮುಸ್ಲಿಂ ಮುತ್ತಹೀದಾ ಕೌನ್ಸಿಲ್‌ನ ತಾಲ್ಲೂಕು ಘಟಕದ ನೇತೃತ್ವದಲ್ಲಿ ಗುರುವಾರ ಪುರಸಭೆ ಕಾರ್ಯಾಲಯಕ್ಕೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು.ಪ್ರತಿಭಟನೆ ನೇತೃತ್ವ ವಹಿಸಿದ್ದ ಬಹುಜನ ಸಮಾಜ ಪಾರ್ಟಿ ಜಿಲ್ಲಾ ಕಾರ್ಯಕಾರಿ ಸಮಿತಿ ಸದಸ್ಯ ದಸ್ತಗೀರ ಐ.ಎಂ.(ಇಂಗಳಗಿ) ಮಾತನಾಡಿ, ಪಟ್ಟಣದ ಸರ್ಕಾರಿ ಆಸ್ಪತ್ರೆ ಹಿಂದಿನ ಹುದಾನಗರ ಬಡಾವಣೆಯಲ್ಲಿ 120ರಷ್ಟು ಕುಟುಂಬಗಳು ವಾಸ ಮಾಡುತ್ತಿವೆ. ಅವು  ಮೂಲಸೌಲಭ್ಯಗಳಿಂದ ವಂಚಿತ ವಾಗಿವೆ. ಈ ವಿಷಯವಾಗಿ ಪುರಸಭೆಗೆ ಸಾಕಷ್ಟು ಬಾರಿ ಮನವಿ ಸಲ್ಲಿಸಿದರೂ ಯಾವುದೇ ಪ್ರಯೋಜನವಾಗಿಲ್ಲ. ಈ ಹೋರಾಟಕ್ಕೂ ಸ್ಪಂದಿಸದೇ ಇದ್ದಲ್ಲಿ ಬಡಾವಣೆ ನಿವಾಸಿಗಳೊಂದಿಗೆ ಪುರಸಭೆ ಕಾರ್ಯಾಲಯದ ಎದುರು ಆಮರಣ ಉಪವಾಸ ಸತ್ಯಾಗ್ರಹ ಆರಂಭಿಸಲಾಗುವುದು ಎಂದು ಅವರು ಬೆದರಿಕೆ ಹಾಕಿದರು.ಪ್ರಮುಖವಾಗಿ ಈ ವಾರ್ಡಿನಲ್ಲಿ ಕುಡಿಯುವ ನೀರಿನ ತೀವ್ರ ಸಮಸ್ಯೆ ಇದೆ. ಮಹಿಳೆಯರಿಗೆ ಶೌಚಾಲಯ ವ್ಯವಸ್ಥೆ ಇಲ್ಲ. ವಿದ್ಯುತ್ ಕಂಬಗಳಿಲ್ಲ ಎಂದು ಸಮಸ್ಯೆಗಳನ್ನು ವಿವರಿಸಿದರು.ರಫೀಕ್ ಮುಲ್ಲಾ ಐದು ಪ್ರಮುಖ ಬೇಡಿಕೆಗಳುಳ್ಳ ಮನವಿ ಪತ್ರವನ್ನು ಪುರಸಭೆ ಮುಖ್ಯಾಧಿಕಾರಿ ಎನ್.ಆರ್.ಮಠ ಅವರಿಗೆ ಸಲ್ಲಿಸಿದರು.ಪ್ರತಿಭಟನೆ ನೇತೃತ್ವವನ್ನು ಮುಸ್ಲಿಂ ಮುತ್ತಹೀದಾ ಕೌನ್ಸಿಲ್ ತಾಲ್ಲೂಕು ಘಟಕದ ಅಧ್ಯಕ್ಷ ಅಬ್ದುಲ್‌ರಜಾಕ್ ನಾಟೀಕಾರ,    ಲಾಳೇಮಸಾಕ ಶಬ್ಬೀರ್, ಗೌಸ್, ವಹಾಬ, ಇರ್ಫಾನ್,   ಸೈಫನ್ ನಾಟೀಕಾರ, ಮೈಬೂಬ ತಾಂಬೋಳಿ, ನಬಿ, ರಂಜಾನ್, ರಫೀಕ ಮುಲ್ಲಾ, ಇಬ್ರಾಹಿಂ ನಾಟೀಕಾರ, ಶಫೀಕ್ ಅಸ್ಕಿ, ರಜಾಖ ಬಳಗಾರ, ನಬಿಲಾಲ ಶೇಖ, ನೀಲಪ್ಪ ಮಣೂರ, ಕುಲಸುಮಾ ಹವಾಲ್ದಾರ, ಲುಕ್ಮಾನ್ ಹುಂಡೇಕಾರ, ಯಾಶೀನ್ ಮುಜಾವರ, ಪಿ.ಜಿ.ಮಠ, ಮುಸ್ತಾಫ್ ಮಂದೇವಾಲ ಮೊದಲಾದವರು ವಹಿಸಿಕೊಂಡಿದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.