ಮಾಸ್ಕೊ (ಪಿಟಿಐ): ರಷ್ಯದಲ್ಲಿ ಭಾನುವಾರ ನಡೆದ ಅಧ್ಯಕ್ಷೀಯ ಚುನಾವಣೆಯಲ್ಲಿ 59 ವರ್ಷದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಮೂರನೇ ಬಾರಿಗೆ ಅಧ್ಯಕ್ಷರಾಗಿ ಮರು ಆಯ್ಕೆಯಾಗುವ ಸಾಧ್ಯತೆ ಇದೆ.

ಡಿಸೆಂಬರ್ನಲ್ಲಿ ನಡೆದ ಸಂಸದೀಯ ಚುನಾವಣೆಯಲ್ಲಿ ಪುಟಿನ್ ಅವರ ಯುನೈಟೆಡ್ ರಷ್ಯ ಪಕ್ಷ ನಡೆಸಿದ ಅಕ್ರಮಗಳಿಗೆ ಸಂಬಂಧಿಸಿದಂತೆ ಪುಟಿನ್ ತೀವ್ರ ಆರೋಪಗಳನ್ನು ಎದುರಿಸುತ್ತಿರುವುದರ ನಡುವೆಯೂ ಅವರ ಆಯ್ಕೆಯ ಸಾಧ್ಯತೆ ಹೆಚ್ಚಾಗಿದೆ.

21 ಗಂಟೆಗಳ ದೀರ್ಘ ಅವಧಿಯ ಮತದಾನದಲ್ಲಿ ದೇಶದಾದ್ಯಂತದ ಸುಮಾರು 90 ಸಾವಿರ ಮತಗಟ್ಟೆಗಳಿಗೆ ತೆರಳಿ ಮತದಾರರು ಮತ ಚಲಾಯಿಸಿದರು. ರಾಷ್ಟ್ರದಲ್ಲಿ ನಡೆದ ಈ `ಮ್ಯಾರಥಾನ್ ಮತದಾನ~ವನ್ನು ಚುನಾವಣಾ ನಿರೀಕ್ಷಕರು ಸುಮಾರು 1 ಲಕ್ಷ ವೆಬ್ಕ್ಯಾಮೆರಾಗಳ ಮೂಲಕ ವೀಕ್ಷಿಸಿದರು.
ಪುಟಿನ್ ತಮ್ಮ ಪತ್ನಿ ಲುಡ್ಮಿಲಾ ಜತೆ ಮಾಸ್ಕೊದ ಮತಗಟ್ಟೆಯಲ್ಲಿ ಮತ ಚಲಾಯಿಸಿದರು. ಕಮ್ಯುನಿಸ್ಟ್ ಪಕ್ಷದ ಗೆನ್ನಡಿ ಜೈಯುಗನಾವ್ 4ನೇ ಬಾರಿ ಅಧ್ಯಕ್ಷೀಯ ಚುನಾವಣೆಯಲ್ಲಿ ಭಾಗವಹಿಸಿ ತೀವ್ರ ಪೈಪೋಟಿ ಒಡ್ಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.