`ನಾನ್ಸೆನ್ಸ್. ಈ ಮಹಿಳಾವಾದಿಗಳನ್ನ ಗುಂಡಿಕ್ಕಿ ಕೊಲ್ಲಬೇಕು ಕಣ್ರೀ. ಸ್ತ್ರೀ ಸ್ವಾತಂತ್ರ್ಯ ಅಂತ ಹೋರಾಟ ಮಾಡುವ ಇವರ ವೈಯಕ್ತಿಕ ಬದುಕೆಲ್ಲಾ ಗಬ್ಬು ನಾರುತ್ತಿರುತ್ತೆ. ಅಷ್ಟಕ್ಕೂ ಮಹಿಳೆಗೆ ಸ್ವಾತಂತ್ರ್ಯ ಯಾಕ್ರೀ ಬೇಕು...?~ ಹೀಗೆ ಸಾಗಿತ್ತು ಅವರ ಚರ್ಚೆ.

ಏನು ಮಾತನಾಡಿದರೂ ಅವರ ಚರ್ಚೆ ಮತ್ತೆಮತ್ತೆ ಮಹಿಳಾಮಣಿಗಳತ್ತಲೇ ಗಿರಕಿ ಹೊಡೆಯುತ್ತಿತ್ತು. ~ಈ ಹುಡುಗಿಯರೇ ಹೀಗೆ ಕಣ್ರೀ. ಮದುವೆ ಆದ ತಕ್ಷಣ ಬರೀ ಮನೆಮುರುಕ ಕೆಲಸಗಳನ್ನೇ ಮಾಡ್ತಾರೆ.

ಕೆಲಸ ಅಂತಾ ಗಂಡ-ಮಕ್ಕಳನ್ನ ಕ್ಯಾರೇ ಅನ್ನೋದಿಲ್ಲ... ಅವಳಿದ್ದಾಳಲ್ಲ, ಆಕೆಗೆ ಅವಳು ಹೇಳಿದಂತೆ ಕೇಳುವ ಗಂಡ ಸಿಕ್ಕರೆ ಸರಿ. ಇಲ್ಲದಿದ್ದರೆ ತುಂಬಾ ಕಷ್ಟ... ಅವಳ ಸೊಕ್ಕನ್ನ ಮುರಿಯುವವನು ಸಿಗ್ಬೇಕು ಕಣ್ರೀ...ಆಗ ಮಜಾ ಇರುತ್ತೆ!~

-ಹಾಗಂತ ಮಾತಾಡಿದವರು ಅನಕ್ಷರಸ್ಥರಲ್ಲ. ಡಬ್ಬಲ್ ಡಿಗ್ರಿ ಪಡೆದು ಪ್ರತಿಷ್ಠಿತ ಸಂಸ್ಥೆಯೊಂದರಲ್ಲಿ ಉನ್ನತ ಹುದ್ದೆಯಲ್ಲಿದ್ದವರು. ಇಷ್ಟೆಲ್ಲವನ್ನೂ ಅವರು ಮಾತನಾಡಿದ್ದು ಮಹಿಳೆಯರ ಮುಂದೆಯೇ!. ಎದುರಿಗಿದ್ದವರು ಇವರ ಮಾತಿಗೆ ಯಾವುದೇ ಪ್ರತಿಕ್ರಿಯೆ ತೋರದಿದ್ದಾಗ ಅವರ ಚಿತ್ತ ಎಂದಿನಂತೆ ಕುಡಿತದತ್ತ ಕೇಂದ್ರೀಕೃತ.

ಪುರುಷ ಪ್ರಧಾನ ಸಮಾಜದಲ್ಲಿ ಹೆಣ್ಣಿಗೆ ಸಮಾನತೆ ಅನ್ನೋದು ಇನ್ನೂ ಮರೀಚಿಕೆಯೇ? ಮನೆಯಿಂದ ಹಿಡಿದು ಕಚೇರಿ ಕೆಲಸಗಳವರೆಗೆ ಎಲ್ಲದಕ್ಕೂ ಆಕೆಯೇ ಹೊಂದಿಕೊಳ್ಳಬೇಕು.

`ನೀನು ಹೆಣ್ಣು ತಗ್ಗಿ-ಬಗ್ಗಿ ನಡೀಬೇಕು, ಗಂಡಸರ ವಿರೋಧ ಕಟ್ಟಿಕೊಂಡರೆ ಈ ಆಫೀಸಲ್ಲಿ ಉಳಿಯೋಕ್ಕಾಗಲ್ಲ ಕಣಮ್ಮಾ...~ ಅನ್ನೋದಿಂದ್ರ ಹಿಡಿದು ~ಹೆಣ್ಣು ಮಕ್ಕಳು ಸಾಫ್ಟ್ ಆಗಿ ಸ್ವೀಟಾಗಿ ಮಾತಾಡ್ಬೇಕು ಮೇಡಂ~ ಅನ್ನೋ ತನಕ ಎಲ್ಲವೂ ಅವನ ಮರ್ಜಿಯಂತೆ ನಡೆಯಬೇಕು ~ನೀನು ಏನೇ ಲಾಗ ಹಾಕಿದ್ರೂ, ನಮ್ಮ ತರ ಮಧ್ಯರಾತ್ರಿ ಓಡಾಡೋಕೆ ಆಗುತ್ತಾ? ಊರಿಗೆ ಬಂದವಳು ನೀರಿಗೆ ಬಾರದಿರುತ್ತಾಳೆಯೇ?~, `ನಾನು ಗಂಡಸು, ಎಷ್ಟೇ ಆದ್ರೂ ನೀನು ಹೆಣ್ಣು. ನಮ್ಮ ಸಮ ಬೆಳೆಯೋಕೆ ಆಗಲ್ಲಮ್ಮ. ಸುಮ್ನೇ ಅಡ್ಜಸ್ಟ್ ಮಾಡ್ಕೊ.

ಇಲ್ಲಾಂದ್ರೆ ನೀನು ಸರಿ ಇಲ್ಲ ಅಂತ ತಲೆಗೊಬ್ರು ಮಾತಾಡೋ ಹಂಗೆ ಮಾಡ್ತೀನಿ ಅಷ್ಟೇ...~ ಅನ್ನುವ ಅವನ ಮಾತಿಗೆ ನೀವು ಹೀಗೆ ಮಾತಾಡೋದು ಸರೀನಾ ಅಂತಾ ಪ್ರಶ್ನಿಸಬೇಕೆಂದು ನಾಲಗೆ ತುದೀವರೆಗೂ ಬಂದರೂ ಮುಂದಿನ ಪರಿಣಾಮ ಊಹಿಸಿ ಎಂದಿನಂತೆ ಮೌನಕ್ಕೆ ಶರಣಾಗಬೇಕಾದ ಅನಿವಾರ್ಯತೆ ಆಕೆಯದು.

ಕೆಲವರಿಗೆ ಮತ್ತೊಬ್ಬರ ಅದರಲ್ಲೂ ಹೆಣ್ಣುಮಕ್ಕಳ ವೈಯಕ್ತಿಕ ವಿಚಾರದಲ್ಲಿ ಮೂಗು ತೂರಿಸೋದು ಅಂದ್ರೆ ಎಲ್ಲಿಲ್ಲದ ಆನಂದ. ಅದರಲ್ಲೂ ಮದುವೆಯಾಗದ ಹದಿಹರೆಯದ ಹುಡುಗಿಯೊಬ್ಬಳು ಪರಿಚಯವಿದ್ದರೆ ಮುಗೀತು.

ಆಕೆ ತೊಡುವ ಉಡುಪಿನಿಂದ ಹಿಡಿದು ಆಕೆಗೆ ಬರುವ ಫೋನ್ ಕರೆಯವರೆಗೆ ಇವರಿಗೆ ಎಲ್ಲಿಲ್ಲದ ಕುತೂಹಲ. ಆಕೆಯ ಪ್ರತಿ ನಡೆಯ ಮೇಲೂ ಹದ್ದಿನಕಣ್ಣು. ತನ್ನ ಭಾವನೆಗಳಿಗೆ ಸ್ಪಂದಿಸುವರೊಂದಿಗೆ ಬೈಟು ಟೀ ಕುಡಿದರೂ `ಆಕೆ ಹಾಗಂತೆ, ಹೀಗಂತೆ ಕಣೋ.

ನಮ್ಮಲ್ಲಿ ಇಲ್ಲದ್ದು ಅವನಲ್ಲಿ ಏನು ಸ್ಪೆಷಲ್ ಇದೆಯಮ್ಮಾ? ನಮಗೂ ಒಂದು ಚಾನ್ಸ್ ಕೊಡಿ ಮೇಡಂ...~ ಹೀಗೆನ್ನುವ ಅವನ ಮಾತಿಗೆ ಆಕೆ ಜಗ್ಗದಿದ್ದರೆ `ಎಷ್ಟು ಸೊಕ್ಕು ಆ ಹುಡುಗಿಗೆ, ದುಡಿತೀನಿ ಅನ್ನೋ ಅಹಂಕಾರ ಹೀಗೆ ಮಾಡಿಸುತ್ತೆ...~ ಎನ್ನುವ ಪರಿಸರದಲ್ಲಿ ಆಕೆಯಿಂದ ಸಣ್ಣ ತಪ್ಪಾದರೂ ಸಾಕು, ಇಡೀ ಪ್ರಪಂಚವೇ ಅಲ್ಲೋಲ-ಕಲ್ಲೋಲವಾದಂತೆ ವರ್ತನೆ. ~ಮೇಡಂ, ನೀವು ಯಾರನ್ನಾದರೂ ಲವ್ ಮಾಡಿದೀರಾ? ಯಾಕೆ ನಿಮಗಿನ್ನೂ ಮದುವೆಯಾಗಿಲ್ಲ? ಏನಾದ್ರೂ ಲಫಡಾ ಇದೆನಾ?~ ಹೀಗೆ ಆತ ಸುರಿಸುವ ಪ್ರಶ್ನೆಗಳ ಭಾರಕ್ಕೆ ಆಕೆ ತತ್ತರಿಸಿ ಹೋಗದೇ ಇನ್ನೇನು ಮಾಡಿಯಾಳು?
~ನಾನು ಹಾಗೇ ನಾನು ಹೀಗೆ.

ಅಂಥಾ ಹಿನ್ನೆಲೆಯಿಂದ ಬಂದವನು. ಹೆಣ್ಣುಮಕ್ಕಳ ಮೇಲೆ ನನಗೆ ವಿಪರೀತ ಗೌರವ ಅನ್ನುತ್ತಲೇ, ಆ ಹುಡುಗಿ ಸ್ವಲ್ಪ ಒರಟು ಅಲ್ವಾ? ಎಲ್ಲವನ್ನೂ ನೇರವಾಗೇ ಹೇಳ್ತಾಳೆ. ಒಂಚೂರು ನಯ-ನಾಜೂಕು ಇಲ್ಲ. ಎಲ್ಲ ಗಂಡಸರಂತೆ ಮಾಡ್ತಾಳೆ. ನೋಡ್ತಾ ಇರಿ ಅವಳ ಸೊಕ್ಕನ್ನು ಹೇಗೆ ಮುರೀತೀನಿ ಅಂತಾ....?~ ಹೀಗೆ ಸಾಗುತ್ತಲೇ ಹೋಗುತ್ತದೆ ಹೆಣ್ಣಿನ ಮೇಲಿನ ಅವನ ಸಣ್ಣತನ.

ಅವನ ಕೊರಳಪಟ್ಟಿ ಹಿಡಿದು ~ನಿನ್ನನ್ನು ಹೆತ್ತ ತಾಯಿ ಹೆಣ್ಣಲ್ವಾ? ನಿನಗೆ ಹೆಂಡತಿಯಾಗಿ, ಮಗಳಾಗಿ, ಅಕ್ಕನಾಗಿ, ತಂಗಿಯಾಗಿ... ಬದುಕಿನ ಎ್ಲ್ಲಲಾ ಹಂತಗಳಲ್ಲೂ ನಿನ್ನ ಜತೆ ನಡೆದವಳು ಹೆಣ್ಣಲ್ವಾ? ಆದ್ರೂ ಯಾಕೆ ಹೀಗೆ ಮಾತಾಡ್ತೀರಿ?~ ಅಂತ ಪ್ರಶ್ನಿಸಬೇಕೆನ್ನುವ ಅವಳ ಗಂಟಲಿನಿಂದ ದನಿ ಹೊರಗೆ ಬಾರದೇ ಅಲ್ಲೇ ಉಳಿಯುತ್ತೆ.

ಹೊರಗೆ ಬರೋದು ಅವಳ ಕಣ್ಣೀರೊಂದೇ. ಅದೂ ಕೂಡಾ ~ಮೌನ~ವಾಗಿ ಬಾತ್ರೂಂನಲ್ಲಿ. ಅಷ್ಟಕ್ಕೂ ಹೆಣ್ಣಿಗೆ ~ಮೌನವೇ ಆಭರಣ~ ಅಂತ ಸಮಾಜ ಉಚಿತವಾಗಿ ಕಿರೀಟ ಕೊಟ್ಟಿದೆಯಲ್ವಾ?!

ಹಾಗಂತ ಎಲ್ಲಾ ಗಂಡಸರು ಕೆಟ್ಟವರಾ? ಇಲ್ಲವಲ್ಲ. ಆದರೂ, ಯಾಕೆ ಕೆಲ ಗಂಡಸರು ಹೀಗೆ ವರ್ತಿಸ್ತಾರೆ? ಹೀಗೆ ಮತ್ತೆಮತ್ತೆ ಎದುರಾಗುವ ಪ್ರಶ್ನೆಗೆ ಆಕೆ ಇನ್ನೂ ಉತ್ತರ ಹುಡುಕುತ್ತಲೇ ಇದ್ದಾಳೆ.

ಹೆಣ್ಣುಮಕ್ಕಳು ಅಂದ್ರೆ ಅಷ್ಟು ಚೀಪಾ? ಕುಟುಂಬದ ಜವಾಬ್ದಾರಿ ಹೆಂಗಸರಷ್ಟೇ ಹೊರಬೇಕಾ? ಗಂಡಸು ಹೇಳಿದಂತೆ ಕೇಳಿದ್ರೆ ಮಾತ್ರ ಆಕೆ ಸದ್ ಗೃಹಸ್ಥೆ, ಒಳ್ಳೆಯವಳಾ? ಅವನ ಮರ್ಜಿಯಂತೆ ನಡೆದರೆ ಮಾತ್ರ ಆಕೆ ಒಳ್ಳೆಯ ನಡತೆಯುಳ್ಳವಳಾ? ಅವನ ಇಚ್ಛೆಯಂತೆ ಸಿಂಗರಿಸಿಕೊಂಡು, ಸದಾ ಕೋಮಲಕಂಠದಲ್ಲಿ ಉಲಿದರೆ, ಎಲ್ಲವೂ ನಿನ್ನಿಂದಲೇ ಎಂದು ಅವನನ್ನೇ ಅವಲಂಬಿಸಿದರೆ ಮಾತ್ರ ಆಕೆ ಬದುಕಬಲ್ಲಳೇ? ಅವಳಿಗೆ ಸ್ವಂತ ವ್ಯಕ್ತಿತ್ವ ಇಲ್ವೇ?... ಹೀಗೆ ಅವಳೊಳಗೆ ಸುರಿಯುವ ಪ್ರಶ್ನೆಗಳ ಮಳೆಗೆ ನಿಜಕ್ಕೂ ಉತ್ತರ ಸಿಗುತ್ತಾ? ಛೇ ಮತ್ತದೇ ಪ್ರಶ್ನೆ!

ಪುರುಷ ಪ್ರಧಾನ ಸಮಾಜದಲ್ಲಿ ಹೆಣ್ಣಿಗೆ ಸಮಾನತೆ ಅನ್ನೋದು ಇನ್ನೂ ಮರೀಚಿಕೆಯೇ? ಎಲ್ಲದಕ್ಕೂ ಆಕೆಯೇ ಹೊಂದಿಕೊಳ್ಳಬೇಕೆ? `ಮೌನವೇ ಆಭರಣ~ವೆಂಬ ಮೌಲ್ಯ ಮಹಿಳೆಗೆ ಮಾತ್ರವೇ ಏಕೆ?

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.