ಯುದ್ಧ ವಿಮಾನ ಬೆಂಗಾವಲು...!

ಭಾನುವಾರ, ಮೇ 26, 2019
27 °C

ಯುದ್ಧ ವಿಮಾನ ಬೆಂಗಾವಲು...!

Published:
Updated:

ನ್ಯೂಯಾರ್ಕ್, (ಪಿಟಿಐ): ಭಯೋತ್ಪಾದಕರು ಇರುವ ಎಂಬ ಶಂಕೆ ಯಿಂದ ಅಮೆರಿಕದ ಯುದ್ಧ ವಿಮಾನಗಳ ಬೆಂಗಾವಲಿನಲ್ಲಿ ಎರಡು ನಾಗರಿಕಯಾನ ವಿಮಾನಗಳನ್ನು  ನ್ಯೂಯಾರ್ಕ್‌ನ ಕೆನಡಿ ವಿಮಾನ ನಿಲ್ದಾಣ ಮತ್ತು ಡೆಟ್ರಾಯಿಟ್ ಮೆಟ್ರೊಪಾಲಿಟಿನ್ ವಿಮಾನ ನಿಲ್ದಾಣದಲ್ಲಿ ಇಳಿಸಲಾಯಿತು.ವಿಮಾನದಲ್ಲಿ ಮೂವರು ಸಂಶಯಾಸ್ಪದವಾಗಿ ನಡೆದುಕೊಳ್ಳುತ್ತಿದ್ದರಿಂದ ವಿಮಾನದ ಸಿಬ್ಬಂದಿ ಮುನ್ನೆಚ್ಚರಿಕೆ ಕ್ರಮವಾಗಿ ನಿಯಂತ್ರಣ ಕೇಂದ್ರಕ್ಕೆ ಮಾಹಿತಿ ನೀಡಿದರು. ಕೂಡಲೆ ನ್ಯೂಯಾರ್ಕ್ ಮತ್ತು ಡೆಟ್ರಾಯಿಟ್‌ಗೆ ಹೊರಟಿದ್ದ ಎರಡು ವಿಮಾನಗಳ ಬೆಂಗಾವಲಿಗೆ ಎಫ್-16 ಯುದ್ಧ ವಿಮಾನವನ್ನು ಕಳುಹಿಸಲಾಯಿತು.ಡೆಟ್ರಾಯಿಟ್‌ಗೆ ತೆರಳುತ್ತಿದ್ದ ಫ್ರಾಂಟಿಯರ್ ಏರ್‌ಲೈನ್ಸ್ ಸಂಸ್ಥೆಯ ವಿಮಾನದಲ್ಲಿ ಮೂವರು ಪ್ರಯಾಣಿಕರು ಬಹಳಷ್ಟು ಸಮಯವನ್ನು ಶೌಚಾಲಯದಲ್ಲಿ ಕಳೆದಿದ್ದರಿಂದ ಸಂಶಯಗೊಂಡ ವಿಮಾನದ ಸಿಬ್ಬಂದಿ ನಿಯಂತ್ರಣ ಕಚೇರಿಗೆ ಸುದ್ದಿ ಮುಟ್ಟಿಸಿದರು. ನ್ಯೂಯಾರ್ಕ್‌ಗೆ ಹೊರಟಿದ್ದ ವಿಮಾನಕ್ಕೂ ಎಫ್-16 ಯುದ್ಧ ವಿಮಾನವನ್ನು ಬೆಂಗಾವಲಿಗೆ ಕಳುಹಿಸಲಾಯಿತು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry