ಹಾನಗಲ್: ಗ್ರಾಮೀಣರ ಕುಡಿಯುವ ನೀರಿನ ಸಮಸ್ಯೆ ನೀಗಿಸುವ ಉದ್ದೇಶ ದಿಂದ ಜಾರಿಗೊಂಡ ತಾಲ್ಲೂಕಿನ `ಕೂಡಲ ಬಹುಗ್ರಾಮ ಕುಡಿಯುವ ನೀರು ಸರಬರಾಜು ಯೋಜನೆ~ ಕಾಮ ಗಾರಿಯ ಅನುಷ್ಠಾನದಲ್ಲಿನ ವಿಳಂಬ ನೀತಿಯಿಂದಾಗಿ ಅನುಕೂಲ ಕಲ್ಪಸಬೇಕಾ ಗಿದ್ದ ಯೋಜನೆ ನೆನೆಗುದಿಗೆ ಬಿದ್ದಿದೆ.

ಹಲವು ಕೋಟಿಗಳ ವೆಚ್ಚದ ಈ ಯೋಜನೆ ತಾಲ್ಲೂಕಿನ ಕೂಡಲ ಗ್ರಾಮ ವನ್ನು ಕೇಂದ್ರೀಕರಿಸಿಕೊಂಡು ಸುತ್ತಲಿನ 6 ಹಳ್ಳಿಗಳಿಗೆ ಕುಡಿಯುವ ನೀರು ಪೂರೈಕೆ ಗಾಗಿ ಕಳೆದ ವರ್ಷದ ಮಾರ್ಚ್ 16ರಂದು ಸ್ಥಳಿಯ ಶಾಸಕ, ಲೋಕೋ ಪಯೋಗಿ ಸಚಿವ ಸಿ.ಎಂ.ಉದಾಸಿ ಶಂಕುಸ್ಥಾಪನೆ ನೆರವೇರಿಸುವ ಮೂಲಕ ಕಾಮಗಾರಿಗೆ ಚಾಲನೆ ಸಿಕ್ಕಿತ್ತು.

ಜಿಲ್ಲಾ ಪಂಚಾಯಿತಿ ಅಡಿಯಲ್ಲಿ ರೂ. 4.5 ಕೋಟಿ ವೆಚ್ಚದ ಯೋಜನೆ ಮಂಜೂರಾತಿಯಲ್ಲಿ ನಿರ್ದಿಷ್ಟ ಪಡಿಸಿದ ಸಕಲ ಕಾಮಗಾರಿಯನ್ನು ವ್ಯವಸ್ಥಿತವಾಗಿ ಪೂರ್ಣಗೊಳಿಸಿ ಸೇವೆಗೆ ಅಣಿಗೊಳಿಸಲು ಇದೇ ವರ್ಷದ ಜನವರಿ ತಿಂಗಳ ಅವಧಿ ಯನ್ನು ನಿಗದಿಗೊಳಿಸಲಾಗಿತ್ತು. ಎಲ್ಲವೂ ಅಂದುಕೊಂಡಂತೆ ಆಗಿದ್ದರೆ ಈ ಭಾಗದ ಹಳ್ಳಿಯ ಜನರು ಕುಡಿಯುವ ನೀರಿನ ಬವಣೆಯಿಂದ ಮುಕ್ತಿ ಪಡೆಯುತ್ತಿದ್ದರು. ಆದರೆ ಅನುಷ್ಠಾನದಲ್ಲಿನ ನಿರ್ಲಕ್ಷ್ಯ ದಿಂದಾಗಿ ನಿಗದಿತ ಅವಧಿ ಪೂರ್ಣ ಗೊಂಡು 5 ತಿಂಗಳು ಕಳೆದಿದ್ದರೂ ಕಾಮ ಗಾರಿಯ ಶೇ 30 ರಷ್ಟು ಭಾಗದ ಕೆಲಸ ಮುಗಿದಿದೆ ಎಂಬುದನ್ನು ಇಲಾಖೆಯ ವರದಿಗಳು ಹೇಳುತ್ತಿವೆ.

ಯೋಜನೆಯ ವಿವರ: ಕೂಡಲ ಸಮೀಪದ ವರದಾ ನದಿಯ ದಡದಲ್ಲಿ ಜಾಕ್ವೆಲ್ ನಿರ್ಮಿಸಿ, ಅಲ್ಲಿಂದ ನದಿಯ ನೀರೆತ್ತಿಕೊಂಡು ಪೈಪ್ಲೈನ ಮೂಲಕ ನರೇಗಲ್ ಗ್ರಾಮದ ಹೊರ ಭಾಗದಲ್ಲಿ ರುವ ಬೆನಕನಕಟ್ಟೆ ಕೆರೆಯ ಅಂಗಳದಲ್ಲಿ ಮಾಡಿದ ಮತ್ತೊಂದು ಕೆರೆಯಲ್ಲಿ ನೀರು ಸಂಗ್ರಹಣೆ ಮಾಡಲಾಗುವುದು. ಈ ಕೆರೆಯ ಪಕ್ಕದಲ್ಲಿರುವ ನೀರು ಶುದ್ಧೀಕರಣ ಘಟಕಕ್ಕೆ ಇಲ್ಲಿಯೇ ಮತ್ತೊಂದು ಸಣ್ಣಪ್ರಮಾಣದ ಜಾಕ್ವೆಲ್ ನಿರ್ಮಿಸಿ ಕೆರೆಯಲ್ಲಿನ ನೀರನ್ನು ಭರ್ತಿ ಮಾಡಲಾಗುವುದು. ನೀರು ಶುದ್ಧಗೊಳಿಸಿದ ನಂತರ ನರೇಗಲ್ ಸರ್ಕಾರಿ ದವಾಖಾನೆ ಆವರಣದಲ್ಲಿನ ಮೇಲ್ಮಟ್ಟದ ಜಲಾಗಾರದಲ್ಲಿ ಸಂಗ್ರಹಣೆ ಗೊಂಡು, 6 ಹಳ್ಳಿಗಳ ಜಲಾಗಾರಗಳಿಗೆ ನೀರು ಸರಬರಾಜು ಮಾಡುವ ವಿಧಾನ ಈ ಬಹು ಗ್ರಾಮ ಕುಡಿಯುವ ನೀರಿನ ಯೋಜನೆಯಲ್ಲಿದೆ.

ಆದರೆ ನದಿ ತಟದಲ್ಲಿನ ಜಾಕ್ವೆಲ್ ನಿರ್ಮಾಣ ಇನ್ನೂ ನಿರ್ಮಾಣ ಹಂತದಲ್ಲಿದೆ. ಇಲ್ಲಿ ಶೇಖರಿಸಲ್ಪಟ್ಟ ಮಣ್ಣುಮಿಶ್ರಿತ ನದಿಯ ಮರಳು ಜಾಕ್ವೆಲ್ ನಿರ್ಮಾಣಕ್ಕೆ ಬಳಕೆಯಾಗುವ ಸಂಶಯವನ್ನು ಈ ಭಾಗದ ಗ್ರಾಮಸ್ಥರು ವ್ಯಕ್ತಪಡಿಸುತ್ತಾರೆ. ನದಿಯಿಂದ ಕೆರೆಗೆ ಸಾಗುವ ಪೈಪ್ಲೈನ್ ಮತ್ತು ಶುದ್ಧಗೊಂಡ ನೀರು ಮೇಲ್ಮಟ್ಟದ ಜಲಾಗಾರಕ್ಕೆ ಸರಬರಾಜು ಮಾಡಲು ಹಾಕಿದ ಪೈಪ್ಲೈನ್ ಇದೀಗ ಮುಕ್ಕಾಲು ಭಾಗ ಮುಗಿದಿದೆ.

ಆದರೆ ಕೆರೆ ನಿರ್ಮಿ ಸುವ ಕಾಮಗಾರಿ ವಿಳಂಬವಾಗಿದೆ. ಕೇವಲ ತಗ್ಗು ತೋಡಲಾಗಿದೆ. ಕೆರೆಯ ಸುತ್ತಲೂ ದಂಡೆ, ರಕ್ಷಣಾ ಬೇಲಿ, ಗೇಟ್ ಮತ್ತಿತರ ವ್ಯವಸ್ಥೆಗೆ ಇನ್ನೂ ಕೈಹಚ್ಚಿಲ್ಲ. ಈಗ ಮಳೆಗಾಲ ಆರಂಭ ವಾಗಿದ್ದರಿಂದ ಕೆರೆ ನಿರ್ಮಾಣ ಅಸಂಭವ. ಇನ್ನು ಒಟ್ಟು 18 ಮೀ ಎತ್ತರದ ಮೇಲ್ಮಟ್ಟದ ಜಲಾಗಾರ ನಿರ್ಮಾಣ ಕಾಮಗಾರಿ ಕಳೆದ 9 ತಿಂಗಳ ಅವಧಿ ಯಲ್ಲಿ ಕೇವಲ 6 ಮೀ ಎತ್ತರಕ್ಕೇರಿದೆ.

ಈ ಕುರಿತು ವಿವರಿಸಿದ ಜಿ.ಪಂ ವಿಭಾಗೀಯ ಎಂಜನಿಯರ್ ಅಶೋಕ ಕುಮಾರ, ಕಾಮಗಾರಿ ವಿಳಂಬದ ಕಾರಣ ಗುತ್ತಿಗೆದಾರರಿಗೆ 7 ಬಾರಿ ಇಲಾ ಖೆಯಿಂದ ನೋಟಿಸ್ ಜಾರಿ ಮಾಡಲಾ ಗಿದೆ. ಜನಪ್ರತಿನಿಧಿಗಳು ಮತ್ತು ಹಿರಿಯ ಅಧಿಕಾರಿಗಳಿಂದ ಒತ್ತಡ ಹೇರಲಾಗಿದೆ. ಮತ್ತಷ್ಟು ವಿಳಂಬಗೊಂಡರೆ ಟೆಂಡರ್ ರದ್ದು ಗೊಳಿಸಿ `ರಿಸ್ಕ್ ಎಂಡ್ ಕಾಸ್ಟ್ ಬೆಸ್~ ಕ್ರಮ ಜರುಗಿಸುವ ಸೂಚನೆ ನೀಡ ಲಾಗಿದ್ದರೂ ವೇಗದ ಕಾಮಗಾರಿಗೆ ಸ್ಪಂದನೆ ಸಿಗುತ್ತಿಲ್ಲ ಎಂದರು.
ಕಾಮ ಗಾರಿಯ ಗುತ್ತಿಗೆದಾರರು ಬಹುತೇಕ ನಾಪತ್ತೆ ಯಾದಂತಾಗಿದೆ. ಗುತ್ತಿಗೆದಾರರನ್ನು ಬದಲಿಸಿ ಗುಣಮಟ್ಟ ದಿಂದ ಕೂಡಿದ ಕಾಮಗಾರಿ ಶೀಘ್ರ ಪೂರ್ಣಗೊಳ್ಳಬೇಕು ಎಂಬುದು ಈ ಭಾಗದ ತಾ.ಪಂ ಸದಸ್ಯ ಕಲ್ಲವೀರಪ್ಪ ಪವಾಡಿ ಮತ್ತು ಗ್ರಾಮಸ್ಥರಾದ ಸತೀಶ ಕುರುಬರ, ಶಫಿ ನೆಗಳೂರ ಇವರ ಒತ್ತಾಯ ವಾಗಿದೆ.

ಇಲಾಖೆಯ ಅಂದಾಜಿನ ಪ್ರಕಾರ ಯೋಜನೆ ಮುಂದಿನ ವರ್ಷದಲ್ಲಿ ಪೂರ್ಣಗೊಳ್ಳುವುದರಿಂದ ಈ ಯೋಜ ನೆಯ ವ್ಯಾಪ್ತಿಯಲ್ಲಿನ ಕೂಡಲ, ನರೇಗಲ್, ವರ್ದಿ, ಹರವಿ, ಹರನಗಿರಿ ಮತ್ತು ಅಲ್ಲಾಪುರ ಗ್ರಾಮಸ್ಥರು ಮತ್ತಷ್ಟು ದಿನ ಕಾಯಬೇಕಾದ ಅನಿ ವಾರ್ಯತೆಯಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.