ಬುಧವಾರ, ಏಪ್ರಿಲ್ 21, 2021
25 °C

ರಾಷ್ಟ್ರೀಯ ಕಬಡ್ಡಿ ಸೂಪರ್‌ಲೀಗ್ : ಕಡಲತಡಿಯ ಬೈಂದೂರು ಸಜ್ಜು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೈಂದೂರು: ಉಡುಪಿ ಜಿಲ್ಲೆಯ ಕೊನೆಯ ಪ್ರದೇಶವಾಗಿರುವ ಬೈಂದೂರಿನಲ್ಲಿ ಕಬಡ್ಡಿ ಜನಪ್ರಿಯ ಕ್ರೀಡೆ.  ಕಡಲತಡಿಯ ಈ ಪುಟ್ಟ ಪಟ್ಟಣ ಈಗ ದೊಡ್ಡ ಮಟ್ಟದ ಕಬಡ್ಡಿ ಹಬ್ಬದ ಆತಿಥ್ಯಕ್ಕೆ ಸಜ್ಜಾಗಿದೆ. 58ನೇ ರಾಷ್ಟ್ರೀಯ ಸೀನಿಯರ್ ಸೂಪರ್‌ಲೀಗ್ ಕಬಡ್ಡಿ ಚಾಂಪಿಯನ್‌ಷಿಪ್ ಇಲ್ಲಿನ ಗಾಂಧಿ ಮೈದಾನದಲ್ಲಿ ಗುರುವಾರ ಆರಂಭವಾಗಲಿದೆ.ನಾಲ್ಕು ದಿನಗಳ ಈ ಚಾಂಪಿಯನ್‌ಷಿಪ್‌ನ ಪುರುಷರ ವಿಭಾಗದಲ್ಲಿ 17 ಮತ್ತು ಮಹಿಳೆಯರ ವಿಭಾಗದಲ್ಲಿ 16 ತಂಡಗಳು ಭಾಗವಹಿಸಲಿವೆ.ಕಳೆದ ಬಾರಿ ಮುಂಬೈನಲ್ಲಿ ನಡೆದ ಈ ಕೂಟದ ಪುರುಷರ ವಿಭಾಗದಲ್ಲಿ ಮೂರನೇ ಸ್ಥಾನ ಗಳಿಸಿದ್ದ ಕರ್ನಾಟಕ ಈ ಬಾರಿ ‘ಡಿ’ ಗುಂಪಿನಲ್ಲಿದೆ. ಕರ್ನಾಟಕ ನೇರವಾಗಿ ಸೂಪರ್‌ಲೀಗ್‌ಗೆ ಅರ್ಹತೆ ಪಡೆದಿರಲಿಲ್ಲ. ಆದರೆ ಅತಿಥೇಯ ಎಂಬ ನೆಲೆಯಲ್ಲಿ ಸ್ಥಾನ ಪಡೆದಿದೆ. ಮಹಿಳೆಯರ ವಿಭಾಗದಲ್ಲಿ ಕರ್ನಾಟಕ ‘ಸಿ’ ಗುಂಪಿನಲ್ಲಿದೆ.ಕಳೆದ ವರ್ಷ ದೆಹಲಿ ತಂಡ ಪುರುಷರ ವಿಭಾಗದಲ್ಲಿ ವಿಜೇತವಾಗಿದ್ದರೆ, ರಾಜಸ್ತಾನ ಎರಡನೇ ಸ್ಥಾನ ಪಡೆದಿತ್ತು; ಇಂಡಿಯನ್ ರೈಲ್ವೇಸ್ ಮಹಿಳೆಯರ ವಿಭಾಗದಲ್ಲಿ ಚಾಂಪಿಯನ್ ಆಗಿದ್ದರೆ, ಮಹಾರಾಷ್ಟ್ರ ತಂಡ ರನ್ನರ್ ಅಪ್ ಆಗಿತ್ತು.ತಂಡಗಳ ಆಗಮನ: ಬುಧವಾರ ಸಂಜೆಯ ಹೊತ್ತಿಗೆ 20 ತಂಡಗಳು ಆಗಮಿಸಿವೆ. ತಂಡಗಳಿಗೆ ಬೈಂದೂರಿನಿಂದ 25 ಕಿಮೀ ದೂರದ ಕೊಲ್ಲೂರಿನಲ್ಲಿ ವಸತಿ ಕಲ್ಪಿಸಲಾಗಿದೆ.ಅಂಕಣದ ಮೂರು ದಿಕ್ಕುಗಳಲ್ಲಿ ಸುಮಾರು 25,000 ಪ್ರೇಕ್ಷಕರು ಕುಳಿತುಕೊಳ್ಳಲು ಸಾಧ್ಯವಾಗುವ ಗ್ಯಾಲರಿಗಳ ನಿರ್ಮಾಣ ಕಾರ್ಯ ಮುಗಿದಿದೆ.ಪುರುಷರ ಮತ್ತು ಮಹಿಳೆಯರ ತಂಡಗಳನ್ನು ತಲಾ ನಾಲ್ಕು ಗುಂಪುಗಳಾಗಿ ವಿಂಗಡಿಸಲಾಗಿದೆ. ಪಂದ್ಯ ಲೀಗ್ ಮತ್ತು ನಾಕೌಟ್ ಮಾದರಿಯಲ್ಲಿ ನಡೆಯಲಿದೆ.ಅವಿಭಜಿತ ಜಿಲ್ಲೆಯಲ್ಲಿ ಸಾಕಷ್ಟು ಪ್ರಶಸ್ತಿಗಳನ್ನು ಗೆದ್ದಿರುವ, ಹಲವು ಆಟಗಾರರನ್ನು ತಯಾರಿಸಿರುವ ಬೈಂದೂರಿನ ಪ್ರಥ್ವಿ ಕ್ರೀಡಾ ಮತ್ತು ಯುವಜನ ಸಂಸ್ಥೆ ಹಾಗೂ ಉಡುಪಿ ಜಿಲ್ಲಾ ಅಮೆಚೂರ್ ಕಬಡ್ಡಿ ಸಂಸ್ಥೆ ಆಶ್ರಯದಲ್ಲಿ ಈ ಕೂಟ ನಡೆಯುತ್ತಿದೆ.

ತಂಡಗಳು:ಪುರುಷರು: ‘ಎ’ ಗುಂಪು: ಭಾರತೀಯ ರೈಲ್ವೆ, ಮಹಾರಾಷ್ಟ್ರ, ಪಂಜಾಬ್, ಪಶ್ಚಿಮ ಬಂಗಾಳ; ‘ಬಿ’ ಗುಂಪು: ರಾಜಸ್ತಾನ, ಹೈದರಾಬಾದ್, ತಮಿಳುನಾಡು, ಮಧ್ಯಪ್ರದೇಶ; ‘ಸಿ’ ಗುಂಪು: ದೆಹಲಿ, ಬಿಹಾರ, ಬಿಎಸ್‌ಎನ್‌ಎಲ್, ಉತ್ತರಾಖಂಡ್; ‘ಡಿ’ ಗುಂಪು: ಸರ್ವಿಸಸ್, ಹರ್ಯಾಣ, ಜಾರ್ಖಂಡ್, ಕೇರಳ, ಕರ್ನಾಟಕ.ಮಹಿಳೆಯರು: ‘ಎ’ ಗುಂಪು: ಭಾರತೀಯ ರೈಲ್ವೆ, ತಮಿಳುನಾಡು, ರಾಜಸ್ತಾನ, ಆಂಧ್ರಪ್ರದೇಶ; ‘ಬಿ’ ಗುಂಪು: ಮಹಾರಾಷ್ಟ್ರ, ದೆಹಲಿ, ಪುದುಚೇರಿ, ಉತ್ತರಪ್ರದೇಶ; ‘ಸಿ’ ಗುಂಪು: ಕರ್ನಾಟಕ, ಪಶ್ಚಿಮ ಬಂಗಾಳ, ಹಿಮಾಚಲ ಪ್ರದೇಶ, ಗೋವಾ; ಡಿ ಗುಂಪು: ಹರ್ಯಾಣ, ಮಧ್ಯಪ್ರದೇಶ, ಬಿಹಾರ, ಮಣಿಪುರ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.