ದಾವಣಗೆರೆ: ರಸ್ತೆಯಲ್ಲಿದ್ದ ಗುಂಡಿ ದಾಟಿ ಇನ್ನೇನು ವಾಹನ ಮತ್ತೆ ವೇಗ ಪಡೆದುಕೊಳ್ಳಬೇಕು ಎಂಬಷ್ಟರಲ್ಲಿ ಬ್ಯಾರಿಕೇಡ್ ಮರೆಯಲ್ಲಿ ನಿಂತು ವ್ಯಕ್ತಿ ವಾಹನಕ್ಕೆ ಕೈತೋರಿಸಿ ನಿಲ್ಲಿಸುವಂತೆ ಸೂಚಿಸುತ್ತಾರೆ. ಚಾಲಕನ ಕಾಲು ದಿಢೀರ್ ಎಂದು ಬ್ರೇಕ್ ಮೇಲೆ ಹೋಗುತ್ತದೆ. ವಾಹನ ನಿಧಾನವಾಗಿ ರಸ್ತೆಯ ಬದಿಗೆ ಬಂದು ನಿಲ್ಲುತ್ತದೆ. ಅಲ್ಲಿದ್ದ ಪೊಲೀಸರು ವಾಹನದ ಒಳಗಿರುವ ಬ್ಯಾಗ್ ತಪಾಸಣೆ ನಡೆಸಿ, ವಿಡಿಯೊ ಚಿತ್ರೀಕರಣ ಮಾಡುತ್ತಾರೆ...

ಇಂತಹ ದೃಶ್ಯಗಳು ನಗರದ ಹೊರವಲಯದಲ್ಲಿ ಕಂಡುಬರುತ್ತಿವೆ. ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಮಧ್ಯ ಕರ್ನಾಟಕದ ಜಿಲ್ಲೆ ದಾವಣಗೆರೆಯ ಮೇಲೆ ಪೊಲೀಸರು ಹೆಚ್ಚಿನ ಕಣ್ಗಾವಲು ಇರಿಸಿದ್ದಾರೆ. ಚುನಾವಣಾ ಆಯೋಗ ಕೂಡ ಅಕ್ರಮಗಳು ನಡೆಯದಂತೆ ಎಚ್ಚರಿಕೆ
ವಹಿಸಲು ಸೂಚನೆ ನೀಡಿದೆ. ಅದರಂತೆ ನಗರದ ಸುತ್ತೆಲ್ಲಾ ಚೆಕ್ಪೋಸ್ಟ್ ನಿರ್ಮಿಸಲಾಗಿದೆ. ಅಪರಿಚಿತ ವಾಹನ, ಹೆಚ್ಚಿನ ಮೊತ್ತದ ನಗದು ಸಾಗಣೆ, ಅನಧಿಕೃತ ಮದ್ಯ, ಅನುಮಾನಾಸ್ಪದ ವಸ್ತು, ಶಸ್ತ್ರಾಸ್ತ್ರ ಸಾಗಣೆ ಮೇಲೆ ಹಗಲು ರಾತ್ರಿ ಎನ್ನದೇ ಪೊಲೀಸರು ಹದ್ದಿನ ಕಣ್ಣಿಟ್ಟು ಕಾಯುತ್ತಿದ್ದಾರೆ.

ಅಕ್ರಮಗಳು ನಡೆಯದಂತೆ ತಡೆಯಲು ವಿವಿಧ ಇಲಾಖೆ ಅಧಿಕಾರಿಗಳನ್ನು ಒಳಗೊಂಡ 24 ತಂಡ ಗಳನ್ನು ರಚಿಸಲಾಗಿದೆ. ತಂಡದಲ್ಲಿ ಪೊಲೀಸರು ತಪಾಸಣೆ ನಡೆಸುತ್ತಿದ್ದಾರೆ. ಜತೆಗೆ, 24 ಫ್ಲೈಯಿಂಗ್ ಸ್ಕ್ವಾಡ್ಗಳೂ ಕೆಲಸ ಮಾಡುತ್ತಿವೆ. ಎಲ್ಲ ರಾಜಕೀಯ ಪಕ್ಷಗಳು ನಾಮಪತ್ರ ಸಲ್ಲಿಸುವ ಭರಾಟೆಯಲ್ಲಿದ್ದು, ಇನ್ನು ರಂಗೋಲಿಯ ಕೆಳಗೆ ನುಗ್ಗುವ ಕೆಲಸಕ್ಕೆ ಮುಂದಾಗಿಲ್ಲ.

ಜಿಲ್ಲಾಧಿಕಾರಿ ಎಸ್.ಟಿ.ಅಂಜನಕುಮಾರ್ ಅಧಿಕಾರಿಗಳ ಸಭೆ ನಡೆಸಿ, ಮಾದರಿ ನೀತಿ ಸಂಹಿತೆ ಉಲ್ಲಂಘನೆ, ವೆಚ್ಚ ಉಲ್ಲಂಘನೆಯಾದರೆ ಕೂಡಲೇ ವರದಿ ನೀಡಬೇಕು. ಮದ್ಯ, ಸೀರೆ ಹಾಗೂ ಹಣ ಹಂಚಿಕೆಯಂತಹ ಪ್ರಕರಣಗಳ ಮೇಲೆ ತೀವ್ರ ನಿಗಾವಹಿಸಬೇಕು ಎಂದು ತಾಕೀತು ಮಾಡಿದ್ದಾರೆ ಎಂದು ಗೊತ್ತಾಗಿದೆ. ಮಧ್ಯಕರ್ನಾಟಕದ ದಾವಣಗೆರೆ ವಿವಿಧ ಜಿಲ್ಲೆಗಳಿಗೆ ಸಂಪರ್ಕ ಕೊಂಡಿ. ರಾಜ್ಯದಲ್ಲಿ ಒಂದೇ ಹಂತದ ಚುನಾವಣೆ ನಡೆಯುತ್ತಿರುವ ಕಾರಣಕ್ಕೆ ಅಕ್ರಮಗಳು ನಡೆಯದಂತೆ ತಡೆಯಲು ಎಲ್ಲ ವ್ಯವಸ್ಥೆಗಳು ನಡೆದಿವೆ.

ಗಮನ ಸೆಳೆದಿದ್ದ ಚುನಾವಣೆ
ಅದು 2009ರ ಲೋಕಸಭಾ ಚುನಾವಣೆ. ರಾಷ್ಟ್ರೀಯ ಪಕ್ಷವೊಂದರ ಮುಖಂಡರೊಬ್ಬರು ಹಿರಿಯ ರಾಜಕಾರಣಿಯ ‘ತಲೆ ಕತ್ತರಿಸಿ’ ಎಂದು ಪತ್ರಿಕಾಗೋಷ್ಠಿಯಲ್ಲೇ ಹೇಳುವ ಮೂಲಕ ದೇಶದ ಗಮನ ಸೆಳೆದ ಕ್ಷೇತ್ರ ದಾವಣಗೆರೆ. ಅವರ ಮೇಲೆ ಪ್ರಕರಣವೂ ದಾಖಲಾಗಿತ್ತು. 2009ರಲ್ಲಿ ನೀತಿ ಸಂಹಿತೆ ಉಲ್ಲಂಘನೆ ಸಂಬಂಧ 46 ದೂರುಗಳು ದಾಖಲಾಗಿದ್ದು, ಅದರಲ್ಲಿ 37 ಕ್ರಿಮಿನಲ್ ಮೊಕದ್ದಮೆಗಳೇ ಆಗಿದ್ದವು.

ಆ ಚುನಾವಣೆಯಲ್ಲಿ ಬಾಡೂಟದ ವ್ಯವಸ್ಥೆ, ಹಣ, ಮದ್ಯ, ಸೀರೆ ಹಂಚಿಕೆ, ಅವಧಿ ಮೀರಿದ ಮೇಲೂ ರಾಜಕೀಯ ಮುಖಂಡರ ಭಾಷಣ ಸಂಬಂಧ ಹಲವು ದೂರುಗಳು ದಾಖಲಾಗಿದ್ದವು. 2009ರ ಏಪ್ರಿಲ್ 5ರಂದು ಪಕ್ಷವೊಂದು ಹೊನ್ನಾಳಿ ಹೋಟೆಲ್ನಲ್ಲಿ ಕಾರ್ಯಕರ್ತರಿಗೆ ಬಾಡೂಟದ ವ್ಯವಸ್ಥೆ ಮಾಡಿತ್ತು. ಖಚಿತ ಮಾಹಿತಿ ಪಡೆದ ಪೊಲೀಸರು ದಾಳಿ ನಡೆಸಿ ಪ್ರಕರಣ ದಾಖಲು ಮಾಡಿಕೊಂಡಿದ್ದರು. ಇನ್ನು 2009ರ ಏಪ್ರಿಲ್ 13ರಂದು ನಾಮಪತ್ರ ಸಲ್ಲಿಕೆ ಸಂಬಂಧ ಬಿಜೆಪಿ– ಕಾಂಗ್ರೆಸ್ ನಡುವೆ ದೊಡ್ಡ ಗಲಾಟೆಯೇ ನಡೆದಿತ್ತು. ರಾಜ್ಯದ ಮುಖಂಡರ ದಂಡೇ ನಗರಕ್ಕೆ ದಾಂಗುಡಿಯಿಟ್ಟಿತ್ತು.

ಪಕ್ಷವೊಂದರ ಮುಖಂಡರು ಜಿಲ್ಲಾ ಚುನಾವಣೆ ಅಧಿಕಾರಿ ವಿರುದ್ಧವೇ ಹರಿಹಾಯ್ದ ಘಟನೆಗೂ ಜಿಲ್ಲೆ ಸಾಕ್ಷಿ ಆಗಿತ್ತು. ಬಳಿಕ ಕಾಂಗ್ರೆಸ್ನ ನಾಲ್ವರ ಮೇಲೆ ಪ್ರಕರಣ ದಾಖಲಾಗಿತ್ತು. ಬಳಿಕ ಆ ಪ್ರಕರಣಕ್ಕೆ 2009ರ ಏ.20ರಂದು ಬಿ–ರಿಪೋರ್ಟ್ ಹಾಕಲಾಗಿದೆ. ಹೊನ್ನಾಳಿ ವಿಧಾನಸಭಾ ಕ್ಷೇತ್ರದಿಂದ ಹೆಚ್ಚಿನ ದೂರುಗಳು ಬಂದಿದ್ದವು. ಹೊನ್ನಾಳಿಯ ನದಿ ಪಾತ್ರದಲ್ಲಿ ಕಾರ್ಯಕರ್ತರಿಗೆ ಊಟದ ವ್ಯವಸ್ಥೆ ಮಾಡಲಾಗಿತ್ತು. ಆಗ ಹಲವರನ್ನು ಬಂಧಿಸಲಾಗಿತ್ತು.

2009ರ ಏಪ್ರಿಲ್ 15ರಂದು ಪೊಲೀಸರು ದೊಡ್ಡ ಭೇಟೆಯನ್ನೇ ಆಡಿದ್ದರು. ಕೊಂಡಜ್ಜಿ ರಸ್ತೆ ಬಳಿ ದಾಖಲೆ ಇಲ್ಲದ 160 ಸ್ಟೀಲ್ ಬಾಕ್ಸ್, ಮಿಕ್ಸಿ ವಶಪಡಿಸಿಕೊಂಡಿದ್ದರು. ಚಳ್ಳಕೆರೆಯಿಂದ ದಾವಣಗೆರೆಗೆ ಬರುತ್ತಿದ್ದ ವಾಹನವೊಂದರಲ್ಲಿದ್ದ ₨ 73.50 ಲಕ್ಷ ನಗದು ಹಾಗೂ ಎರಡು ಪಿಸ್ತೂಲ್ಗಳನ್ನು 2009ರ ಮಾರ್ಚ್ 4ರಂದು ಪೊಲೀಸರು ವಶಪಡಿಸಿಕೊಂಡಿದ್ದರು. ಅಭ್ಯರ್ಥಿಗಳ ಮೇಲೆ ನೀತಿ ಸಂಹಿತೆ ಉಲ್ಲಂಘನೆಯಂತಹ ಪ್ರಕರಣಗಳೂ ದಾಖಲಾಗಿದ್ದವು.

ಎಷ್ಟು ಪ್ರಕರಣದಲ್ಲಿ ಶಿಕ್ಷೆ?
2009ರ ಚುನಾವಣೆಯಲ್ಲಿ ನೀತಿ ಸಂಹಿತೆ ಉಲ್ಲಂಘನೆ ಸಂಬಂಧ 46 ಪ್ರಕರಣಗಳು ದಾಖಲಾಗಿದ್ದವು. ಅದರಲ್ಲಿ 13 ಪ್ರಕರಣಗಳಲ್ಲಿ ಆರೋಪಿಗಳಿಗೆ ಶಿಕ್ಷೆಯಾಗಿದೆ. 16 ಪ್ರಕರಣಗಳು ಖುಲಾಸೆಗೊಂಡರೆ; ಇನ್ನು ಕೆಲವು ಪ್ರಕರಣಕ್ಕೆ ಸಾಕ್ಷಾಧಾರಗಳ ಕೊರತೆ ಆಗಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.