ಮಂಗಳವಾರ, ಜೂನ್ 15, 2021
26 °C

ಮೌನವೋ ಅಥವಾ ಖಾಲಿತನವೋ?

– ಅಯ್ಯಪ್ಪ ಹೂಗಾರ್,ಮೈಸೂರು Updated:

ಅಕ್ಷರ ಗಾತ್ರ : | |

‘ಪ್ರಜಾವಾಣಿ’ಯಲ್ಲಿ ಗುರುವಾರದ ಸಂಚಿಕೆ­ಯಲ್ಲಿ ಪ್ರಕಟವಾಗಿರುವ  ಕ್ಯಾಪ್ಟನ್ ಗೋಪಿ­ನಾಥ್ ಅವರ ‘ಆರ್ಥಿಕ ನೀತಿ: ಕೇಜ್ರಿವಾಲ್ ಮೌನ ಸರಿಯಲ್ಲ’ ಸಮಯೋಚಿತವಾಗಿದೆ.ಆರ್ಥಿಕ ನೀತಿಗಳ ಕುರಿತು ‘-ಆಮ್ ಆದ್ಮಿ’ ಪಕ್ಷದ ನಿಲುವುಗಳಲ್ಲಿ- ಗೊಂದಲಗಳಿರುವು­ದರಿಂದ   ಕೇಜ್ರಿವಾಲ್ ಅವರನ್ನು ಒಳಗೊಂ­ಡಂತೆ ಅದರ ಯಾವ ನಾಯಕರೂ ತಮ್ಮ ಪಕ್ಷದ ಆರ್ಥಿಕ ನೀತಿಗಳನ್ನು ಸ್ಪಷ್ಟವಾಗಿ ವ್ಯಕ್ತಪಡಿಸಲು ಸಾಧ್ಯವಾಗುತ್ತಿಲ್ಲ.ಎಎಪಿಯು ಭ್ರಷ್ಟಾಚಾರದ ಮೂಲವನ್ನು ಸರಿಯಾಗಿ ಗುರುತಿಸದೇ ಹೋಗುತ್ತಿರುವುದು ಅದನ್ನು ಮರೆಮಾಚಲೆತ್ನಿಸುವುದಕ್ಕೆ ಸಮನಾ ದದ್ದು. ಉದಾರೀಕರಣ ನೀತಿಗಳ ಅನುಷ್ಠಾನದ ಫಲವಾಗಿಯೇ ನಮ್ಮ ದೇಶದಲ್ಲಿ ಈ ಮಟ್ಟದ ಭ್ರಷ್ಟಾಚಾರವು ಮೈದಳೆದು ನಿಲ್ಲಲು ಕಾರಣ ಎಂಬುದು ಬುದ್ಧಿವಂತ ಕೇಜ್ರಿವಾಲ್ ಮತ್ತವರ ಸಂಗಾತಿಗಳಿಗೆ ತಿಳಿಯದ ವಿಷಯವೆ?ಆರ್ಥಿಕತೆಯಲ್ಲಿ ಖಾಸಗಿ ಉದ್ಯಮದ ಬಲಾಢ್ಯತೆಯನ್ನು ಒಪ್ಪುವುದೆಂದರೆ-ವಾಸ್ತವದಲ್ಲಿ ಸರ್ಕಾರವನ್ನು ಅದರ ಮುಂದೆ ಮಂಡಿಯೂರಿಸುವುದೆಂದೇ ಅರ್ಥ.ಕೇಜ್ರಿವಾಲ್‌ರು ‘ಬಲಾಢ್ಯ ಖಾಸಗಿ ಕ್ಷೇತ್ರವೂ ಬೇಕು ಮತ್ತು ಸರ್ಕಾರವೂ ಬಲಾಢ್ಯವಾ­ಗಿರಬೇಕು’ ಎಂದು ಹೇಳುವುದು ಒಂದೋ ‘ಮುಗ್ಧ ಆಶಯ’ ಇಲ್ಲವೇ ‘ಸತ್ಯವನ್ನು ಮರೆಮಾಚುವ ಅತಿ ಜಾಣತನದ ಮೋಸ’ವಷ್ಟೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.