ಮೂಲ್ಕಿ: ಸುರತ್ಕಲ್- ಕುಂದಾಪುರದ ಚತುಷ್ಪಥ ಕಾಮಗಾರಿ ಯೋಜನೆಯಡಿ ಮೂಲ್ಕಿಯಲ್ಲಿ ಹೆದ್ದಾರಿ ವಿಸ್ತರಣೆ ವಿವಾದಕ್ಕೆ ಕಾರಣವಾಗಿತ್ತು. ಬೈಪಾಸ್ ನಿರ್ಮಾಣಕ್ಕೆ ಪರ- ವಿರೋಧ ಧ್ವನಿಗಳು ಕೇಳಿಬಂದಿದ್ದವು. ಹೆದ್ದಾರಿ ಅಗಲ ಹೆಚ್ಚಿಸುವುದಕ್ಕೆ ಕಟ್ಟಡ ಮಾಲಿಕರು ಮತ್ತು ವಾಹನ ಪಾರ್ಕಿಂಗ್ನವರು ತೀವ್ರ ವಿರೋಧ ವ್ಯಕ್ತಪಡಿಸಿದ್ದರು. ಇದೀಗ ಗೊಂದಲಗಳಿಗೆ ಪರಿಹಾರವಾಗಿ ಬದಲಿ ಪ್ರಸ್ತಾವನೆ ಮೂಲಕ ಕಾಮಗಾರಿ ಕೈಗೆತ್ತಿಕೊಳ್ಳಲಾಗುತ್ತಿದೆ.

ಹೊಸ ಪ್ರಸ್ತಾವನೆಯಂತೆ ಮೂಲ್ಕಿಯಲ್ಲಿ ಅಂಡರ್ ಪಾಸ್ ಹೈವೆ ನಿರ್ಮಾಣ ಆಗಲಿದೆ. ಮೂಲ್ಕಿಯ ಕ್ಷೀರ ಸಾಗರದ ಮುಂಭಾಗದಿಂದ 8.75 ಮೀಟರ್ ಅಗಲದಲ್ಲಿ ಎರಡು ಹೆದ್ದಾರಿ ರಸ್ತೆ ನಿರ್ಮಾಣ ಆಗಲಿದ್ದು ಇದು 20 ಅಡಿ ಆಳದಿಂದ ಆರಂಭವಾಗಿ ಮೂಲ್ಕಿ ಆರ್.ಆರ್.ಟವರ್ನ ಮುಂಭಾಗ ಸರ್ವಿಸ್ ರಸ್ತೆಯ ಸಮಭಾಗದಲ್ಲಿ ಸೇರಿಕೊಳ್ಳಲಿದೆ.

ಈ ರಸ್ತೆಯ ಎರಡೂ ಬದಿ 6 ಮೀಟರ್ನ ಸರ್ವಿಸ್ ರಸ್ತೆ ಮಾತ್ರ ನೆಲಮಟ್ಟದಲ್ಲಿಯೇ ಇದ್ದು ಎರಡೂ ಕಡೆಯಲ್ಲಿ ಒಂದು ಮೀಟರ್ನ ಮೋರಿ ರಚನೆಯಾಗಿ ಅದರ ಮೇಲೆ ಸಿಮೆಂಟ್ ಸ್ಲಾಬ್ ಬಂದು ಅದನ್ನು ಸಾರ್ವಜನಿಕರು ಪಾದಚಾರಿ ರಸ್ತೆಯನ್ನಾಗಿ ಉಪಯೋಗಿಸಬಹುದು ಎಂದು ನವಯುಗ ನಿರ್ಮಾಣ ಸಂಸ್ಥೆಯ ಯೋಜನಾ ಪ್ರಬಂಧಕ ರವೀಂದ್ರನಾಥ `ಪ್ರಜಾವಾಣಿ~ಗೆ ಮಾಹಿತಿ ನೀಡಿದ್ದಾರೆ.

ಈ ಸರ್ವಿಸ್ ರಸ್ತೆಗೆ ಸಂಪರ್ಕಿಸಲು ಈಗಿರುವ ಲಯನ್ಸ್ ಪಾರ್ಕ್ನ ಬಳಿ ಕಿನ್ನಿಗೋಳಿ ಸಂಪರ್ಕದ ರಸ್ತೆಯಲ್ಲಿ ಒಂದು ಓವರ್ ಬ್ರಿಡ್ಜ್ ಬರಲಿದೆ. ಈಗಿನ ಗೌರವ್ ಬಾರ್ ಬಳಿ ಸರ್ವಿಸ್ ರಸ್ತೆಗೆ ಸಂಪರ್ಕಿಸುವ ರಸ್ತೆ ಬರಲಿದೆ. ಮೂಲ್ಕಿ ಪೇಟೆಯಲ್ಲಿ ಕಟ್ಟಡಗಳಿಗೆ ಹಾನಿಯಾಗದೇ ಈ ರಸ್ತೆಯನ್ನು ನಿರ್ಮಿಸಲಾಗುವುದು ಎಂದಿದ್ದಾರೆ.

ಬಪ್ಪನಾಡು ದೇವಳದ ದ್ವಾರ ಉಳಿಸಲಾಗುವುದು, ರಥೋತ್ಸವಕ್ಕೂ ಅಡ್ಡಿಯಾಗುವುದಿಲ್ಲ. ಬಸ್ ನಿಲ್ದಾಣಕ್ಕೆ ಅನುಕೂಲವಾಗುವ ಹಾಗೇ ನಕ್ಷೆಯನ್ನು ರಚಿಸಲಾಗಿದೆ. ಆದರೆ ಕೇವಲ ನಿಲುಗಡೆಗೆ ಅವಕಾಶ ಇದ್ದು ಬಸ್ ನಿಲ್ದಾಣ ಸ್ಥಳಾಂತರ ಅಗತ್ಯವಿದೆ. ಕಾರು, ರಿಕ್ಷಾ, ಟೆಂಪೊ ಪಾರ್ಕಿಂಗ್ಗೂ ಅವಕಾಶ ನೀಡಲು ಸಾಧ್ಯವಿಲ್ಲ, ಉದ್ಯಮಿಗಳಿಗೆ ಪಾರ್ಕಿಂಗ್ ಮಾಡಲು ಸರ್ವಿಸ್ ರೋಡನ್ನೇ ಬಳಸಬೇಕು ಎಂದಿದ್ದಾರೆ.

ಬದಲಾದ ಕಾಮಗಾರಿಯನ್ನು ಬಪ್ಪನಾಡು ಜಾತ್ರಾ ಮಹೋತ್ಸವದ ನಂತರ ಕೈಗೆತ್ತಿಕೊಳ್ಳಲಾಗುವುದು, ಹಂತ ಹಂತವಾಗಿ ಮಣ್ಣನ್ನು ತುಂಬಿಸುವ ಕೆಲಸ ಮೊದಲು ಆರಂಭಿಸಿ ಸರ್ವಿಸ್ ರಸ್ತೆಯ ನಿರ್ಮಾಣದ ನಂತರ ಹೆದ್ದಾರಿ ನಿರ್ಮಾಣಕ್ಕೆ ಯೋಜನೆ ರೂಪಿಸಲಾಗಿದೆ. ಹೆದ್ದಾರಿಗಾಗಿ ಸರ್ವೇ ಮಾಡಿರುವ ರಸ್ತೆಯಲ್ಲಿ ಮಾತ್ರ ಈ ಯೋಜನೆ ರಚನೆ ಆಗಲಿದ್ದು ಯಾವುದೇ ಹೆಚ್ಚುವರಿ ಭೂಮಿ ಬಳಕೆಯಾಗುವುದಿಲ್ಲ ಎಂದು ತಿಳಿಸಿದ್ದಾರೆ.

ಹಳೆಯಂಗಡಿಯಲ್ಲೂ ರಸ್ತೆಯನ್ನು ಮಾತ್ರ ವಿಸ್ತರಣೆ ಮಾಡಲಿದ್ದು ರಿಕ್ಷಾ ಮತ್ತು ಕಾರು ಪಾರ್ಕಿಂಗ್ ಸ್ಥಳವನ್ನು ಸ್ಥಳಾಂತರ ಮಾಡಬೇಕು. ಮಳೆಗಾಲಕ್ಕೆ ಮೊದಲೇ ಯೋಜನೆ ಒಂದು ಹಂತಕ್ಕೆ ಬರಲಿದೆ ಎಂದಿದ್ದಾರೆ.

ಮೂಲ್ಕಿಯಲ್ಲಿ ಬೈಪಾಸ್ ವಿರುದ್ಧ ತೀವ್ರ ಪ್ರತಿಭಟನೆ ನಡೆಸಿದ್ದರೆ ಅದರ ಪರವಾಗಿ ಸಮಿತಿಯೊಂದು ಅಸ್ತಿತ್ವಕ್ಕೆ ಬಂದಿತ್ತು. ಹೆದ್ದಾರಿ ವಿಸ್ತರಣೆಯಿಂದ ಪಾರ್ಕಿಂಗ್ಗೆ ತೊಂದರೆಯಾಗಿ ಉದ್ಯಮಿಗಳಿಗೆ ಅನಾನುಕೂಲವಾಗುತ್ತದೆ ಎಂದು ಆಕ್ಷೇಪ ಕೇಳಿಬಂದಿತ್ತು. ಈ ಹಿನ್ನೆಲೆಯಲ್ಲಿ ಹೊಸ ಪ್ರಸ್ತಾವನೆಯ ಮೂಲಕ ರಾಷ್ಟ್ರೀಯ ಹೆದ್ದಾರಿ ನಿರ್ಮಾಣದಿಂದ ಕಾರು, ಟೆಂಪೊ, ಬಸ್ಸು, ರಿಕ್ಷಾ ತಂಗದಾಣಗಳಿಗೆ ಅನಾನುಕೂಲವಾಗುತ್ತದೆ ಎಂಬ ದೂರು ಕೇಳಿಬಂದಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.