ಇಳಕಲ್: ಇಳಕಲ್ ನಗರವನ್ನು ವೃತ್ತಿ ರಂಗಭೂಮಿ ಕಲಾವಿದರ ತವರು ಎಂದೇ ಕರೆಯಲಾಗುತ್ತಿದೆ. ಕಳೆದ 30 ವರ್ಷಗಳಿಂದ ಹವ್ಯಾಸಿ ರಂಗ ತಂಡ `ಸ್ನೇಹರಂಗ~ ಹೊಸ ಅಲೆಯ ನಾಟಕಗಳ ಮೂಲಕ ರಾಜ್ಯದಾದ್ಯಂತ ಹೆಸರು ಮಾಡಿದೆ. ಆದರೂ ಒಂದು ಸುಸಜ್ಜಿತ ರಂಗಮಂದಿರ ಇಲ್ಲ ಎಂಬುದು ಇಲ್ಲಿನ ಕಲಾವಿದರ ಕೊರಗು.

ಜಿಲ್ಲೆಯ ಎಲ್ಲ ಜನಪ್ರತಿನಿಧಿಗಳ ನಿರ್ಲಕ್ಷ್ಯದ ಜತೆಗೆ ಕನ್ನಡ ಮತ್ತು ಸಂಸ್ಕೃತಿ ಖಾತೆಯನ್ನೇ ಹೊಂದಿರುವ ಜಿಲ್ಲಾ ಉಸ್ತುವಾರಿ ಸಚಿವ ಗೋವಿಂದ ಕಾರಜೋಳ ಅವರೂ ಈ ಬಗ್ಗೆ ಗಮನಹರಿಸದೇ ಇರುವುದು ರಂಗ ಮಂದಿರದ ಕನಸು ನನಸಾಗದಿರಲು ಕಾರಣ.

ನಮ್ಮ ಜಿಲ್ಲೆಯವರಾಗಿಯೂ, ತಮ್ಮ ಖಾತೆಯ ಸಚಿವರಾಗಿಯೂ ಕೂಡಾ ರಂಗಮಂದಿರ ನಿರ್ಮಾಣಕ್ಕೆ ಆಸಕ್ತಿ ತೋರಿಲ್ಲ. ಏಕೆ ಈ ನಿರ್ಲಕ್ಷ್ಯ ತಿಳಿಯದಾಗಿದೆ ಎನ್ನುತ್ತಾರೆ ಇಲ್ಲಿಯ ರಂಗಭೂಮಿಯ ಕಲಾವಿದರು.

ರಾಜ್ಯಕ್ಕೆ 50 ವರ್ಷ ತುಂಬಿದ ಸಂದರ್ಭದಲ್ಲಿ ಸುವರ್ಣ ಕರ್ನಾಟಕ ಯೋಜನೆಯಡಿ ಸರಕಾರ ಇಳಕಲ್ ಸೇರಿದಂತೆ ರಾಜ್ಯದ 8 ಸ್ಥಳಗಳಲ್ಲಿ ಸುವರ್ಣ ರಂಗಮಂದಿರ ನಿರ್ಮಿಸಲು 25 ಲಕ್ಷ ರೂಪಾಯಿ ಅನುದಾನ ಬಿಡುಗಡೆ ಮಾಡಿತ್ತು. ಉಳಿದೆಲ್ಲಾ ಸ್ಥಳಗಳಲ್ಲಿ ರಂಗಮಂದಿರಗಳು ನಿರ್ಮಾಣಗೊಂಡು, ಲೋಕಾರ್ಪಣೆ ಗೊಂಡಿವೆ. ಆದರೆ ಕನ್ನಡ ಮತ್ತು ಸಂಸ್ಕೃತಿ ಸಚಿವರ ತವರು ಜಿಲ್ಲೆಯಲ್ಲಿ ಇನ್ನೂ ಆರಂಭವೇ ಆಗಿಲ್ಲ.

2007ರಲ್ಲಿ ಅಂದಿನ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಹಾಗೂ ಉಪ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ರಂಗಮಂದಿರದ ಶಂಕುಸ್ಥಾಪನೆ ನೆರವೇರಿಸಿದ್ದರು. ಸಚಿವ ಗೋವಿಂದ ಕಾರಜೋಳ ಅವರು ಉಪಸ್ಥಿತರಿದ್ದರು. ಆದರೆ ಇದುವರೆಗೆ ರಂಗಮಂದಿರದ ಪ್ರಗತಿಯ ಬಗ್ಗೆ ವಿಚಾರಿಸುವ ಗೋಜಿಗೆ ಹೋಗಿಲ್ಲ. ಬಿಡುಗಡೆಯಾದ 25 ಲಕ್ಷ ರೂಪಾಯಿ ಜಿಲ್ಲಾಧಿಕಾರಿಗಳ ಖಾತೆಯಲ್ಲಿ ಕೊಳೆಯುತ್ತಿದೆ. ರಂಗಮಂದಿರ ನಿರ್ಮಿಸಲು ನಗರಸಭೆಯು ಕನ್ನಡ ಮತ್ತು ಸಂಸ್ಕೃತಿ ಇಲಾಖೆಗೆ 2008ರಲ್ಲಿಯೇ ನಿವೇಶನ ನೀಡಿದೆ. ಹಳೆ ರಂಗಮಂದಿರ ಇರುವುದೇ ನೂತನ ರಂಗಮಂದಿರ ಕಟ್ಟಲು ಇರುವ ತಾಂತ್ರಿಕ ಸಮಸ್ಯೆ ಎಂದು ಹೇಳುತ್ತಾ ಬಂದಿದ್ದಾರೆ.

ಕವಿ ರನ್ನನ ಸ್ಮರಣೆಗಾಗಿ, ಮುಧೋಳದ ಪಾರಿಜಾತ ಕಲಾವಿದರಿಗಾಗಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಮೂಲಕ ಕಾರಜೋಳ ಅವರು ಮಾಡಿದ ಕೆಲಸದ ಒಂದಂಶದಷ್ಟಾದರೂ ಇತ್ತ ಗಮನ ಹರಿಸಿದರೆ ರಂಗಮಂದಿರ ನಿರ್ಮಾಣ ವಾಗುತ್ತದೆ ಎಂದು ಕ.ಸಾ.ಪ ಜಿಲ್ಲಾ ಘಟಕದ ಮಾಜಿ ಅಧ್ಯಕ್ಷ ವಿ.ಕೆ.ವಂಶಾಕೃತಮಠ ಹಾಗೂ ರಂಗಕರ್ಮಿ ಮಹಾಂತೇಶ ಗಜೇಂದ್ರಗಡ ಹೇಳುತ್ತಾರೆ.

ಕೇವಲ 25 ಲಕ್ಷ ರೂಪಾಯಿಗಳಲ್ಲಿ ಇಂದು ಸುಸಜ್ಜಿತ ರಂಗಮಂದಿರ ನಿರ್ಮಿಸಲು ಸಾಧ್ಯವಾಗುವುದಿಲ್ಲ. ಕನ್ನಡ ಮತ್ತು ಸಂಸ್ಕೃತಿ ಖಾತೆಯಿಂದ ಇನ್ನೂ 75 ಲಕ್ಷ ಬಿಡುಗಡೆ ಮಾಡಿ, ಒಟ್ಟು ಒಂದು ಕೋಟಿ ವೆಚ್ಚದಲ್ಲಿ ಸುಸಜ್ಜಿತ ರಂಗಮಂದಿರ ನಿರ್ಮಿಸಬೇಕು ಎಂದು ಹಿರಿಯ ಕಲಾವಿದರಾದ ಶಾಂತಮ್ಮ ಪತ್ತಾರ, ಲಕ್ಷ್ಮೀಬಾಯಿ ಬಾರೀಗಿಡದ, ವೃತ್ತಿ ರಂಗಭೂಮಿ ಕಲಾವಿದರ ಸಂಘದ ಅಧ್ಯಕ್ಷ ರಸೂಲಸಾಬ ಕಂದಗಲ್ಲ, ಸ್ನೇಹರಂಗದ ಅಧ್ಯಕ್ಷ ಪ್ರೊ. ಶಿವಪುತ್ರ ಸಮಾಳದ, ನಾಟ್ಯರಾಣಿ ಕಲಾ ಸಂಘದ ಒಡತಿ ಉಮಾರಾಣಿ ಬಾರೀಗಿಡದ ಒತ್ತಾಯಿಸಿದ್ದಾರೆ.

ಇನ್ನಷ್ಟು ಹೆಚ್ಚಿಗೆ ಅನುದಾನ ಬಿಡುಗಡೆ ಮಾಡಿಸಿ, ಈ ಕಾರ್ಯ ಮಾಡಿಕೊಡಬೇಕು ಎಂದು ಬಸವರಾಜ ಕೋಟಿ, ರಮೇಶ ಚಿತ್ರಗಾರ, ವಿಠ್ಠಲ ಚಿಲ್ಲಾಳ ಕೋರಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.