ಶುಕ್ರವಾರ, ಫೆಬ್ರವರಿ 26, 2021
29 °C
ರಾಯಚೂರು: ಕೆಇಬಿ ಕಾಲೊನಿಯಲ್ಲಿ ರಸ್ತೆ ವಿಸ್ತರಣೆ ಕಾಮಗಾರಿ

ವಸತಿಗೃಹ ತೆರವಿಗೆ 15 ದಿನ ಗಡುವು

ಶಶಿಧರ ಗರ್ಗೇಶ್ವರಿ Updated:

ಅಕ್ಷರ ಗಾತ್ರ : | |

ವಸತಿಗೃಹ ತೆರವಿಗೆ 15 ದಿನ ಗಡುವು

ರಾಯಚೂರು: ನಗರದ ಕೆಇಬಿ ಕಾಲೊನಿಯಲ್ಲಿ ರಸ್ತೆ ವಿಸ್ತರಣೆ ಕಾಮಗಾರಿಗಾಗಿ 27 ಮನೆಗಳನ್ನು ತೆರವುಗೊಳಿಸುವಂತೆ ಕರ್ನಾಟಕ ವಿದ್ಯುತ್‌ ಪ್ರಸರಣ ನಿಗಮದ (ಕೆಪಿಟಿಸಿಎಲ್‌) ಕ್ವಾಟ್ರಸ್‌ ನಿವಾಸಿಗಳಿಗೆ ನಗರಸಭೆ ನೋಟಿಸ್‌ ನೀಡಿದ್ದು, ಕ್ವಾಟ್ರಸ್‌ಗಳನ್ನು ತೆರವುಗೊಳಿಸಲು 15 ದಿನಗಳ ಕಾಲಾವಕಾಶ ನೀಡಿದೆ.ಆದರೆ, ನಗರಸಭೆಯು ಈ ನೋಟಿಸ್‌ನ್ನು ಕ್ವಾಟ್ರಸ್‌ ಒಡೆತನ ಹೊಂದಿರುವ ಕೆಪಿಟಿಸಿಎಲ್‌ಗೆ ನೀಡುವುದನ್ನು ಬಿಟ್ಟು, ಕ್ವಾಟ್ರಸ್ ನಿವಾಸಿಗಗಳಿಗೆ ನೀಡಿರುವುದು. ಚರ್ಚೆಗೆ ಗ್ರಾಸವಾಗಿದೆ.ನಗರೋತ್ಥಾನ 2ನೇ ಹಂತದ ಯೋಜನೆಯಡಿ ನಗರದ ವಿವಿಧ ರಸ್ತೆಗಳನ್ನು ವಿಸ್ತರಣೆ ಮಾಡುವ ಕಾಮಗಾರಿ ನಡೆಯುತ್ತಿದೆ. ಇದರಲ್ಲಿ ಚೈತನ್ಯ ಆಸ್ಪತ್ರೆ ಪಕ್ಕದಲ್ಲಿ ಕೆಇಬಿ ಕಾಲೊನಿ ಮತ್ತು ಡ್ಯಾಡಿ ಕಾಲೊನಿ ಮಧ್ಯೆ ಕಾಕತೀಯ ಕಾಲೊನಿ, ಲ್ಯಾಂಡ್ ಫೀಲ್ ನಿವೇಶನದವರೆಗೆ ಸಾಗುವ ರಸ್ತೆ ಸೇರಿದೆ.ರಸ್ತೆ ಮಧ್ಯದಿಂದ ಎರಡೂ ಬದಿಗಳಿಗೆ 30 ಅಡಿಯಂತೆ ಗುರುತು ಮಾಡಲಾಗಿದ್ದು, ಈ ವ್ಯಾಪ್ತಿಯಲ್ಲಿ ಬರುವ ಕಟ್ಟಡ ಮತ್ತು ಮನೆಗಳನ್ನು ತೆರೆವುಗೊಳಿಸಲು ನಿರ್ಧರಿಸಲಾಗಿದೆ.ಈ ರಸ್ತೆಯ ಎಡಭಾಗದಲ್ಲಿ ಕಾಂಪೌಂಡ್‌ಗೆ ಹೊಂದಿಕೊಂಡಂತೆ ಇರುವ ಕೆಇಬಿ ಕಾಲೊನಿಯ 27 ಮನೆಗಳನ್ನು ತೆರೆವುಗೊಳಿಸಲು ನಗರಸಭೆ ನೋಟಿಸ್‌ ಜಾರಿ ಮಾಡಿದೆ. ಕೆಇಬಿ ಕಾಲೊನಿಯ ಕ್ವಾಟ್ರಸ್‌ಗಳು ಕೆಪಿಟಿಸಿಎಲ್‌ ಒಡೆತನದಲ್ಲಿದೆ. ಆದರೆ, ನೋಟಿಸ್ ಅನ್ನು ಕ್ವಾಟ್ರಸ್‌ ಬಳಕೆ ಮಾಡುತ್ತಿರುವವರಿಗೆ ನೀಡಲಾಗಿದೆ. ಇದರಿಂದ ಆತಂಕಗೊಂಡ ಕೆಲವು ಉದ್ಯೋಗಿಗಳು ಈಗಾಗಲೇ ಕ್ವಾಟ್ರಸ್‌ ತೆರವು ಮಾಡಿದ್ದಾರೆ.ಈ ಮಧ್ಯೆ, ಪ್ರಭಾವಿಗಳ ಒತ್ತಡಕ್ಕೆ ಮಣಿದು ರಸ್ತೆ ಬಲಬದಿಯಲ್ಲಿರುವ (ಡ್ಯಾಡಿ ಕಾಲೊನಿ) ಕೆಲವು ಖಾಸಗಿ ಕಟ್ಟಡಗಳನ್ನು ತೆರವುಗೊಳಿಸಲು ನೋಟಿಸ್‌ ನೀಡಿಲ್ಲ ಎಂಬ ದೂರುಗಳು ಕೇಳಿಬಂದಿವೆ. ಇದೇ ವೇಳೆಗೆ ಕೆಇಬಿ ಕಾಲೊನಿ ಕ್ವಾಟ್ರಸ್‌ನ ಆಸ್ತಿ ಸಂರಕ್ಷಣೆ ಮಾಡಬೇಕಿರುವ ಕೆಪಿಟಿಸಿಎಲ್‌ ಅಧಿಕಾರಿಗಳು ಈ ಬಗ್ಗೆ ಮೌನ ವಹಿಸಿದ್ದಾರೆ ಎಂಬ ಆರೋಪಗಳನ್ನು ಮಾಡಲಾಗಿದೆ.‘ರಸ್ತೆ ವಿಸ್ತರಣೆಗೆ ಅಡ್ಡಿಯಾಗಿರುವ ಕ್ವಾಟ್ರಸ್‌ಗಳನ್ನು ತೆರವುಗೊಳಿಸುವಂತೆ ಕೆಪಿಟಿಸಿಎಲ್‌ಗೆ ನೋಟಿಸ್‌ ನೀಡಲಾಗಿದೆ ಅದರ ಪ್ರತಿ ಕ್ವಾಟ್ರಸ್‌ ನಿವಾಸಿಗಳಿಗೆ ನೀಡಿರಬಹುದಷ್ಟೆ’ ಎಂದು ನಗರಸಭೆ ಪೌರಾಯುಕ್ತ ಕೆ. ಗುರುಲಿಂಗಪ್ಪ ಹೇಳಿದರು.‘ರಸ್ತೆ ವಿಸ್ತರಣೆಗೆ ಸರ್ವೆ ನಡೆಸಿದಾಗ ಕೆಪಿಟಿಸಿಎಲ್‌ ಅಧಿಕಾರಿಗಳೂ ಇದ್ದರು. ಈಗ ಗುರುತಿಸಲಾಗಿರುವ ಕ್ವಾಟ್ರಸ್‌ಗಳ ನಿವಾಸಿಗಳು ಕೋರಿಕೆಯಂತೆ ಮನೆ ತೆರವುಗೊಳಿಸಲು 15 ದಿನಗಳ ಕಾಲವಕಾಶ ನೀಡಲಾಗಿದೆ. ಕೆಪಿಟಿಸಿಎಲ್‌ ಈ ತೆರವುಗೊಳ್ಳುವ ಮನೆಗಳ ಬದಲಿಗೆ ಬೇರೆಡೆ ಕ್ವಾಟ್ರಸ್‌ ಸಮುಚ್ಚಯ ಕಟ್ಟಿಕೊಡುವಂತೆ ಕೋರಿದ್ದು, ಇದು ಪರಿಶೀಲನೆಯಲ್ಲಿದೆ’ ಎಂದರು.***

ರಸ್ತೆ ವಿಸ್ತರಣೆಗೆ ಎರಡು ಬದಿ  ಸ್ಥಳ ಗುರುತು ಮಾಡಲಾಗಿದೆ. ಕಟ್ಟಡಗಳನ್ನು ತೆರವುಗೊಳಿಸಲು ನೋಟಿಸ್‌ ನೀಡಲಾಗಿದೆ. ತಾರತಮ್ಯ ಆಗಿಲ್ಲ.

-ಕೆ.ಗುರುಲಿಂಗಪ್ಪ,
ನಗರಸಭೆ ಪೌರಾಯುಕ್ತ

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.