ಬುಧವಾರ, ಏಪ್ರಿಲ್ 21, 2021
33 °C

ರಾಜಕೀಯ ಪ್ರವೇಶ ಎಷ್ಟು ಸರಿ?

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಇಂದಿನ ಚಳವಳಿ, ಸತ್ಯಾಗ್ರಹಗಳಿಂದ ಯಾವುದೇ ಪ್ರಯೋಜನವಿಲ್ಲವೆಂದು ನಂಬಿದ್ದ ಜನಕ್ಕೆ ಚಳವಳಿ, ಸತ್ಯಾಗ್ರಹಗಳಿಂದ ಹೊಸ ನಿರೀಕ್ಷೆಯನ್ನು ಮೂಡಿಸುವ ಮೂಲಕ ಇಡೀ ದೇಶವನ್ನೇ ಒಗ್ಗೂಡಿಸುತ್ತಿರುವ ಅಣ್ಣಾ ಹಜಾರೆಯವರು ರಾಜಕೀಯ ಪ್ರವೇಶ ಮಾಡಲು ಕೈಗೊಂಡಿರುವ ನಿರ್ಧಾರ ಬೇಸರ ತರುವಂತಹದ್ದು.ಹಾಗೇ ಅಣ್ಣಾ ತಂಡವು ಗೊಂದಲ, ಭಿನ್ನಾಭಿಪ್ರಾಯ ಹೊಂದಿದ್ದು, ಮೊದಲು ತಮ್ಮ ತಂಡವನ್ನು ಸರಿಪಡಿಸಿಕೊಳ್ಳುವುದು ಒಳಿತು. ಅಲ್ಲದೆ ಅಣ್ಣಾ ತಂಡದವರು ಒಂದಿಲ್ಲೊಂದು ಟೀಕೆ, ಆರೋಪಗಳಿಗೆ ಗುರಿಯಾಗುತ್ತಿದ್ದಾರೆ.ಇನ್ನು ಅಣ್ಣಾ ಹಜಾರೆಯವರು ರಾಜಕೀಯ ಪ್ರವೇಶ ಮಾಡಿದರೆ ರಾಜಕೀಯ ವ್ಯಕ್ತಿಗಳು ಅಥವಾ ಅಣ್ಣಾ ತಂಡದ ವಿರೋಧಿಗಳು ಅವರನ್ನು ಸುಮ್ಮನೆ ಬಿಟ್ಟಾರೆಯೇ? ಒಂದಿಲ್ಲೊಂದು ಟೀಕೆ, ಆರೋಪಗಳನ್ನು ಮಾಡುತ್ತಾ ಅವರನ್ನು ರಾಜಕೀಯವಾಗಿ ಬಲಿಪಶು ಮಾಡುವ ಸಾಧ್ಯತೆ ಇದೆ. ಆದ್ದರಿಂದ ಅಣ್ಣಾ ಹಜಾರೆಯವರು ರಾಜಕೀಯ ಪ್ರವೇಶ ಮಾಡದಿರುವುದೇ ಒಳಿತು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.