ಮಂಗಳವಾರ, ಜೂನ್ 22, 2021
22 °C

ಮೆಕ್ಸಿಕೊದಲ್ಲಿ ಭೂಕಂಪ: 11 ಜನರಿಗೆ ಗಾಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮೆಕ್ಸಿಕೊ ನಗರ (ಎಎಫ್‌ಪಿ): ರಿಕ್ಟರ್ ಮಾಪನದಲ್ಲಿ 7.4ರಷ್ಟಿದ್ದ ಶಕ್ತಿಶಾಲಿ ಭೂಕಂಪ ಮೆಕ್ಸಿಕೊದ ನೈರುತ್ಯ ಭಾಗದಲ್ಲಿ ಸಂಭವಿಸಿದ್ದು, 11 ಜನರು ಗಾಯಗೊಂಡಿದ್ದಾರೆ.ನೂರಾರು ಮನೆಗಳು ನಾಶವಾಗಿವೆ. ಭೀತರಾಗಿರುವ ಜನರು ರಾಜಧಾನಿಯ ಬೀದಿಗಳಿಗೆ ಬಂದು ವಾಸ್ತವ್ಯ ಹೂಡಿದ್ದಾರೆ.`ಗಾಯಾಳುಗಳಲ್ಲಿ ಇಬ್ಬರ ಸ್ಥಿತಿ ಗಂಭೀರವಾಗಿದೆ. ಹೆಚ್ಚಿನ ಮಾಹಿತಿ ದೊರಕಿಲ್ಲ~ ಎಂದು ಒಳಾಡಳಿತ ಸಚಿವ ಅಲೆಜಾಂಡ್ರೊ ಪೊಯಿರೆ ತಿಳಿಸಿದ್ದಾರೆ.ಕೊಸ್ಟಾ ಚಿಕಾ ಕಡಲ ಪ್ರದೇಶದಲ್ಲಿರುವ ನಾಲ್ಕು ನಗರಸಭೆಗಳ ವ್ಯಾಪ್ತಿಯಲ್ಲಿರುವ ಸುಮಾರು 1,600 ಮನೆಗಳು ಹಾನಿಗೊಳಗಾಗಿವೆ ಎಂದು ಗುಎರ‌್ರೆರೊ ರಾಜ್ಯಪಾಲ ಏಂಜೆಲ್ ಅಗ್ಯುರ‌್ರೆ ಹೇಳಿದ್ದಾರೆ.ಒಬಾಮ ಪುತ್ರಿ ಸುರಕ್ಷಿತ: ಮೆಕ್ಸಿಕೊಗೆ ವಿಹಾರಾರ್ಥ ತೆರಳಿದ್ದ ಅಮೆರಿಕದ ಅಧ್ಯಕ್ಷ ಬರಾಕ್ ಒಬಾಮ ಅವರ 13 ವರ್ಷದ ಪುತ್ರಿ ಮಲಿಯಾ ಸುರಕ್ಷಿತವಾಗಿದ್ದಾಳೆ ಎಂದು ಶ್ವೇತಭವನ ತಿಳಿಸಿದೆ.

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.