ಮೂಲ್ಕಿ: ರಾಷ್ಟ್ರೀಯ ಹೆದ್ದಾರಿ ಮೂಲ್ಕಿಯಲ್ಲಿ ನಡೆಸಲು ಉದ್ದೇಶಿಸಿರುವ ನೂತನ ರಸ್ತೆ ವಿಸ್ತರಣೆ ಕಾಮಗಾರಿ ಬಗ್ಗೆ ಜನರಿಗೆ ಸ್ಪಷ್ಟ ಮಾಹಿತಿ ತಿಳಿಸಲು ಸ್ಥಳೀಯ ಸಂಘ ಸಂಸ್ಥೆಗಳನ್ನು ಒಳಗೊಳ್ಳಿಸಿ ವಿಶೇಷ ಸಭೆ ನಡೆಸಲಾಗುವುದು ಎಂದು ಮೂಲ್ಕಿ ಪಟ್ಟಣ ಪಂಚಾಯಿತಿ ಅಧ್ಯಕ್ಷ ಶಶಿಕಾಂತ ಶೆಟ್ಟಿ ಹೇಳಿದರು.

ಮೂಲ್ಕಿ ಪಟ್ಟಣ ಪಂಚಾಯಿತಿಯಲ್ಲಿ ಗುರುವಾರ ಹೆದ್ದಾರಿ ವಿಸ್ತರಣೆ ಬಗ್ಗೆ ಚರ್ಚಿಸುವ ಸಲುವಾಗಿ ನಡೆಸಿದ ಸಭೆಯಲ್ಲಿ ಅವರು ಮಾತನಾಡಿದರು.

ಮೂಲ್ಕಿ ಹೆದ್ದಾರಿ ವಿಸ್ತರಣೆಯಿಂದ ಪೇಟೆಯ ಚಿತ್ರಣ ಸಂಪೂರ್ಣವಾಗಿ ಬದಲಾಗಲಿದೆ. ಇಲ್ಲಿನ ಬಸ್ ನಿಲ್ದಾಣ, ಕಾರು, ರಿಕ್ಷಾ, ಟೆಂಪೊ ಇನ್ನಿತರ ವಾಹನಗಳ ನಿಲುಗಡೆಗೆ ಅಡ್ಡಿ ಆಗಲಿದ್ದು ಈ ಬಗ್ಗೆ ಸಂಸದ ಮತ್ತು ಶಾಸಕರ ನೇತೃತ್ವದಲ್ಲಿ ವಿಶೇಷ ಸಭೆ ನಡೆಸಿ ಸೂಕ್ತ ನಿರ್ಧಾರ ಕೈಗೊಳ್ಳುವ ಮೊದಲು ಎಲ್ಲರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಲಾಗುವುದು ಎಂದರು. ಅಧ್ಯಕ್ಷ ಬಿ.ಎಂ.ಆಸಿಫ್ ಮಾತನಾಡಿ ಯಾವುದೇ ಕಾಮಗಾರಿಯನ್ನು ಪ್ರಾರಂಭಿಸುವ ಮೊದಲು ಬಪ್ಪನಾಡು ಜಾತ್ರಾ ಮಹೋತ್ಸವವನ್ನು ಗಮನದಲ್ಲಿಟ್ಟುಕೊಂಡು ಪ್ರಾರಂಭಿಸಬೇಕು.

ಕಾಮಗಾರಿಯ ಬಗ್ಗೆ ಮಾಹಿತಿ ಜನರಿಗೆ ತಿಳಿಸಿಕೊಂಡೇ ಶಾಂತಿಯುತವಾಗಿ ನಡೆಸಬೇಕು ಎಂದು ಹೇಳಿದರು.
ಉಪಾಧ್ಯಕ್ಷ ಯೋಗೀಶ್ ಕೋಟ್ಯಾನ್ ಮೂಲ್ಕಿಯಲ್ಲಿ ಕಾಮಗಾರಿ ನಡೆಸುವ ಮೊದಲು ಪಂಚಾಯತ್ನ ಗಮನಕ್ಕೆ ತಂದು ಕಾಮಗಾರಿ ಪ್ರಾರಂಭಿಸಬೇಕು ಅಲ್ಲದೇ ಜನರು ತಮ್ಮ ಬಳಿ ವಿಚಾರಿಸುವಾಗ ಮೊದಲು ನಮಗೆ ಮಾಹಿತಿ ತಿಳಿಸರೇ ಉತ್ತಮ ಎಂದು ಸಲಹೆ ನೀಡಿದರು.

ವಿರೋಧ ಪಕ್ಷದ ಸುನಿಲ್ ಆಳ್ವಾ ಮಾತನಾಡಿ ಈ ಕಾಮಗಾರಿಯನ್ನು ನವಯುಗ ಕನ್ಸ್ಟ್ರಕ್ಷನ್ ಮಾಡುತ್ತಿದ್ದರೂ, ಬದಲಾವಣೆ ಬೇಕಾದರೆ ಸಂಸದ, ಶಾಸಕರ ಮೂಲಕ ಪ್ರಯತ್ನಿಸೋಣ ಎಂದರು.

ಕಾರು ಚಾಲಕರ ಸಂಘದ ಅಧ್ಯಕ್ಷ ದೇವಣ್ಣ ನಾಯಕ್, ಮಧು ಆಚಾರ್ಯ, ಕಿನ್ನಿಗೋಳಿ ಗ್ರಾ.ಪಂ ಅಧ್ಯಕ್ಷ ದೇವಪ್ರಸಾದ್ ಪುನರೂರು, ಉದ್ಯಮಿಗಳಾದ ಹರಿಶ್ಚಂದ್ರ ಕೋಟ್ಯಾನ್, ತಾರನಾಥ ಅಡ್ವೆ, ಬಾಲಚಂದ್ರ ಸನಿಲ್, ಉದಯ ಶೆಟ್ಟಿ ಶಿಮಂತೂರು. ಸದಸ್ಯರಾದ ಪುತ್ತುಬಾವ, ಪುರುಷೋತ್ತಮರಾವ್, ಕಂದಾಯ ನಿರೀಕ್ಷಕ ಹೂವಯ್ಯ ಶೆಟ್ಟಿ, ನವಯುಗ ಎಂಜಿನಿಯರ್ ರವಿದ್ರನಾಥ ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.