ಶುಕ್ರವಾರ, ಏಪ್ರಿಲ್ 23, 2021
27 °C

ರಾಜ್ಯಮಟ್ಟದ ಟಿಟಿ ಟೂರ್ನಿ ನಾಳೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮಂಡ್ಯ: ಪದವಿಪೂರ್ವ ಕಾಲೇಜುಗಳ ರಾಜ್ಯಮಟ್ಟದ ಟೇಬಲ್ ಟೆನಿಸ್ ಟೂರ್ನಿಗೆ `ಸಕ್ಕರೆ~ ನಗರ ಮಂಡ್ಯ ಸಜ್ಜುಗೊಂಡಿದೆ. ನವೆಂಬರ್ 16 ರಿಂದ ಎರಡು ದಿನ ಈ ಟೂರ್ನಿ ನಡೆಯಲಿವೆ.ಪದವಿಪೂರ್ವ ಮತ್ತು ವೃತ್ತಿಶಿಕ್ಷಣ ಇಲಾಖೆ ಹಾಗೂ ಮಾಂಡವ್ಯ ಪದವಿ ಪೂರ್ವ ಕಾಲೇಜು ಸಹಯೋಗದಲ್ಲಿ ಟೂರ್ನಿ ಸಂಘಟಿಸಿದ್ದು, ನಗರದ       ಎಸ್.ಬಿ.ಸಮುದಾಯ ಭವನದಲ್ಲಿ ಸ್ಪರ್ಧೆಗಳು ಜರುಗಲಿವೆ.ರಾಜ್ಯದ ವಿವಿಧ ಜಿಲ್ಲೆಗಳ ಬಾಲಕರ ಮತ್ತು ಬಾಲಕಿಯರ ತಲಾ 31 ತಂಡಗಳ ಒಟ್ಟು 310 ಕ್ರೀಡಾಪಟುಗಳು ಪ್ರಶಸ್ತಿಗಾಗಿ ಸೆಣಸಲಿದ್ದಾರೆ. ಪ್ರತಿ ತಂಡದಲ್ಲಿ ತಲಾ ಐದು ಮಂದಿ ಆಟಗಾರರಿದ್ದು, `ನಾಕೌಟ್~ ಮಾದರಿಯಲ್ಲಿ 8 ಅಂಕಣದಲ್ಲಿ ಸ್ಪರ್ಧೆಗಳು ಜರುಗಲಿವೆ.ನ.16 ರಂದು ಜಿಲ್ಲಾ ಉಸ್ತುವಾರಿ ಸಚಿವ ಸಿ.ಪಿ.ಯೋಗೇಶ್ವರ್ ಟೂರ್ನಿ ಉದ್ಘಾಟಿಸಲಿದ್ದಾರೆ. ನ.17 ರಂದು ಬಹುಮಾನ ವಿತರಣೆ ನಡೆಯಲಿದೆ ಎಂದು ಪದವಿ ಪೂರ್ವ ಮತ್ತು ವೃತ್ತಿ ಶಿಕ್ಷಣ ಇಲಾಖೆಯ ಉಪ ನಿರ್ದೇಶಕ ಎಚ್.ಕೃಷ್ಣಯ್ಯ ತಿಳಿಸಿದ್ದಾರೆ.

 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.