ನವದೆಹಲಿ: ನೆದರ್ಲೆಂಡ್ಸ್ ವಿರುದ್ಧ ಬೆಂಗಳೂರಿನಲ್ಲಿ ಮುಂದಿನ ವರ್ಷದ ಫೆಬ್ರುವರಿಯಲ್ಲಿ ನಡೆಯಲಿರುವ ಡೇವಿಸ್ ಕಪ್ ಮೊದಲ ಸುತ್ತಿನ ಕ್ವಾಲಿಫೈಯರ್ಸ್ ಪಂದ್ಯಕ್ಕೆ ಎಐಟಿಎ ಆಯ್ಕೆ ಸಮಿತಿ ಶ್ರೀರಾಮ್ ಬಾಲಾಜಿ ಅವರನ್ನು ಕೈಬಿಟ್ಟಿದೆ. ಉಳಿದ ಆಟಗಾರರು ಸ್ಥಾನ ಉಳಿಸಿಕೊಂಡಿದ್ದಾರೆ.

ಈ ಪಂದ್ಯ ಫೆಬ್ರುವರಿ 7 ಮತ್ತು 8 ರಂದು ನಡೆಯಲಿದೆ. ಸುಮೀತ್ ನಾಗಲ್ ಅವರು ಸಿಂಗಲ್ಸ್ನಲ್ಲಿ ಭಾರತದ ಸವಾಲನ್ನು ಮುನ್ನಡೆಸಲಿದ್ದಾರೆ. ತಂಡದಲ್ಲಿ ಡಬಲ್ಸ್ ಪರಿಣತರಾದ ದಕ್ಷಿಣೇಶ್ವರ ಸುರೇಶ್ ಮತ್ತು ಕರಣ್ ಸಿಂಗ್ ಇದ್ದಾರೆ.

ಅನುಭವಿ ಡಬಲ್ಸ್ ಆಟಗಾರ ಬಾಲಾಜಿ ಸ್ಥಾನ ಕಳೆದುಕೊಂಡಿದ್ದಾರೆ. ದೀರ್ಘಾವಧಿ ಯೋಜನೆಯ ಭಾಗವಾಗಿ ಆಯ್ಕೆಸಮಿತಿ ಅವರನ್ನು ಕೈಬಿಟ್ಟಿದೆ. ಹೀಗಾಗಿ ಡಬಲ್ಸ್ನಲ್ಲಿ ಯುಕಿ ಜೊತೆ ರಿತ್ವಿಕ್ ಬೊಲ್ಲಿಪಳ್ಳಿ ಆಡುವ ಸಾಧ್ಯತೆಯಿದೆ.

‘ಯುವ ಆಟಗಾರರ ಮೇಲೆ ತಂಡ ಹೆಚ್ಚಿನ ನಿರೀಕ್ಷೆಯಿಟ್ಟುಕೊಂಡು ಈ ನಿರ್ಧಾರಕ್ಕೆ ಬಂದಿದೆ’ ಎಂದು ಭಾರತ ತಂಡದ ನಾಯಕ ರೋಹಿತ್ ರಾಜಪಾಲ್ ತಿಳಿಸಿದರು.

ಕರ್ನಾಟಕದವರೇ ಆದ ಪ್ರಜ್ವಲ್ ದೇವ್ ಜೊತೆಗೆ ಆರ್ಣವ್ ಪಪರ್ಕರ್ ಅವರನ್ನು ಅಭ್ಯಾಸಕ್ಕೆ ನೆರವಾಗಲು ತರಬೇತಿ ಶಿಬಿರಕ್ಕೆ ಕರೆಸಿಕೊಳ್ಳಲಾಗುತ್ತಿದೆ.

ತಂಡ ಇಂತಿದೆ:

ಸುಮೀತ್ ನಾಗಲ್, ದಕ್ಷಿಣೇಶ್ವರ್ ಸುರೇಶ್, ಕರಣ್ ಸಿಂಗ್, ಯುಕಿ ಭಾಂಬ್ರಿ ಮತ್ತು ರಿತ್ವಿಕ್ ಬೊಲ್ಲಿಪಳ್ಳಿ. ಮೀಸಲು ಆಟಗಾರರು: ಆರ್ಯನ್ ಶಾ, ಅನಿರುದ್ಧ ಚಂದ್ರಶೇಖರ್ ಮತ್ತು ದಿಗ್ವಿಜಯ ಸಿಂಗ್.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.