ಮೈಸೂರು: ಟೈರ್ ಉತ್ಪಾದನಾ ಕ್ಷೇತ್ರದಲ್ಲಿ ಮುಂಚೂಣಿಯಲ್ಲಿರುವ ಜೆ.ಕೆ.ಟೈರ್ ಅಂಡ್ ಇಂಡಸ್ಟ್ರೀಸ್ ಲಿಮಿಟೆಡ್ ಮೈಸೂರಿನಲ್ಲಿ ದೇಶದ ಅತಿ ದೊಡ್ಡ ‘ಒಟಿಆರ್ ಟೈರ್’ ಅನ್ನು ಸೋಮವಾರ ಬಿಡುಗಡೆ ಮಾಡಿತು.

ಮೇಟಗಳ್ಳಿ ಕೈಗಾರಿಕಾ ಪ್ರದೇಶದಲ್ಲಿರುವ ಪ್ಲಾಂಟ್ 3ರಲ್ಲಿ ನಡೆದ ಸರಳ ಸಮಾರಂಭದಲ್ಲಿ ಬಿಇಎಂಎಲ್ ಕಾರ್ಯನಿರ್ವಾಹಕ ನಿರ್ದೇಶಕ ಕೃಷ್ಣ ರೆಡ್ಡಿ ಒಟಿಆರ್ ಟೈರ್ ಅನ್ನು ಬಿಡುಗಡೆ ಮಾಡಿದರು.

‘ಒಟಿಆರ್ ಟೈರ್’ಗಳನ್ನು ಡಂಪರ್‌ಗಳಿಗೆ ಬಳಸಲಾಗುತ್ತಿದೆ. ಈ ಟೈರ್ 12 ಅಡಿ ಎತ್ತರ, 3,600 ಕೆ.ಜಿ ತೂಕ ಇದೆ.

ಈ ಸಂದರ್ಭದಲ್ಲಿ ಮಾತನಾಡಿದ ಜೆ.ಕೆ.ಟೈರ್ ಅಂಡ್ ಇಂಡಸ್ಟ್ರೀಸ್ ಮೈಸೂರು ಘಟಕದ ಮುಖ್ಯಸ್ಥ ಅಮಿತಾವ್ ಚಟರ್ಜಿ, ‘ದೇಶದಲ್ಲಿ ಮೊದಲ ಬಾರಿಗೆ ಅತಿ ದೊಡ್ಡ ಟೈರ್ ತಯಾರಿಸಿರುವುದು ಸಂಸ್ಥೆಗೆ ಹೆಮ್ಮೆ ತಂದಿದೆ. ಈ ಟೈರ್ 240 ಟನ್ ಭಾರ ಸಾಗಿಸುವ ಸಾಮರ್ಥ್ಯ ಹೊಂದಿದೆ. ಈವರೆಗೂ ಡಂಪರ್ ತಯಾರಿಸುವ ಕಂಪೆನಿಗಳಾದ ಬಿಇಎಂಎಲ್ ಮತ್ತು ಇತರ ಕಂಪೆನಿಗಳು ಭಾರಿ ಗಾತ್ರದ ಟೈರ್ ಅನ್ನು ಚೀನ, ಅಮೆರಿಕದಿಂದ ಆಮದು ಮಾಡಿಕೊಳ್ಳುತ್ತಿದ್ದವು. ಇನ್ನು ಮೂರು ತಿಂಗಳಲ್ಲಿ ಟೈರ್ ಅನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಲಾಗುವುದು’ ಎಂದರು.

‘ಈ ಟೈರ್ ಅನ್ನು ವಾಣಿಜ್ಯ ಉದ್ದೇಶಕ್ಕೆ ಬಳಕೆ ಮಾಡುವ ಮೊದಲು ಇದರ ತಾಂತ್ರಿಕ ಸಾಮರ್ಥ್ಯ ಮತ್ತು ಗುಣಮಟ್ಟ ಪರಿಶೀಲನೆ ಮಾಡಬೇಕಾಗಿದೆ.
ಮೈಸೂರು ಘಟಕದಲ್ಲಿ ಈ ಟೈರ್ ತಯಾರಿಕೆಗೆ ರೂ 200 ಕೋಟಿ ಬಂಡವಾಳ ಹೂಡಲಾಗಿದ್ದು, ಅತ್ಯುನ್ನತ ದರ್ಜೆಯ ಉಪಕರಣಗಳನ್ನು ಅಳವಡಿಸಲಾಗಿದೆ.

ಆರಂಭದಲ್ಲಿ ಸ್ವದೇಶಿ ಮಾರುಕಟ್ಟೆಗೆ ಬಿಡಲಾಗುವುದು. ಮುಂದಿನ ದಿನಗಳಲ್ಲಿ ರೇಡಿಯಲ್ ಒಟಿಆರ್ ಟೈರ್ ತಯಾರಿಸಲು ಯೋಜನೆ ರೂಪಿಸಲಾಗಿದೆ’ ಎಂದರು.
ಘಟಕದ ಉಪಾಧ್ಯಕ್ಷ (ತಯಾರಿಕಾ ವಿಭಾಗ) ಜಿ.ರಾಜಗೋಪಾಲಯ್ಯ, ಒಟಿಆರ್ ಘಟಕದ ಪ್ರಧಾನ ವ್ಯವಸ್ಥಾಪಕ ಸಂತೋಷ್ ಮೆನನ್, ಸಹಾಯಕ ಪ್ರಧಾನ ವ್ಯವಸ್ಥಾಪಕ ಸಾಲಿ ಉಪ್ಪಿನಂಗಡಿ ಹಾಗೂ ಇತರ ಅಧಿಕಾರಿಗಳು ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.