ಗುರುವಾರ , ಮೇ 13, 2021
24 °C

ರಾಜಕೀಯ ಪಕ್ಷಗಳಿಗೆ ಕಡಿವಾಣ

ಆರ್.ಎಸ್.ಅಯ್ಯರ್,ತುಮಕೂರು Updated:

ಅಕ್ಷರ ಗಾತ್ರ : | |

ಈಗಾಗಲೇ ಚುನಾವಣಾ ಆಯೋಗದ ಬಿಗಿ ಕ್ರಮಗಳಿಂದಾಗಿ ದೇಶದ ಚುನಾವಣಾ ವ್ಯವಸ್ಥೆಯಲ್ಲಿ  ಸಾಕಷ್ಟು ಸುಧಾರಣೆಗಳು ಕಾಣುತ್ತಿರುವ ಬೆನ್ನಲ್ಲೇ, ಕೇಂದ್ರ ಮಾಹಿತಿ ಆಯೋಗವು ರಾಜಕೀಯ ಪಕ್ಷಗಳನ್ನೂ ಮಾಹಿತಿ ಹಕ್ಕು ಕಾಯ್ದೆ ವ್ಯಾಪ್ತಿಗೆ ಒಳಪಡಿಸಿರುವುದು ಸ್ವಾಗತಾರ್ಹ.ಕಪ್ಪು-ಬಿಳಿ ಹಣದ ಆಟದಲ್ಲಿ ಲಂಗುಲಗಾಮಿಲ್ಲದೆ ವ್ಯವಹರಿಸುತ್ತಿರುವ ರಾಜಕೀಯ ಪಕ್ಷಗಳಿಗೆ ಕೇಂದ್ರ ಮಾಹಿತಿ ಆಯೋಗದ ಈ ಮಹತ್ವದ ತೀರ್ಪು ಅಕ್ಷರಶಃ ಕಡಿವಾಣ ಹಾಕಿದಂತಾಗಲಿದೆ.ರಾಜಕೀಯ ಪಕ್ಷಗಳ ವ್ಯವಹಾರ ನಿಜಕ್ಕೂ ನಿಗೂಢವಾಗಿ ಉಳಿದಿದೆ. ಇಂತಹ ಪರಿಸ್ಥಿತಿಯಲ್ಲಿ ಕೇಂದ್ರ ಮಾಹಿತಿ ಆಯೋಗದ ತೀರ್ಪು ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಮತ್ತಷ್ಟು ಬಲಪಡಿಸುವ ಹಾಗೂ ಆರೋಗ್ಯಪೂರ್ಣಗೊಳಿಸುವ ನಿಟ್ಟಿನಲ್ಲಿ ಆಶಾದಾಯಕ ಬೆಳವಣಿಗೆ.

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.