ಭಾನುವಾರ, ಮೇ 16, 2021
22 °C

ವಿಘ್ನ ವಿನಾಯಕನಿಗೆ ಸಂಭ್ರಮದ ವಿದಾಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಅಂಕೋಲಾ: ಕಳೆದ 12 ದಿನಗಳಿಂದ ನಗರದ ಮತ್ತು ಸುತ್ತಮುತ್ತಲಿನ ಗ್ರಾಮಸ್ಥರ ಭಕ್ತಾದಿಗಳಿಂದ ಮೋದಕ, ಫಲಹಾರ ಪಡೆದು ಸಂಪ್ರೀತನಾಗಿದ್ದ ಗಣೇಶನಿಗೆ ಶನಿವಾರ ಸಂಭ್ರಮದ ವಿದಾಯ ಹೇಳಲಾಯಿತು. ಹೆಸ್ಕಾಂ ಕಚೇರಿ ಆವರಣದಲ್ಲಿ ಪ್ರತಿಷ್ಠಾಪಿಸಲಾಗಿದ್ದ ಗಣೇಶನನ್ನು ವಿದ್ಯುತ್ ದೀಪಾಲಂಕೃತ ವಾಹನದಲ್ಲಿ ಕುಳ್ಳಿರಿಸಲಾಗಿತ್ತು. ಗಣೇಶನ ಮೂರ್ತಿಯನ್ನು ವಿವಿಧ ಹೂವುಗಳಿಂದ ಅಲಂಕರಿಸಲಾಗಿತ್ತು. ವಾದ್ಯ ಗೋಷ್ಠಿ, ಕಿವಿ ಗಡಚಿಕ್ಕುವ ಸಿಡಿಮದ್ದುಗಳನ್ನು ಸಿಡಿಸುತ್ತ ಉತ್ಸಾಹಿಗಳ ಕುಣಿತ ದೊಂದಿಗೆ ಮೆರವಣಿಗೆಯಲ್ಲಿ ಕೊಂಡೊಯ್ಯಲಾಯಿತು. ಇದೇ ರೀತಿ ಅಟೋ ರಿಕ್ಷಾ ಸಂಘದವರು ಪ್ರತಿಷ್ಠಾಪಿಸಿದ್ದ ಗಣೇಶನ ವಿಸರ್ಜನಾ ಮೆರವಣಿಗೆಯಲ್ಲಿ ನೂರಾರು ಚಾಲಕರು, ನಾಗರಿಕರು ಮತ್ತು ಮಾಲಕರು ಸಾಂಪ್ರದಾಯಿಕ ವಾಗಿ ಸಡಗರದಿಂದ ಪಾಲ್ಗೊಂಡರು.

  ಕೇಣಿ ಹಳ್ಳದಲ್ಲಿ ಶಾಂತಿಯುತವಾಗಿ ಗಣೇಶನನ್ನು ವಿಸರ್ಜಿಸಲಾಯಿತು. ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಕಲ್ಪಿಸಲಾಗಿತ್ತು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.