ಮಂಗಳವಾರ, ಜನವರಿ 21, 2020
27 °C

ರಂಗಮಂದಿರ ನಿರ್ಮಾಣ: ಶ್ಲಾಘನೆ

'ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಯಲಹಂಕ: ಟೆಲಿಕಾಂ ಎಂಪ್ಲಾಯೀಸ್ ಕೋ–ಆಪರೇಟಿವ್ ಹೌಸಿಂಗ್ ಸೊಸೈಟಿ ಹಾಗೂ ಟೆಲಿಕಾಂ ಬಡಾವಣೆ ನಿವಾಸಿ­ಗಳ ಕ್ಷೇಮಾಭಿವೃದ್ಧಿ ಸಂಘದ ಜಂಟಿ ಆಶ್ರಯದಲ್ಲಿ ಶ್ರೀರಾಮಪುರ ಸಮೀಪದ ಟೆಲಿಕಾಂ ಬಡಾವಣೆಯಲ್ಲಿ ನಡೆದ ನೂತನ ರಂಗಮಂದಿರ ಗುದ್ದಲಿ ಪೂಜೆ  ಹಾಗೂ ಸಂಘದ 6ನೇ ವಾರ್ಷಿಕೋತ್ಸವ ಸಮಾರಂಭವನ್ನು ಕೃಷಿ ಸಚಿವ ಕೃಷ್ಣಬೈರೇಗೌಡ ಉದ್ಘಾಟಿಸಿದರು.ನಂತರ  ಮಾತನಾಡಿದ ಅವರು, ₨1 ಕೋಟಿ ವೆಚ್ಚದಲ್ಲಿ ನೂತನ ರಂಗ­ಮಂದಿರ­ವನ್ನು ನಿರ್ಮಾಣ ಮಾಡುವ ಮೂಲಕ ಬಡಾವಣೆಯ ನಿವಾಸಿಗಳಿಗೆ ಮನರಂಜನೆ ಒದಗಿಸಲು ಮುಂದಾಗಿರು­ವುದು ಶ್ಲಾಘನೀಯ ಎಂದರು.ರಂಗಭೂಮಿ ಕಲಾವಿದ ಮಾ.ಹಿರಣ್ಣಯ್ಯ, ಒಬ್ಬ ವ್ಯಕ್ತಿಯು ಆತ್ಮಸ್ಥೈರ್ಯವನ್ನು ಬೆಳೆಸಿಕೊಳ್ಳಲು ರಂಗಭೂಮಿ ನೆರವಾಗುತ್ತದೆ. ಅಲ್ಲದೆ ರಂಗಭೂಮಿಯಿಂದ ವೈಯಕ್ತಿಕ ಬೆಳವಣಿಗೆಯೊಂದಿಗೆ ಸಮಾಜದ ಓರೆ ಕೋರೆಗಳನ್ನು ತಿದ್ದಲು ಸಾಧ್ಯವಾಗುತ್ತದೆ ಎಂದು ಹೇಳಿದರು.

ಪ್ರತಿಕ್ರಿಯಿಸಿ (+)