ಗುರುವಾರ , ಮೇ 6, 2021
31 °C

ರಾಷ್ಟ್ರೀಯ ಮಟ್ಟದ ಆಹ್ವಾನ ವಾಲಿಬಾಲ್:ನಾಲ್ಕರ ಘಟ್ಟಕ್ಕೆ ಎಚ್‌ಎಸ್‌ಐಡಿಸಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಪಡುಬಿದ್ರಿ: ರೋಚಕ ಹೋರಾಟದಲ್ಲಿ ಹರಿಯಾಣದ ಎಚ್‌ಎಸ್‌ಐಡಿಸಿ ತಂಡ 3-2 ಸೆಟ್‌ಗಳಿಂದ ಮುಂಬೈನ ಆರ್‌ಸಿಎಫ್ ತಂಡವನ್ನು ಸೋಲಿಸಿ, ವಿಶ್ವೇಶ್ವರ ಟ್ರೋಫಿಗಾಗಿ ನಡೆಯುತ್ತಿರುವ ರಾಷ್ಟ್ರೀಯ ಮಟ್ಟದ ಹೊನಲು ಬೆಳಕಿನ ಆಹ್ವಾನ ವಾಲಿಬಾಲ್ ಟೂರ್ನಿಯ `ಬಿ~ ಗುಂಪಿನಿಂದ ಸೆಮಿಫೈನಲ್ ತಲುಪಿತು.ಚೆನ್ನೈನ ದಕ್ಷಿಣ ರೈಲ್ವೆ ಕೂಡ ಇದೇ ಗುಂಪಿನಿಂದ ಸೆಮಿಫೈನಲ್‌ಗೆ ಮುನ್ನಡೆದಿದೆ. ಉಡುಪಿ ಸಮೀಪ ಎಲ್ಲೂರು  ಯುವಕ ಮಂಡಲ ಆಶ್ರಯದಲ್ಲಿ ವಿಶ್ವೇಶ್ವರ ದೇವಳದ ಮುಂಭಾಗದಲ್ಲಿ ನಡೆಯುತ್ತಿರುವ ಟೂರ್ನಿಯ ಮೂರನೇ ದಿನವಾದ ಶುಕ್ರವಾರ ಹರಿಯಾಣದ ತಂಡ 25-21, 23-25, 25-21, 23-25, 18-16ರಲ್ಲಿ ಆರ್‌ಸಿಎಫ್ ತಂಡವನ್ನು ಸೋಲಿಸಿತು.ಗುರುವಾರ ರಾತ್ರಿ ನಡೆದ `ಎ~ ವಿಭಾಗದ ಪಂದ್ಯದಲ್ಲಿ ಕೆ.ಎಸ್.ಪಿ. ತಂಡ 25-18, 25-18, 22-25, 25-23ರಲ್ಲಿ ಮುಂಬೈನ ಜೀವವಿಮಾ ನಿಗಮ ತಂಡವನ್ನು ಸೋಲಿಸಿತು.ಎಚ್‌ಎಸ್‌ಐಡಿಸಿ ಇನ್ನೊಂದು ಪಂದ್ಯದಲ್ಲಿ 19-25, 25-27, 27-25, 25-15, 15-8ರಲ್ಲಿ ಕರ್ನಾಟಕ ಯುವ ತಂಡವನ್ನು ಸೋಲಿಸಿತು.ಚೆನ್ನೈನ ಐಓಬಿ 26-24, 25-17, 25-18ರಲ್ಲಿ ಬೆಂಗಳೂರಿನ ಬಿಎಸ್‌ಎನ್‌ಎಲ್ ತಂಡವನ್ನು ಸೋಲಿಸಿತು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.