ಭಾನುವಾರ, ಏಪ್ರಿಲ್ 11, 2021
28 °C

ಯಮಹಾ ಶೀಘ್ರ ವಿದ್ಯುತ್ ಚಾಲಿತ ಬೈಕ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ (ಪಿಟಿಐ): ಜಪಾನ್ ಮೂಲದ ವಾಹನ ತಯಾರಿಕಾ ಕಂಪೆನಿ ‘ಯಮಹಾ’ ಶೀಘ್ರದಲ್ಲಿಯೇ ಭಾರತೀಯ ಮಾರುಕಟ್ಟೆಗೆ ಎರಡು ಹೊಸ ವಿದ್ಯುತ್ ಚಾಲಿತ ದ್ವಿಚಕ್ರವಾಹನಗಳನ್ನು ಬಿಡುಗಡೆ ಮಾಡಲಿದೆ.  ‘ಯಮಹಾ ಇಂಡಿಯಾ ಮೋಟಾರ್’ ವಿದ್ಯುತ್ ಚಾಲಿತ ದ್ವಿಚಕ್ರವಾಹನವನ್ನು ಅಭಿವೃದ್ಧಿಪಡಿಸುತ್ತಿದೆ. ‘ತೈಲ ಬೆಲೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಈ ವಿದ್ಯುತ್ ಚಾಲಿತ ವಾಹನಗಳು ಗ್ರಾಹಕರಿಗೆ ಉತ್ತಮ ಆಯ್ಕೆಯಾಗಬಲ್ಲದು’ ಎಂದು ಯಮಹಾ ಕಂಪೆನಿಯ ಭಾರತೀಯ ನಿರ್ದೇಶಕ ಜುನ್ ನಕಾಟ ಹೇಳಿದ್ದಾರೆ.  ಯೂರೋಪ್ ಮತ್ತು ಜಪಾನ್‌ನಲ್ಲಿ ಈಗಾಗಲೇ ಯಮಹಾ ವಿದ್ಯುತ್ ಬೈಕುಗಳು ಯಶಸ್ವಿಯಾಗಿವೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.