ಶನಿವಾರ, ಜೂನ್ 12, 2021
23 °C

ಲಾರಿ ಅಪಹರಣಕಾರನಿಗೆ ಗುಂಡೇಟು-ಗಾಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹುಬ್ಬಳ್ಳಿ: ಮಹಾರಾಷ್ಟ್ರದ ಪುಣೆಯಿಂದ ಕಳವು ಮಾಡಿಕೊಂಡು ಬರುತ್ತಿದ್ದ ಟಿಪ್ಪರ್ ಲಾರಿ ನಿಲ್ಲಿಸಲು ಪೊಲೀಸರು ಎರಡು ಸುತ್ತು ಗುಂಡು ಹಾರಿಸಿದ ಘಟನೆ ಮಂಗಳವಾರ ಬೆಳಗಿನ ಜಾವ ರಾಷ್ಟ್ರೀಯ ಹೆದ್ದಾರಿಯಲ್ಲಿರುವ ಕಾರವಾರ ಬೈಪಾಸ್ ಬಳಿ ನಡೆದಿದೆ.

ಘಟನೆಯಲ್ಲಿ ಲಾರಿ ಅಪಹರಣದ ಆರೋಪಿ ಓರಿಸ್ಸಾದ ಸಂಬಲಪುರ ತಾಲ್ಲೂಕು ಇಂಚಕೆಲಾ ನಿವಾಸಿ ಮನೋಜ್ ಪವಾರ್ (23) ಗುಂಡೇಟಿನಿಂದ ಗಾಯಗೊಂಡಿದ್ದು, ಕಿಮ್ಸಗೆ ದಾಖಲು ಮಾಡಲಾಗಿದೆ.

ಧಾರವಾಡ ನಗರ ಠಾಣೆ ಪೊಲೀಸ್ ಕಾನ್‌ಸ್ಟೆಬಲ್ ಬಸವರಾಜ ಕಡಕೋಳ ಅವರು ಲಾರಿ ತಡೆಯಲು ಮೇಲೆ ಹತ್ತಿದಾಗ, ಮನೋಜನು ಕೆಳಗೆ ತಳ್ಳಿದ್ದರಿಂದ ಬಸವರಾಜ ಅವರ ಎಂಬುವವರ ಕೈ ಮುರಿದಿದೆ. ಇವರನ್ನು ಕಿಮ್ಸಆಸ್ಪತ್ರೆಗೆ ದಾಖಲಿಸಲಾಗಿದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.