ಮಂಗಳವಾರ, ಮೇ 24, 2022
23 °C

ವಾರ್ನ್- ಹರ್ಲಿ ನಿಶ್ಚಿತಾರ್ಥ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಲಂಡನ್ (ಪಿಟಿಐ): ಆಸ್ಟ್ರೇಲಿಯ ಕ್ರಿಕೆಟ್ ತಂಡದ ಮಾಜಿ ಆಟಗಾರ ಶೇನ್ ವಾರ್ನ್ ಹಾಗೂ ಇಂಗ್ಲೆಂಡ್‌ನ ನಟಿ ಎಲಿಜಬೆತ್ ಹರ್ಲಿ ವಿವಾಹವಾಗುವುದು ಹೆಚ್ಚುಕಡಿಮೆ ಖಚಿತವಾಗಿದೆ. ಸ್ಕಾಟ್ಲೆಂಡ್‌ನಲ್ಲಿ ಇತ್ತೀಚೆಗೆ ಇವರ ನಿಶ್ಚಿತಾರ್ಥ ನಡೆದಿದೆ ಎಂದು `ಡೇಲಿ ಮೇಲ್~ ಪತ್ರಿಕೆ ವರದಿ ಮಾಡಿದೆ.`ಸ್ಕಾಟ್ಲೆಂಡ್‌ನ ಓಲ್ಡ್ ಕೋರ್ಸ್ ಹೋಟೆಲ್‌ನಲ್ಲಿ ವಾರ್ನ್ ಗೆಳತಿ ಹರ್ಲಿಗೆ ವಜ್ರ ಖಚಿತ ಉಂಗುರ ನೀಡಿ ವಿವಾಹ ಪ್ರಸ್ತಾಪ ಮುಂದಿಟ್ಟರು. 46ರ ಹರೆಯದ ಹರ್ಲಿ ಅದಕ್ಕೆ ಒಪ್ಪಿಗೆ ಸೂಚಿಸಿದರು~ ಎಂದು ಪತ್ರಿಕೆ ತಿಳಿಸಿದೆ. ಗಾಲ್ಫ್  ಟೂರ್ನಿಗೆ ಸಂಬಂಧಿಸಿದ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ವಾರ್ನ್‌ಗೆ ಇಲ್ಲಿಗೆ ಆಗಮಿಸಿದ್ದರು.42 ಹರೆಯದ ವಾರ್ನ್ ಹಾಗೂ ಹರ್ಲಿ ಕಳೆದ 10 ತಿಂಗಳುಗಳಿಂದ ಪರಸ್ಪರ ಪ್ರೀತಿಸುತ್ತಿದ್ದಾರೆ. ಹರ್ಲಿ ಈ ಹಿಂದೆ ಭಾರತೀಯ ಮೂಲದ ಉದ್ಯಮಿ ಅರುಣ್ ನಾಯರ್ ಅವರನ್ನು ವಿವಾಹವಾಗಿದ್ದರೂ, ವಿಚ್ಛೇದನ ಪಡೆದಿದ್ದರು. ವಾರ್ನ್ ಕೂಡಾ ಮೊದಲ ಪತ್ನಿಯಿಂದ ದೂರವಾಗಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.