ನವದೆಹಲಿ: ಭಾರತ ತಂಡವು ಗುರುವಾರದ ಪಂದ್ಯದಲ್ಲಿ ನಮಿಬಿಯಾ ವಿರುದ್ಧ ಆಡುತ್ತಿದ್ದು, ಟಾಸ್ ಗೆದ್ದ ನಮಿಬಿಯಾ ಬೌಲಿಂಗ್ ಆಯ್ಕೆ ಮಾಡಿಕೊಂಡಿದೆ.

ಅಭಿಷೇಕ್ ಶರ್ಮಾ ಅವರ ಅನಾರೋಗ್ಯದ ಕಾರಣ ಸಂಜು ಸ್ಯಾಮ್ಸನ್ ಸ್ಥಾನ ಪಡೆದಿದ್ದಾರೆ. ಜಸ್ಪ್ರೀತ್ ಬೂಮ್ರಾ ತಂಡಕ್ಕೆ ಮರಳಿದ್ದು ಮೊಹಮ್ಮದ್ ಸಿರಾಜ್ ಅವರನ್ನು ಕೈಬಿಡಲಾಗಿದೆ.

ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ಪಂದ್ಯ ನಡೆಯುತ್ತಿದೆ. ಇಲ್ಲಿ ರಾತ್ರಿಯ ಹೊತ್ತು ಇಬ್ಬನಿ ಸುರಿಯುವ ನಿರೀಕ್ಷೆ ಇದೆ.

ನಮಿಬಿಯಾದ ಆಲ್ರೌಂಡರ್ ಜೆಜೆ ಸ್ಮಿತ್ ಅವರು 140ರ ಸ್ಟ್ರೈಕ್ರೇಟ್ ಹೊಂದಿದ್ದಾರೆ. ಉಳಿದ ಐವರು ಅಗ್ರಕ್ರಮಾಂಕದ ಬ್ಯಾಟರ್ಗಳು ಇದಕ್ಕಿಂತ ಕಡಿಮೆ ಸ್ಟ್ರೈಕ್ರೇಟ್ ಹೊಂದಿದ್ದಾರೆ.

ಟಿ20 ವಿಶ್ವಕಪ್ ಟೂರ್ನಿಯ ಮೊದಲ ಪಂದ್ಯದಲ್ಲಿ ಅಮೆರಿಕ ಎದುರು ಅಗ್ರ ಕ್ರಮಾಂಕದ ಬ್ಯಾಟರ್ಗಳು ಎಡವಿದ್ದರು. ಸೂರ್ಯ ಏಕಾಂಗಿ ಹೋರಾಟದಿಂದಾಗಿ ಗೆಲುವು ಸಾಧ್ಯವಾಗಿತ್ತು. ಇದೇ 15ರಂದು ಕೊಲಂಬೊದಲ್ಲಿ ಪಾಕಿಸ್ತಾನ ಎದುರು ಪಂದ್ಯ ನಡೆಯಲಿದೆ.

ಪ್ರಸಕ್ತ ಟೂರ್ನಿಯಲ್ಲಿ ಉಭಯ ತಂಡಗಳೂ ತಲಾ ಒಂದು ಪಂದ್ಯ ಆಡಿವೆ. ಭಾರತ ತಂಡವು ಅಮೆರಿಕ ವಿರುದ್ಧ ಜಯಿಸಿದೆ. ಆದರೆ ನಮಿಬಿಯಾ ನೆದರ್ಲೆಂಡ್ಸ್ ವಿರುದ್ಧ ಪರಾಭವಗೊಂಡಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.