ಹೆಲಿಕಾಪ್ಟರ್ ಅಪಘಾತ: 12 ಸಾವು
ಬಂದರ್ ಸೇರಿ ಬೆಗ್ವಾನ್/ಬ್ರೂನಿ (ಎಪಿ): ಬ್ರೂನಿ ವಾಯು ಪಡೆಗೆ ಸೇರಿದ್ದ ಹೆಲಿಕಾಪ್ಟರ್ ಅಪಘಾತಕ್ಕೀಡಾದ ಪರಿಣಾಮ 12 ಮಂದಿ ಮೃತಪಟ್ಟಿದ್ದಾರೆ. ಉಲು ಬೆಲಾತಿ ಎಂಬಲ್ಲಿ ಬೆಲ್- 212 ಹೆಲಿಕಾಪ್ಟರ್ ತರಬೇತಿ ಮುಗಿಸಿ ಹಿಂತಿರುಗುತ್ತಿದ್ದ ವೇಳೆ ಈ ಅಪಘಾತ ಸಂಭವಿಸಿದೆ ಎಂದು ಬ್ರೂನಿಯ ರಕ್ಷಣಾ ಸಚಿವಾಲಯ ತಿಳಿಸಿದೆ.

ಬಸ್ ಉರುಳಿ 26 ಮಂದಿ ಬಲಿ
ಮೆಕ್ಸಿಕೊ (ಎಎಫ್ಪಿ): ಬಸ್ಸೊಂದು ಸೇತುವೆಯಿಂದ ಕಮರಿಗೆ ಉರುಳಿದ ಪರಿಣಾಮ 26 ಪ್ರಯಾಣಿಕರು ಮೃತ ಪಟ್ಟು, ಇತರ 27 ಮಂದಿ ಗಾಯಗೊಂಡಿರುವ ಘಟನೆ ಪಶ್ಚಿಮ ಮೆಕ್ಸಿಕೊದಲ್ಲಿ ಶನಿವಾರ ಸಂಭವಿಸಿದೆ.
18 ಮಂದಿ ತೀವ್ರವಾಗಿ ಗಾಯಗೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಪ್ರತಿ ವರ್ಷ ಮೆಕ್ಸಿಕೊದಲ್ಲಿ ರಸ್ತೆ ಅಪಘಾತಕ್ಕೆ 24 ಸಾವಿರ ಮಂದಿ ಬಲಿಯಾಗುತ್ತಿದ್ದಾರೆ ಎಂದು ವಿಮಾ ಕಂಪೆನಿಯೊಂದು ಹೇಳಿದೆ.

ವೀಣಾ ಮಲ್ಲಿಕ್ ಕಾರ್ಯಕ್ರಮ ರದ್ದು
ಕರಾಚಿ (ಪಿಟಿಐ): ವಿವಾದಾತ್ಮಕ ನಟಿ ಹಾಗೂ ರೂಪದರ್ಶಿ ವೀಣಾ ಮಲ್ಲಿಕ್ ಅವರು ಭಾಗವಹಿಸಿದ ಕಾರ್ಯಕ್ರಮದ ಪ್ರಸಾರವನ್ನು ಪಾಕಿಸ್ತಾನದ `ಹೀರೊ~ ಚಾನೆಲ್ ರದ್ದು ಮಾಡಿದೆ. ರಂಜಾನ್ ತಿಂಗಳ ಪ್ರಯುಕ್ತ ವಿಶೇಷ ಕಾರ್ಯಕ್ರಮ ಪ್ರಸಾರ ಮಾಡುವುದಾಗಿ ಚಾನೆಲ್ ಪ್ರಕಟಿಸಿತ್ತು. ಆದರೆ ಅದರಲ್ಲಿ ವೀಣಾ ಮಲ್ಲಿಕ್ ನಟಿಸಿದ್ದು, ಅವರ ವಿರುದ್ಧ ಸಾರ್ವಜನಿಕರ ಆಕ್ರೋಶ ವ್ಯಕ್ತಪಡಿಸಿದ ಕಾರಣ ಪ್ರಸಾರವನ್ನು ರದ್ದು ಪಡಿಸಲಾಗಿದೆ ಎನ್ನಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.