ಪ್ರತೀ ವರ್ಷ ನವದೆಹಲಿಯ ಪ್ರಗತಿ ಮೈದಾನದಲ್ಲಿ ನವೆಂಬರ್ 14 ರಿಂದ ನವೆಂಬರ್ 27ರ ತನಕ ‘ಇಂಡಿಯಾ ಇಂಟರ್ನ್ಯಾಷನಲ್ ಟ್ರೇಡ್ ಫೇರ್’ ನಡೆಯುತ್ತದೆ. ಇಲ್ಲಿನ ವಾಣಿಜ್ಯ ಮಳಿಗೆಗಳು ದೇಶ ವಿದೇಶಗಳಿಂದ ಬಂದ ವಿವಿಧ ಗ್ರಾಹಕರನ್ನು ಆಕರ್ಷಿಸುತ್ತವೆ.

ಈ ಅಂತರ ರಾಷ್ಟ್ರೀಯ ವಾಣಿಜ್ಯ ಜಾತ್ರೆಯನ್ನು ‘ಇಂಡಿಯಾ ಟ್ರೇಡ್ ಪ್ರೊಮೋಶನ್ ಆರ್ಗನೈಜೇಷನ್’ ಪ್ರಾಯೋಜಿಸುತ್ತದೆ. ಈ ಬಾರಿ ಪ್ರತಿಯೊಂದು ರಾಜ್ಯದ ಮಳಿಗೆಗಳು ಪೈಪೋಟಿಗಿಳಿದಂತೆ ಕಾಣುತ್ತಿದ್ದವು.

ಕೇರಳ ರಾಜ್ಯದ ಎರಡು ಪುಸ್ತಕ ಮಳಿಗೆಗಳಿದ್ದವು. ಹಲವಾರು ಮಲಯಾಳಿ ಸಾಹಿತಿಗಳ ಪುಸ್ತಕಗಳು ಉಪಲಬ್ಧ ವಿದ್ದವು. ಆದರೆ ಕರ್ನಾಟಕ ನಮ್ಮ ರಾಜ್ಯ ಎಂದು ಅಭಿಮಾನದಿಂದ ಹೋದರೆ ಅಲ್ಲಿ ನಿರಾಶೆ ನಮ್ಮನ್ನು ಕಾಡಿತು. ಅಲ್ಲಿ ಸರ್ಕಾರಿ ಕಾರ್ಯಕ್ರಮ ಗಳ ಜಾಹೀರಾತಿನ ದೊಡ್ಡ ದೊಡ್ಡ ಬ್ಯಾನರ್ ಗಳು, ಮತ್ತೊಂದಿಷ್ಟು ವ್ಯಾಪಾರಿ ಮಳಿಗೆಗಳು, ಅತ್ಯಂತ ಅನಾಕರ್ಷಕವಾಗಿದ್ದವು ಹಾಗೂ ಕಳಪೆ ಯಾಗಿದ್ದವು. ಕೇರಳದ ಮಳಿಗೆಯಲ್ಲಿ ತೆಂಗಿನ ನಾರಿನಿಂದ ಹಗ್ಗ ಹೊಸೆಯುವ ಯಂತ್ರವು ಪ್ರಾತ್ಯಕ್ಷಿಕೆಗಾಗಿ ಚಲಿಸುತ್ತಿದ್ದಿತು.

ಅಲ್ಲಿನ ಜಾನ ಪದ ಕಲೆಗಳನ್ನು ಟಿ.ವಿ. ಮೂಲಕ ತೋರಿಸು ತ್ತಿದ್ದರು. ನಮ್ಮ ರಾಜ್ಯ ಎಂಟು ಜ್ಞಾನಪೀಠ ಪ್ರಶಸ್ತಿ ಪಡೆದ ನಾಡು. ಇಲ್ಲಿ ಪ್ರವಾಸೋದ್ಯಮಕ್ಕೆ ವಿಪುಲ ಅವಕಾಶವಿದೆ. ನಮ್ಮದೇ ನಾಡಿನ ಬಿದಿರೆ ಕಲೆ ನಮಲ್ಲಿದೆ. ಯಕ್ಷಗಾನ, ದೊಡ್ಡಾಟ, ಗೊಂಬೆ ಕುಣಿತ, ಡೊಳ್ಳು ಕುಣಿತ ಇಂತಹ ನೂರಾರು ಜನಪದ ಕಲೆಗಳ ತವರೂರು ನಮ್ಮದು, ಭೂತಾರಾಧನೆ, ನಾಗಮಂಡಲ ನಮ್ಮ ವಿಶಿಷ್ಟ ಕಲೆ. ಈ ಯಾವುದನ್ನೂ ಇಲ್ಲಿ ಪ್ರದರ್ಶಿಸದೆ ಕಳಪೆ ಪ್ರದರ್ಶನ ನೀಡಿದ್ದು ನಮಗೆ ನಿರಾಶೆ ಮೂಡಿಸಿತು.

ರಾಜ್ಯ ತನ್ನ ಅವಕಾಶಗಳನ್ನು ಸರಿಯಾಗಿ ಬಳಸಿಕೊಳ್ಳಲಿಲ್ಲ. ಬೇರೆ ರಾಜ್ಯದ ಮಳಿಗೆಗಳಲ್ಲಿ ನೋಡಲು ಒಂದೆರಡು ಗಂಟೆ ಸಾಲುತ್ತಿರಲಿಲ್ಲ. ಆದರೆ ನಮ್ಮ ರಾಜ್ಯದ ಮಳಿಗೆಯಲ್ಲಿ ನೋಡಲು ಯೋಗ್ಯವಾದವು ಯಾವುದೂ ಇರಲಿಲ್ಲ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.