ಗುರುವಾರ , ಮೇ 19, 2022
24 °C

ವಿಮಾನದಲ್ಲಿಸ್ಥೂಲದೇಹಿಗಳಿಗೆ ಅಗಲದ ಆಸನ!

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಲಂಡನ್ (ಪಿಟಿಐ): ಸ್ಥೂಲಕಾಯದ ಪ್ರಯಾಣಿಕರ ಸಂಖ್ಯೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಜನಪ್ರಿಯ ಎ-320 ಜೆಟ್‌ಗಳ ಆಸನಗಳ ಅಗಲ ಹೆಚ್ಚಿಸಲು ವಿಮಾನ ತಯಾರಿಕಾ ಕಂಪೆನಿ ಏರ್‌ಬಸ್~ ನಿರ್ಧರಿಸಿದೆ.ಆದರೆ, ಮರುವಿನ್ಯಾಸದ ನಂತರವೂ ವಿಮಾನದ ಆಸನಗಳ ಸಂಖ್ಯೆ ಮುಂಚಿನಷ್ಟೇ ಇರಲಿದೆ. ಅಂದರೆ, ಸ್ಥೂಲದೇಹಿಗಳಿಗಾಗಿ ತೆಳ್ಳಗಿನ ಕಾಯದವರು ಸ್ವಲ್ಪ ತ್ಯಾಗ ಮಾಡಬೇಕಾಗುತ್ತದೆ! ಈ ಮುಂಚೆ ವಿಮಾನದ ಪ್ರತಿ ಸಾಲಿನಲ್ಲಿ ತಲಾ 18 ಇಂಚು ಅಗಲದ ಮೂರು ಸೀಟುಗಳು ಇರುತ್ತಿದ್ದವು. ಈಗ ಸ್ಥೂಲದೇಹಿಗಳಿಗಾಗಿ ಒಂದು ಸೀಟಿನ ಅಗಲವನ್ನು 20 ಇಂಚಿಗೆ ಹೆಚ್ಚಿಸಿ, ಉಳಿದ ಎರಡು ಸೀಟುಗಳ ಅಗಲವನ್ನು ತಲಾ 17 ಇಂಚಿಗೆ ತಗ್ಗಿಸಲಾಗುವುದು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.