ಸೋಮವಾರ, ಮೇ 17, 2021
28 °C

ಯುವತಿಯರಿಬ್ಬರು ಆತ್ಮಹತ್ಯೆಗೆ ಶರಣು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ವಿಜಾಪುರ: ಜೀವನದಲ್ಲಿ ಜಿಗುಪ್ಸೆ ಗೊಂಡು ಯುವತಿಯರಿಬ್ಬರು ಆತ್ಮ ಹತ್ಯೆ ಮಾಡಿಕೊಂಡಿರುವ ಘಟನೆ ಬಸ ವನಬಾಗೇವಾಡಿ ತಾಲ್ಲೂಕಿನಲ್ಲಿ ಸಂಭ ವಿಸಿದೆ.ಸಾತಿಹಾಳ ತಾಂಡಾದಲ್ಲಿ ಯುವತಿ ಯೊಬ್ಬಳು ಆತ್ಮಹತ್ಯೆ ಮಾಡಿಕೊಂಡ ಘಟನೆ ಗುರುವಾರ ನಡೆದಿದೆ.

ಸವಿತಾ ಕಂಟೆಪ್ಪ ಪವಾರ (16) ಎಂಬವರು ಮನೆಯಲ್ಲಿ ಆತ್ಮಹತ್ಯೆಗೆ ಶರಣಾಗಿದ್ದಾರೆ. ಬಸವನ ಬಾಗೇವಾಡಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ಬಾಗೇವಾಡಿ ವರದಿ: ಇಲ್ಲಿನ ತೆಲಗಿ ರಸ್ತೆಯ ಬಸವ ನಗ ರದ ನಿವಾಸಿ ಲಕ್ಷ್ಮೀಬಾಯಿ ಸೀತು ಚವ್ಹಾಣ (20) ಆತ್ಮಹತ್ಯೆ ಮಾಡಿ ಕೊಂಡಿರುವುದಾಗಿ ಪೊಲೀಸರು ತಿಳಿ ಸಿದ್ದಾರೆ.ಶುಕ್ರವಾರ ಬೆಳಿಗ್ಗೆ ಮೈಮೆಲೆ ಸೀಮೆ ಎಣ್ಣೆ ಸುರಿದು ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಸ್ಥಳೀಯ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಬೈಕ್ ಕಳವು

ವಿಜಾಪುರ ನಗರದ ಎಲ್.ಬಿ.ಎಸ್. ಮಾರುಕಟ್ಟೆಯಲ್ಲಿ ನವಭಾಗದ ನಿವಾಸಿ ಅಸ್ಲಂ ಸಲೀಂ ಮೋಮಿನ ಅವರಿಗೆ ಸೇರಿದ ಬಜಾಜ್ ಪಲ್ಸರ್ ಬೈಕ್‌ನ್ನು ಕಳವು ಮಾಡಿದ ಘಟನೆ ಕಳೆದ ಬುಧ ವಾರದಂದು ನಡೆದಿದೆ.

ಸುಮಾರು 37,000 ರೂ. ಮೌಲ್ಯದ ಮೋಟಾರ್ ಸೈಕಲ್ ಕಳ ವಾಗಿದ್ದು, ಇಲ್ಲಿನ  ಮನಿಯಾರ ಉದು ಬತ್ತಿ ಅಂಗಡಿಯ ಮುಂದೆ  ಬೈಕ್ ನಿಲ್ಲಿ ಸಿದ ಸಂದರ್ಭದಲ್ಲಿ ಈ ಘಟನೆ ನಡೆ ದಿದೆ. ಈ ಕುರಿತು ಪ್ರಕರಣ ದಾಖ ಲಿಸಿಕೊಂಡ ಹತ್ತಿರದ ಗಾಂಧಿ ಚೌಕ ಪಲೀಸರು ಬೈಕ್ ಪತ್ತೆಗಾಗಿ  ತನಿಖೆ ನಡೆಸುತ್ತಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.