ಸೋಮವಾರ, ಮಾರ್ಚ್ 1, 2021
31 °C
ಒಟ್ಟು 38 ಪ್ರಶಸ್ತಿಗಳ ಪೈಕಿ 32, ರಾಜ್ಯದ ‘ಬಾಲವಿಜ್ಞಾನಿ’ಗಳ ಪಾಲು

ವಿಜ್ಞಾನ ಮಾದರಿ: ಕರ್ನಾಟಕ ಪಾರಮ್ಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ವಿಜ್ಞಾನ ಮಾದರಿ: ಕರ್ನಾಟಕ ಪಾರಮ್ಯ

ಹುಬ್ಬಳ್ಳಿ: ಕೃಷಿ ಚಟುವಟಿಕೆ ಸುಲಭ ಗೊಳಿಸಿ ರೈತರಿಗೆ ನೆರವಾಗುವ ಆಶಯ ವನ್ನು ವಿವಿಧ ಮಾದರಿಗಳ ಮೂಲಕ ಬಿಂಬಿಸಿದ ರಾಜ್ಯದ ಬಾಲವಿಜ್ಞಾನಿಗಳು ರಾಷ್ಟ್ರಮಟ್ಟದ ವಿಜ್ಞಾನ ಮಾದರಿ ತಯಾರಿಕೆ ಸ್ಪರ್ಧೆ ‘ಜಿಜ್ಞಾಸಾ’ದ ಬಹುತೇಕ ಪ್ರಶಸ್ತಿಗಳನ್ನು ಬಾಚಿಕೊಂಡರು.ಹುಬ್ಬಳ್ಳಿ–ಧಾರವಾಡ ಮಹಾನಗರ ಪಾಲಿಕೆ, ದೇಶಪಾಂಡೆ ಫೌಂಡೇಷನ್‌ ಹಾಗೂ ಸರ್ವಶಿಕ್ಷಣ ಅಭಿಯಾನದ ಸಹಯೋಗದಲ್ಲಿ ಅಗಸ್ತ್ಯ ಫೌಂಡೇಷನ್‌ ಹಮ್ಮಿಕೊಂಡಿದ್ದ ಸ್ಪರ್ಧೆಯ ಐದು ವಿಭಾಗಗಳ ಒಟ್ಟು 38 ಪ್ರಶಸ್ತಿಗಳ ಪೈಕಿ 32, ರಾಜ್ಯದ ಸ್ಪರ್ಧಿಗಳ ಪಾಲಾಯಿತು.ನೆಹರೂ ಮೈದಾನದಲ್ಲಿ ಬುಧವಾರ ಸಂಜೆ ನಡೆದ ಸಮಾರೋಪ ಸಮಾರಂಭದಲ್ಲಿ ಅಬ್ಬರದ ಸಂಗೀತ ಮತ್ತು ಚಪ್ಪಾಳೆ ದನಿಯ ನಡುವೆ ಬಹುಮಾನ ಸ್ವೀಕರಿಸಿದ ವಿಜೇತರು ಸಂಭ್ರಮದಿಂದ ನಲಿದರು.ಪ್ರಥಮ ಬಹುಮಾನ ಪಡೆದವರಿಗೆ ₹ 20,000, ದ್ವಿತೀಯ ಬಹುಮಾನ ವಿಜೇತರಿಗೆ ₹ 10,000 ಮತ್ತು ವಿಶೇಷ ಬಹುಮಾನ ವಿಜೇತರಿಗೆ ತಲಾ ₹ 3,000 ಮೊತ್ತದ ಚೆಕ್‌ ವಿತರಿಸಲಾಯಿತು. ಪ್ರಶಸ್ತಿಯಲ್ಲಿ ಪ್ರಮಾಣ ಪತ್ರ ಹಾಗೂ ಫಲಕ ಕೂಡ ಒಳಗೊಂಡಿತ್ತು.ಬಹುಮಾನ ವಿಜೇತ ರಾಜ್ಯದ ವಿದ್ಯಾರ್ಥಿಗಳಲ್ಲಿ ಬಹುತೇಕರು ಕೃಷಿ ಚಟುವಟಿಕೆ ಮತ್ತು ರೈತರಿಗೆ ಅನುಕೂಲವಾಗುವ ಮಾದರಿಗಳನ್ನು ತಯಾರಿಸಿದ್ದರು. ಪರಿಸರ  ಸ್ನೇಹಿ ಟ್ರ್ಯಾಕ್ಟರ್‌, ಎಲೆ ಒಣಗಿಸುವ ಯಂತ್ರ, ಕೊಳವೆ ಬಾವಿ ಕೊರೆಯುವ ರೋಬೋಟ್‌ ಇತ್ಯಾದಿ ಮಾದರಿಗಳು ಇದರಲ್ಲಿ ಒಳಗೊಂಡಿವೆ.ಬಹುಮಾನಗಳ ವಿವರ: ಪ್ರಾಥಮಿಕ ಶಾಲೆ ವಿಭಾಗ: ಸೃಷ್ಟಿ ಶಿರೋಳಕರ (ಶ್ರೀ ಮಂಜುನಾಥೇಶ್ವರ ಶಾಲೆ, ಧಾರವಾಡ)–1, ಮನಸ್ವಿತ್‌ ಶಂಕರ (ಸುದಾನಾ ವಸತಿ ಶಾಲೆ, ದಕ್ಷಿಣ ಕನ್ನಡ)–2; ವೀಣಾ ಡಿ.ಕಂಬಾರ, ಅಶ್ವಿನಿ ಅನ್ಯಗೋಳ (ಜಿ.ಎಚ್‌.ಕೆ.ಜಿ.ಎಸ್‌, ಜಮಖಂಡಿ, ಬಾಗಲಕೋಟೆ ಜಿಲ್ಲೆ), ನವೀನ ವಿ, ಭೀಮಪ್ಪ ಬಿ.ಜೆ (ಜಿ.ಎಚ್‌.ಪಿ.ಎಸ್‌, ಬಸವಪುರ ಬಳ್ಳಾರಿ), ಶ್ರೀ ಚರಣ ಎಸ್‌. ಭಟ್‌, ವೈಷ್ಣವಿ ಟಿ.ವಿ (ಜಿ.ಎಚ್‌.ಪಿ.ಎಸ್‌, ಶಿವಮೊಗ್ಗ), ಆರ್ಯನ್‌ ರಾಜ್‌ (ಬಿಹಾರ), ಸುಹಾಸ್‌, ಜಯಶ್ರೀ (ಜಿ.ಜಿ.ಸಿ, ಸಾಗರ, ಶಿವಮೊಗ್ಗ) (ಎಲ್ಲರಿಗೂ ವಿಶೇಷ ಬಹುಮಾನ). ಹೈಸ್ಕೂಲ್‌ ವಿಭಾಗ: ಜಿಲ್ಕಾ ಹಿಮಾಂಶು ಕೀರ್ತಿಭಾಯಿ (ಗುಜರಾತ್‌)–1, ಎನ್‌.ಗಾಯತ್ರಿ (ಶಾಂತಿನಿಕೇತನ ಶಾಲೆ, ರಾಯಚೂರು)–2; ಕೆನಿತ್ ಗೋಕಾವಿ, ಪ್ರಿಯಾಂಕಾ ಪುರವ (ಸೇಂಟ್ ಮೈಕೆಲ್ಸ್ ಶಾಲೆ, ಹುಬ್ಬಳ್ಳಿ), ಕನಕರಾಜ ಲಕ್ಕಲಶೆಟ್ಟಿ, ಮಂಜಪ್ಪ ಮೇಟಿ (ಜಿ.ಎಚ್‌.ಎಸ್‌. ಹಿರೇಗೊನ್ನಗರ, ಕೊಪ್ಪಳ), ರೋಹನ್‌ ಕಲಕೇರ, ರೋಹಿತ್‌ ಕೋಲಕಾರ (ತುಂಗಳ ಶಾಲೆ, ಜಮಖಂಡಿ), ಸುನಿಲ್‌ ಡಿ.ಕಡ್ಡು, ಉಮೇಶ ಜಂಬಗಿ (ಜುನೇದಿಯಾ ಶಾಲೆ, ಕುಡಚಿ, ಬೆಳಗಾವಿ ಜಿಲ್ಲೆ), ನಾಗಶ್ರೀ ಎಂ.ಜೆ, ಚೈತ್ರಾ ಸೇಟ್‌ (ಕಿತ್ತೂರು ರಾಣಿ ಚನ್ನಮ್ಮ ಶಾಲೆ, ಸಿದ್ದಾಪುರ, ಉತ್ತರ ಕನ್ನಡ ಜಿಲ್ಲೆ) (ಎಲ್ಲರಿಗೂ ವಿಶೇಷ ಬಹುಮಾನ).ಕಾಲೇಜು ವಿಭಾಗ: ನೀಲೇಶ ರಾಜ್‌ (ಪಟ್ನಾ)–1, ಪ್ರವೀಣ (ರಾಜಸ್ತಾನ)–2; ಫೈಜುಲ್‌ ರೆಹಮಾನ್‌, ಜಾಫರ್ ಸಾದಿಕ್‌ (ಬಸವೇಶ್ವರ ಕಾಲೇಜು, ಬಾಗಲ ಕೋಟೆ), ಪಿ.ಅನನ್ಯ, ಪೃಥ್ವಿ ಎಂ (ವೈ.ಬಿ. ಅಣ್ಣಿಗೇರಿ ಕಾಲೇಜು, ಧಾರವಾಡ), ಆದಿತ್ಯ ಕವಳೆ (ಪುಣೆ), ಆಲೋಕ್‌ ಬಿ, ಅಜಯಗೌಡ (ವಿದ್ಯಾ ಹಂಚಿನಮನಿ ಕಾಲೇಜು, ಧಾರವಾಡ), ಜಾಫರ್‌ ಸಾದಿಕ್‌ (ಆಂಧ್ರಪ್ರದೇಶ) (ಎಲ್ಲರಿಗೂ ವಿಶೇಷ ಬಹುಮಾನ).ಸ್ಥಳದಲ್ಲೇ ಮಾದರಿ ತಯಾರಿ ವಿಭಾಗ: ಅಚ್ಯುತ ಎಚ್‌, ಸಮರ್ಥ (ಶ್ರೀ ಮಂಜುನಾಥೇಶ್ವರ ಶಾಲೆ, ಧಾರವಾಡ)–1, ಸರಸ್ವತಿ ಮಾಚಕನೂರ, ಸಚಿನ್‌ ಚಿಮ್ಮಲಗಿ (ಚಿಕ್ಕ ಅಸಂಗಿ ಸರ್ಕಾರಿ ಶಾಲೆ, ವಿಜಯಪುರ)–2, ಪ್ರಣವ ವಜ್ರೇಶ್ವರ, ಪ್ರಜ್ವಲ್‌ (ಶ್ರೀ ರಾಜೇಶ್ವರಿ ವಿದ್ಯಾನಿಕೇತನ, ಹುಲ ಕೋಟಿ, ಗದಗ), ಶ್ರೀಧರಗೌಡ, ಈರಪ್ಪ ಕುಮಾರ (ಮಾರಲ್ ಶಾಲೆ, ಸವಣೂರ, ಹಾವೇರಿ ಜಿಲ್ಲೆ), ಅವಿನಾಶ ಪೊಲೀಸಪಾಟೀಲ (ಎಸ್‌.ವಿ.ಎಂ.ಶಾಲೆ, ಇಳಕಲ್‌, ಬಾಗಲಕೋಟೆ ಜಿಲ್ಲೆ), ಸೌರವ ಎನ್‌.ಎಸ್‌, ಪ್ರಮಿತ್‌ ದೇಸಾಯಿ (ಜಿಂದಾಲ್‌ ವಿದ್ಯಾಮಂದಿರ, ಬಳ್ಳಾರಿ), ಭೂಮಿಕಾ ಬಿದರಿ (ಆರ್‌.ಎಂ.ಎಸ್‌.ಎ, ಹುನಗುಂದ, ಬಾಗಲಕೋಟೆ ಜಿಲ್ಲೆ). (ಎಲ್ಲರಿಗೂ ವಿಶೇಷ ಬಹುಮಾನ).ಗುಜರಿ ಸಾಮಗ್ರಿಯಿಂದ ಮಾದರಿ ತಯಾರಿ ವಿಭಾಗ: ಕಾರ್ತೀಕ ಎ, ನದೀಶ ಎಸ್‌ (ಹಾವೇರಿ), ಶ್ರೀತೇಜ ಮನಹಳ್ಳಿ, ಸೋಮಲಿಂಗ (ಬಾಪೂಜಿ ಶಾಲೆ, ಬಾಗಲಕೋಟೆ), ಮಂಜುನಾಥ ಜಾಧವ, ಸಾತ್ವಿಕ ಎನ್‌ (ಹೊಂಗಿರಣ ಶಾಲೆ, ಹೆಗ್ಗೋಡು, ಶಿವಮೊಗ್ಗ), ದೀಪಾ, ಶಮೀನಾ (ಜಿ.ಎಂ.ಪಿ. ಎಚ್‌.ಎಸ್‌, ಬಳ್ಳಾರಿ), ಚಂದ್ರಶೇಖರ ಕಿತ್ತೂರ, ಶಿವನಗೌಡ ಹುಡೇದ (ಬಾಸೆಲ್‌ ಮಿಷನ್‌ ಶಾಲೆ, ಬೆಟಗೇರಿ, ಗದಗ), ಪೂಜಾ, ತನುಜಾ (ಎಸ್‌.ಆರ್‌.ಎಸ್.ವಿ ಶಾಲೆ, ಮಾನ್ವಿ, ರಾಯಚೂರ), ಕಾರ್ತೀಕ, ಅಖಿಲೇಶ (ಶ್ರೀ ವಿದ್ಯಾರಣ್ಯ ಶಾಲೆ, ಬೀದರ್‌), ಸಾಯಿ ಕುಮಾರ, ಪ್ರವೀಣಕುಮಾರ (ಸರ್ಕಾರಿ ಶಾಲೆ, ಲಿಂಗಸಗೂರು, ರಾಯಚೂರು), ಪವನ್‌ ಕುಮಾರ, ಸಿದ್ದನಗೌಡ (ಆದರ್ಶ ವಿದ್ಯಾಲಯ, ಲಿಂಗಸಗೂರು), ಮಹೇಶ ಹೆಗ್ಗೂರು, ಸಂಪತ್‌ ಕುಮಾರ್‌ (ಆದರ್ಶ ವಿದ್ಯಾಲಯ ಬಾದಾಮಿ, ಬಾಗಲಕೋಟೆ ಜಿಲ್ಲೆ) (ಎಲ್ಲರಿಗೂ ವಿಶೇಷ ಬಹುಮಾನ).

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.