ಬೆಂಗಳೂರು: ನಗರದ ಬೆಥನಿ ಶಾಲೆಯ ಐದನೇ ತರಗತಿಯ ವಿದ್ಯಾರ್ಥಿನಿ ದೆಬೆಶೀ ದಾಸ್ ರಾಷ್ಟ್ರೀಯ ವಿಜ್ಞಾನ ಸ್ಪರ್ಧೆಯಲ್ಲಿ ಪಾಲ್ಗೊಂಡು ಪ್ರಥಮ ಸ್ಥಾನ ಪಡೆದಿದ್ದಾಳೆ.ಏಷ್ಯಾದ ರಾಷ್ಟ್ರಗಳ ಸುಮಾರು ಏಳು ಸಾವಿರ ಶಾಲೆಗಳ 11 ರಿಂದ 12 ವರ್ಷದ ವಿದ್ಯಾರ್ಥಿಗಳು ಸ್ಪರ್ಧೆಯಲ್ಲಿ ಭಾಗವಹಿಸಿದ್ದರು.

ನಗರದಲ್ಲಿ ಇತ್ತೀಚೆಗೆ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ದೆಬೆಶೀ ದಾಸ್, `ಮೊದಲಿನಿಂದಲೂ ರಾಷ್ಟ್ರೀಯ ವಿಜ್ಞಾನ ಸ್ಪರ್ಧೆಯಲ್ಲಿ ವಿಜೇತಳಾಗಬೇಕೆಂಬ ಕನಸು ಕಂಡಿದ್ದೆ. ಆ ಕನಸು ಈಗ ನನಸಾಗಿದೆ. ನನ್ನ ಗೆಲುವಿಗೆ ನನ್ನ ಶಾಲೆಯ ಅಧ್ಯಾಪಕರು, ಸಹಪಾಠಿಗಳು ಮತ್ತು ನನ್ನ ಪೋಷಕರು ನೀಡಿದ ಪ್ರೋತ್ಸಾಹವೇ ಕಾರಣ~ ಎಂದು ತಿಳಿಸಿದಳು.

ತಂದೆ ಡಾ.ದೇಬಬ್ರತ ದಾಸ್, ತಾಯಿ ಮೊಹ್ವಾ ದಾಸ್ ಮತ್ತು ಶಾಲೆಯ ಶಿಕ್ಷಕರು ಹಾಗೂ ಸ್ನೇಹಿತರು ದೆಬೆಶೀ ದಾಸ್ ರಾಷ್ಟ್ರೀಯ ವಿಜ್ಞಾನ ಸ್ಪರ್ಧೆಯಲ್ಲಿ ಪಾಲ್ಗೊಂಡು ಪ್ರಥಮ ಸ್ಥಾನವನ್ನು ಗಳಿಸಿದ ಸಂತೋಷದಲ್ಲಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.