ಬೆಂಗಳೂರು: ಮೆಟ್ರೊ ರೈಲಿನಲ್ಲಿ ಪ್ರಯಾಣಿಸಲು ಹಾಗೂ ದೀಪಾವಳಿ ಹಬ್ಬದ ಹಿನ್ನೆಲೆಯಲ್ಲಿ ಶಾಪಿಂಗ್ ಮಾಡಲು ಜನರು ಹೆಚ್ಚಿನ ಸಂಖ್ಯೆಯಲ್ಲಿ ನಗರದ ಎಂ.ಜಿ.ರಸ್ತೆಗೆ ಬಂದಿದ್ದರಿಂದ ಸುತ್ತಮುತ್ತಲ ಪ್ರದೇಶದಲ್ಲಿ ಶನಿವಾರ ವಾಹನ ದಟ್ಟಣೆ ಹೆಚ್ಚಿತ್ತು.

ವಾರಾಂತ್ಯ ದಿನವಾದ ಶನಿವಾರ ಸಾಫ್ಟ್ವೇರ್ ಕಂಪೆನಿಗಳು ಸೇರಿದಂತೆ ಹಲವು ಖಾಸಗಿ ಕಂಪೆನಿಗಳಿಗೆ ರಜೆ ಇತ್ತು. ಇದರಿಂದಾಗಿ ಕಂಪೆನಿ ಉದ್ಯೋಗಿಗಳು ಕುಟುಂಬ ಸದಸ್ಯರೊಂದಿಗೆ ಎಂ.ಜಿ.ರಸ್ತೆಗೆ ಬಂದು ರಜೆಯ ಮಜಾ ಅನುಭವಿಸಿದರು.

ಮೆಟ್ರೊ ರೈಲಿನಲ್ಲಿ ಪ್ರಯಾಣಿಸಲು ನೂರಾರು ಮಂದಿ ನಿಲ್ದಾಣದ ಬಳಿ ಸಾಲುಗಟ್ಟಿ ನಿಂತಿದ್ದ ದೃಶ್ಯ ಕಂಡುಬಂತು. ಮತ್ತೊಂದೆಡೆ ಬ್ರಿಗೇಡ್ ರಸ್ತೆ, ಎಂ.ಜಿ.ರಸ್ತೆಯ ಪಾದಚಾರಿ ಮಾರ್ಗದಲ್ಲಿ ಜನಜಂಗುಳಿ ಇತ್ತು. ಈ ರಸ್ತೆಗಳಲ್ಲಿರುವ ಬಟ್ಟೆ ಅಂಗಡಿಗಳು, ಪಾದರಕ್ಷೆ ಮಳಿಗೆಗಳು ಹಾಗೂ ಚಿನ್ನಾಭರಣ ಮಳಿಗೆಗಳು ಗ್ರಾಹಕರಿಂದ ತುಂಬಿ ತುಳುಕುತ್ತಿದ್ದವು.

ಎಂ.ಜಿ.ರಸ್ತೆ, ಬ್ರಿಗೇಡ್ ರಸ್ತೆ, ಕಾಮರಾಜ ರಸ್ತೆ, ಸೇಂಟ್ ಮಾರ್ಕ್ಸ್ ರಸ್ತೆ ಸೇರಿದಂತೆ ಸುತ್ತಮುತ್ತಲ ಪ್ರದೇಶದಲ್ಲಿ ವಾಹನ ದಟ್ಟಣೆ ಹೆಚ್ಚಿದ್ದರಿಂದ ವಾಹನಗಳು ನಿಧಾನ ಗತಿಯಲ್ಲಿ ಸಾಗುವಂತಾಯಿತು. ಮೆಜೆಸ್ಟಿಕ್, ಸಿಟಿ ಮಾರುಕಟ್ಟೆ, ಜೆ.ಸಿ.ರಸ್ತೆ, ಕೆ.ಜಿ.ರಸ್ತೆ, ಜಯನಗರದಲ್ಲೂ ಇದೇ ರೀತಿಯ ವಾತಾವರಣವಿತ್ತು.

`ಮೆಟ್ರೊ ಉದ್ಘಾಟನೆಗೊಂಡ ದಿನ ಕಂಪೆನಿಗೆ ರಜೆ ಇರಲಿಲ್ಲ. ಆದ್ದರಿಂದ ಅಂದು ಬರಲು ಸಾಧ್ಯವಾಗಿರಲಿಲ್ಲ. ಆದ್ದರಿಂದ ಸ್ನೇಹಿತರ ಜತೆಗೆ ಬೆಳಿಗ್ಗೆಯೇ ಎಂ.ಜಿ.ರಸ್ತೆಗೆ ಬಂದು ಮೆಟ್ರೊ ರೈಲಿನಲ್ಲಿ ಪ್ರಯಾಣಿಸಿದೆ. ಇದೊಂದು ಮರೆಯಲಾಗದ ಅನುಭವ. ಬೆಂಗಳೂರು ಮೆಟ್ರೊ ಬಗ್ಗೆ ಹೆಮ್ಮೆ ಎನಿಸುತ್ತದೆ~ ಎಂದು ಖಾಸಗಿ ಕಂಪೆನಿ ಉದ್ಯೋಗಿ ರಚನಾ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.