ಸೋಮವಾರ, ಏಪ್ರಿಲ್ 19, 2021
32 °C

ಯುದ್ಧದಲ್ಲಿ ಬಳಸಿದ್ದ ಗನ್ ವಿಜಾಪುರಕ್ಕೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಯುದ್ಧದಲ್ಲಿ ಬಳಸಿದ್ದ ಗನ್ ವಿಜಾಪುರಕ್ಕೆ

ವಿಜಾಪುರ: ಪಾಕಿಸ್ತಾನ ಮತ್ತು ಚೀನಾ ವಿರುದ್ಧದ ಯುದ್ಧದಲ್ಲಿ ಬಳಸಲಾಗಿದ್ದ ಬ್ರಿಟಿಷರ ಕಾಲದ `ಹೌಇಟ್ಜರ್ ಗನ್~ ಅನ್ನು ಇಲ್ಲಿಯ ಸೈನಿಕ ಶಾಲೆಗೆ ತರಲಾಗಿದ್ದು, ಏರ್ ವೈಸ್ ಮಾರ್ಷಲ್ ಎಂ.ಕೆ. ಮಲಿಕ್ ಶುಕ್ರವಾರ ಅದನ್ನು ಅನಾವರಣಗೊಳಿಸಿದರು.`5.5 ಇಂಚು ವ್ಯಾಸದ ಕೊಳವೆ ಇರುವ ಈ ಗನ್ ಅನ್ನು ಬ್ರಿಟಿಷರು 1942ರಲ್ಲಿ ಸೇನೆಗೆ ಸೇರ್ಪಡೆ ಮಾಡಿದ್ದರು. ಇದು ಸೈನಿಕ ಶಾಲೆಯ ವಿದ್ಯಾರ್ಥಿಗಳಿಗೆ ಪ್ರೇರಣೆಯಾಗಲಿದೆ~ ಎಂದು ಅವರು ಹೇಳಿದರು.`ಭಾರತೀಯ ಸೇನಾ ಪಡೆಯು 1947, 48, 1965 ಮತ್ತು 1971ರಲ್ಲಿ ನಡೆದ ಯುದ್ಧಗಳಲ್ಲಿ ಅತ್ಯಂತ ಪ್ರಭಾವಶಾಲಿಯಾಗಿ ಉಪಯೋಗಿಸಿತ್ತು. 1962 ರ ಇಂಡೊ- ಚೀನಾ ಯುದ್ಧದಲ್ಲೂ ಇದನ್ನು ಪ್ರಯೋಗಿಸಲಾಗಿತ್ತು~ ಎಂದು ಸೈನಿಕ ಶಾಲೆಯ ಪ್ರಾಚಾರ್ಯ ಕರ್ನಲ್ ಆರ್. ಬಾಲಾಜಿ ಹೇಳಿದರು.`1948ರಲ್ಲಿ ಹುತಾತ್ಮರಾದ ಮಹಾತ್ಮ ಗಾಂಧೀಜಿ ಅವರ ಚಿತಾಭಸ್ಮವನ್ನು ಸಾಗಿಸಲು ಈ ಗನ್ ವಾಹಕವಾಗಿ ಬಳಕೆಯಾಗಿತ್ತು. ಪಂಜಾಬಿನ ಖೇಮ್‌ಕರಣ ವಿಭಾಗದಲ್ಲಿ ವೈರಿ ಪಡೆಯ ಟ್ಯಾಂಕರ್‌ಗಳನ್ನು ಹೊಡೆದು ಉರುಳಿಸುವಲ್ಲಿ ಹೌಇಟ್ಜರ್ ಗನ್ ತುಂಬಾ ಯಶಸ್ವಿಯಾಗಿದೆ. 1998 ರ ನಂತರ ಈ ಗನ್‌ಗಳ ಉಪಯೋಗ ನಿಲ್ಲಿಸಲಾಗಿದೆ~ ಎಂದು ಅವರು ವಿವರಣೆ ನೀಡಿದರು.ವಿಜಾಪುರ ಸೈನಿಕ ಶಾಲೆಯ ಸ್ಥಳೀಯ ಆಡಳಿತ ಮಂಡಳಿಯ ಅಧ್ಯಕ್ಷರೂ ಆಗಿರುವ ಬೆಂಗಳೂರು ವಾಯುಪಡೆ ಕೇಂದ್ರದ ಏರ್ ವೈಸ್ ಮಾರ್ಷಲ್ ಮಲಿಕ್ ನಂತರ ಸಭೆ ನಡೆಸಿ ಸೈನಿಕ ಶಾಲೆಯ ಆಡಳಿತಾತ್ಮಕ ಹಾಗೂ ಶೈಕ್ಷಣಿಕ ವಿಷಯಗಳ ಬಗ್ಗೆ ಚರ್ಚಿಸಿದರು.ರಾಜ್ಯ ಸರ್ಕಾರದ ಶಿಕ್ಷಣ ಇಲಾಖೆಯ ಉಪ ಕಾರ್ಯದರ್ಶಿ ಪ್ರದೀಪ್ ರಾಜನಾಳ, ಕೊಡಗು ಸೈನಿಕ ಶಾಲೆಯ ಪ್ರಾಚಾರ್ಯ ಎಂ.ಟಿ. ರಮೇಶ, ಜಿಲ್ಲಾಧಿಕಾರಿ ಶಿವಯೋಗಿ ಕಳಸದ, ಸೇನೆಯ ಅಧಿಕಾರಿ ಬಿ.ಸಿ.ಎಸ್. ಭಾರತಿ, ಸೈನಿಕ ಶಾಲೆಯ ಮುಖ್ಯ ಶಿಕ್ಷಕ ಲೆಫ್ಟಿನೆಂಟ್ ಕರ್ನಲ್ ರಿಷಿರಾಜ್ ಸಿಂಗ್, ಕುಲಸಚಿವ ವಿಂಗ್ ಕಮಾಂಡರ್ ಈ. ಶ್ರಿನಿವಾಸ ಇತರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.