ಶುಕ್ರವಾರ, ಫೆಬ್ರವರಿ 26, 2021
18 °C

ರಾಷ್ಟ್ರೀಯ ಹಾಕಿ ಲೀಗ್; ಎಂಇಜಿಗೆ ಜಯ:ಗೋಲಿನ ಮಳೆಗರೆದ ಆರ್ಮಿ ರೆಡ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ರಾಷ್ಟ್ರೀಯ ಹಾಕಿ ಲೀಗ್; ಎಂಇಜಿಗೆ ಜಯ:ಗೋಲಿನ ಮಳೆಗರೆದ ಆರ್ಮಿ ರೆಡ್

ಬೆಂಗಳೂರು: ಆರ್ಮಿ ರೆಡ್ ತಂಡದವರು ಇಲ್ಲಿ ನಡೆಯುತ್ತಿರುವ ಕೆಎಸ್‌ಎಚ್‌ಎ ಆಶ್ರಯದ `ಓಜೋನ್ ಗ್ರೂಪ್ ರಾಷ್ಟ್ರೀಯ ಹಾಕಿ ಲೀಗ್ ಚಾಂಪಿಯನ್‌ಷಿಪ್~ನ ಪಂದ್ಯದಲ್ಲಿ ಸುಲಭ ಗೆಲುವು ಪಡೆದರು.ಅಕ್ಕಿತಿಮ್ಮನಹಳ್ಳಿ ರಾಜ್ಯ ಹಾಕಿ ಸಂಸ್ಥೆ ಕ್ರೀಡಾಂಗಣದಲ್ಲಿ ಮಂಗಳವಾರ ನಡೆದ ಪಂದ್ಯದಲ್ಲಿ ಗೋಲು ಮಳೆಯನ್ನೇ ಸುರಿಸಿದ ಆರ್ಮಿ ರೆಡ್ 8-2 ರಲ್ಲಿ ಆರ್ಮಿ ಗ್ರೀನ್ ತಂಡವನ್ನು ಮಣಿಸಿತು.ಎಸ್. ಅರ್ಮುಗಂ ಪಂದ್ಯದ ಐದನೇ ನಿಮಿಷದಲ್ಲಿ ತಂಡದ ಗೋಲಿನ ಖಾತೆ ತೆರೆದರು. 47ನೇ ನಿಮಿಷದಲ್ಲಿ ಅವರು ಇನ್ನೊಂದು ಗೋಲು ತಂದಿತ್ತರು. ಇತರ ಗೋಲುಗಳನ್ನು ಸುನಿಲ್ ಎಕ್ಕಾ (34), ಮುಖೇಶ್ ಲಾಕ್ರ (35), ಚಿತ್ತರಂಜನ್ ಸಿಂಗ್ (38), ರಿನೆಲ್ ಸಿಂಗ್ (49), ಸಂತ್ಯಾಲ್ ಮುಂಡು (59) ಮತ್ತು ರಾಜೇಶ್ ಕುಮಾರ್ (65) ಗಳಿಸಿದರು. ಆರ್ಮಿ ಗ್ರೀನ್ ತಂಡದ ಪರ ಬಿನೊಯ್ ಬೆಂಗ್ರಾ (58) ಮತ್ತು ಜಾನಿ ಜಸ್ರೋಷಿಯಾ (65) ಚೆಂಡನ್ನು ಗುರಿ ಸೇರಿಸಲು ಯಶಸ್ವಿಯಾದರು.ಏಕಪಕ್ಷೀಯವಾಗಿ ಕೊನೆಗೊಂಡ ದಿನದ ಮತ್ತೊಂದು ಪಂದ್ಯದಲ್ಲಿ ಎಂಇಜಿ `ಎ~ ತಂಡ 4-1 ಗೋಲುಗಳಿಂದ ಐಎಎಫ್ ವಿರುದ್ಧ ಜಯ ಸಾಧಿಸಿತು. ವಿರಾಮದ ವೇಳೆಗೆ ವಿಜಯಿ ತಂಡ 1-0 ಗೋಲಿನಿಂದ ಮುನ್ನಡೆ ಸಾಧಿಸಿತು. ಎಂಇಜಿಗೆ ರಾಬಿನ್ (37 ಮತ್ತು 58ನೇ ನಿಮಿಷ) ಎರಡು ಗೋಲುಗಳನ್ನು ತಂದಿತ್ತರೆ, ಮಿಲನ್ ಮುತ್ತಣ್ಣ (34) ಮತ್ತು ಸಿರಾಜ್ (42) ತಲಾ ಒಂದು ಗೋಲು ಗಳಿಸಿದರು. ಐಎಎಫ್ ತಂಡದ ಏಕೈಕ ಗೋಲು ಪಂದ್ಯದ 69ನೇ ನಿಮಿಷದಲ್ಲಿ ಲವ್‌ಪ್ರೀತ್ ಸಿಂಗ್ ಅವರ ಸ್ಟಿಕ್‌ನಿಂದ ದಾಖಲಾಯಿತು.ಇಂದಿನ ಪಂದ್ಯಗಳು: ಬಿಪಿಸಿಎಲ್- ಪಿಎನ್‌ಬಿ (ಮಧ್ಯಾಹ್ನ 1.30ಕ್ಕೆ ಆರಂಭ), ಐಎಎಫ್- ಏರ್ ಇಂಡಿಯಾ (ಮಧ್ಯಾಹ್ನ 3.30), ಒಎನ್‌ಜಿಸಿ- ಫೋರ್ಟಿಸ್ (ಸಂಜೆ 4.30).

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.