ಶನಿವಾರ, ಜೂನ್ 19, 2021
29 °C

ಮೇಲುಕೋಟೆ: ಸಂಭ್ರಮದ ಚಿನ್ನದ ಪಲ್ಲಕ್ಕಿ ಉತ್ಸವ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮೇಲುಕೋಟೆ: ಆಚಾರ್ಯ ರಾಮಾನುಜರ ಕಾಲದಿಂದ ಅನೂಚಾನ ಪದ್ಧತಿಯಂತೆ ನಡೆದು ಬಂದ ರಥೋತ್ಸವದ ರಾತ್ರಿ ಬಂಗಾರದ ಪಲ್ಲಕ್ಕಿ ಉತ್ಸವವನ್ನು ಹರಿಜನರು ಭಾನುವಾರ ರಾತ್ರಿ ಶ್ರದ್ಧಾಭಕ್ತಿಯಿಂದ ನಡೆಸಿಕೊಟ್ಟರು.ರಾತ್ರಿ 9.15ಕ್ಕೆ ಆರಂಭವಾದ ಉತ್ಸವ ಎರಡು ಗಂಟೆಗಳಿಗೂ ಹೆಚ್ಚು ಕಾಲ ಪ್ರಮುಖ ಬೀದಿಗಳಲ್ಲಿ ನೆರವೇರಿತು. ಮೈಸೂರು ಅಶೋಕಪುರಂನ ಕಾಳಿಕಾಂಬ ಟ್ರಸ್ಟ್  ನಿರಂತರವಾಗಿ ನಡೆಸುತ್ತಾ ಬಂದಿರುವ ಈ ಉತ್ಸವದಲ್ಲಿ ಟ್ರಸ್ಟ್ ಮುಖಂಡರು, ಪದಾಧಿಕಾರಿಗಳು ಸೇರಿದಂತೆ ನಾಡಿನ ವಿವಿಧ ಭಾಗಗಳಿಂದ ಬಂದಿದ್ದ ಸಹಸ್ರಾರು ಹರಿಜನ ಭಕ್ತರು ಭಾಗವಹಿಸಿದ್ದರು.ಪುಷ್ಪಾಲಂಕೃತ ಬಂಗಾರದ ಪಲ್ಲಕ್ಕಿಯಲ್ಲಿ ವಿರಾಜಮಾನನಾದ ಚಲುವರಾಯಸ್ವಾಮಿಯ ರಥವನ್ನು ಸಂಪೂರ್ಣ ಹರಿಜನರೇ ಎಳೆದರು. ಅದು ನಿಷ್ಠೆಯಿಂದ ಕೂಡಿತ್ತು. ಅದೂ ಅಲ್ಲದೇ ಹರಿಜನರೇ ಮಂಗಳವಾದ್ಯವನ್ನೂ ನುಡಿಸಿ ಸ್ವಾಮಿಯ ಉತ್ಸವಕ್ಕೆ ಮೆರುಗು ನೀಡಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.