ಮಂಗಳವಾರ, ಮೇ 18, 2021
28 °C

ಲಕ್ಕವ್ವ ಜಾತ್ರೆ ಸಂಭ್ರಮ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಲಕ್ಕವ್ವ ಜಾತ್ರೆ ಸಂಭ್ರಮ

ಬನಹಟ್ಟಿ: ಇಲ್ಲಿಗೆ ಸಮೀಪದ ಅಸಂಗಿ ಗ್ರಾಮದಲ್ಲಿ ಲಕ್ಕವ್ವ ದೇವಿಗೆ ಉಡಿ ತುಂಬುವ ಮತ್ತು ಹನುಮಾನ ದೇವರ ಓಕುಳಿ ಕಾರ್ಯಕ್ರಮ ವಿಜೃಂಭಣೆಯಿಂದ ಜರುಗಿತು. ಜಾತ್ರೆಯ ನಿಮಿತ್ತ ಗ್ರಾಮದಲ್ಲಿ ಮೆರವಣಿಗೆ ಹಮ್ಮಿಕೊಳ್ಳಲಾಗಿತ್ತು.ಸಂಜೆ ನಡೆದ ಮೆರಣಿಗೆಯಲ್ಲಿ ಸುಮಾರು 20 ಕ್ಕೂ ಹೆಚ್ಚು ಟ್ರ್ಯಾಕ್ಟರ್‌ನಲ್ಲಿ  ಭಿತ್ತಿ ಚಿತ್ರಗಳು ಪ್ರದರ್ಶನಗೊಂಡವು.  ಅದೇ ರೀತಿಯಾಗಿ ವಿವಿಧ ವೇಷಧಾರಿಗಳು, ಎತ್ತಿನ ಬಂಡಿಯ ಮೇಲೆ ಬೃಹದಾಕಾರದ ಆನೆಯನ್ನು ನಿರ್ಮಿಸಲಾಗಿತ್ತು.

 

ಕರಡಿ ಮಜಲು, ಲಮಾಣಿ ನೃತ್ಯ, ಗರಡಿ ಮನೆ ದೃಶ್ಯ, ಕುದುರೆ ಮತ್ತು ನವಿಲು ಸೋಗುದಾರರು ಕಾಲುಗಳಿಗೆ ಮರಗಳನ್ನು ಕಟ್ಟಿಕೊಂಡು ನೃತ್ಯವನ್ನು ಮಾಡಿದರು.ವೈಭವದ ಈ  ಮೆರವಣಿಗೆಯನ್ನು  ಗ್ರಾಮದ ಎಲ್ಲರೂ ರಸ್ತೆಯ ಪಕ್ಕದಲ್ಲಿ ನಿಂತು ಸುಮಾರು ಎರಡು ಗಂಟೆಗಳಿಗೂ ಹೆಚ್ಚು ಕಾಲ ವೀಕ್ಷಿಸಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.