ಭಾನುವಾರ, ಜನವರಿ 26, 2020
29 °C
2002 ಗುಜರಾತ್‌ ಗಲಭೆ: ವಾಜಪೇಯಿ –ಮೋದಿ ಪತ್ರ

ವಿವರ ಬಹಿರಂಗಕ್ಕೆ ನಕಾರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ (ಪಿಟಿಐ): ಮಾಜಿ ಪ್ರಧಾನಿ ಅಟಲ್‌ ಬಿಹಾರಿ ವಾಜಪೇಯಿ ಮತ್ತು ಗುಜರಾತ್‌ ಮುಖ್ಯಮಂತ್ರಿ ನರೇಂದ್ರ ಮೋದಿ ನಡುವೆ 2002ರ ಗುಜರಾತ್‌ ಗಲಭೆ ಸಂದರ್ಭದಲ್ಲಿ ನಡೆದಿರುವ ಪತ್ರ ವ್ಯವಹಾರವನ್ನು ಬಹಿರಂಗ­ಪಡಿಸಲು ಪ್ರಧಾನಿ ಕಾರ್ಯಾ­ಲಯ(ಪಿಎಂಒ) ನಿರಾಕರಿಸಿದೆ.ತಪ್ಪಿತಸ್ಥರ ತನಿಖೆ, ಬಂಧನ ಅಥವಾ ವಿಚಾರಣೆ ಪ್ರಕ್ರಿಯೆಗೆ ಅಡ್ಡಿಯಾಗು­ವಂ­ತಿದ್ದರೆ ಮಾಹಿತಿ ಬಹಿರಂಗಪಡಿಸ­ದಿ­ರಲು ಅವಕಾಶ ಇದೆ ಎಂದು ಪಾರದರ್ಶಕತೆ ಕಾಯ್ದೆಯ 8 (1) ಎಚ್‌ ಸೆಕ್ಷನನ್ನು ಉಲ್ಲೇಖಿಸಿ ಪಿಎಂಒ ಈ ಮಾಹಿತಿ ಕೇಳಿರುವ ಮಾಹಿತಿ ಹಕ್ಕು ಅರ್ಜಿಗೆ ಪ್ರತಿಕ್ರಿಯೆ ನೀಡಿದೆ.ಪಿಎಂಒ ಈ ಪ್ರತಿ­ಕ್ರಿಯೆ, ವಾಜಪೇಯಿ ಮತ್ತು ಮೋದಿ ನಡು­ವಿನ ಸಂವಹನ­ದಲ್ಲಿ ಗಲಭೆಗೆ ಸಂಬಂ­ಧಿ­ಸಿದ ಅಥವಾ ಗಲಭೆಯ ಹಿಂದಿನ ಜನಗಳ ಬಗ್ಗೆ ಮಾಹಿತಿ ಇರ­ಬಹುದು ಎಂಬ ಅನುಮಾನ  ಹುಟ್ಟುಹಾಕಿದೆ.ಪಿಎಂಒ ಮತ್ತು ಗುಜರಾತ್‌ ಸರ್ಕಾರದ ನಡುವೆ ರಾಜ್ಯದ ಕಾನೂನು ಮತ್ತು ಸುವ್ಯವಸ್ಥೆಗೆ ಸಂಬಂಧಿಸಿ ಫೆಬ್ರುವರಿ 27, 2002 ಮತ್ತು ಏಪ್ರಿಲ್‌ 30, 2002ರ ನಡುವೆ ನಡೆದಿರುವ ಎಲ್ಲ ಸಂವಹನದ ಪ್ರತಿ ಒದಗಿಸುವಂತೆ ಅರ್ಜಿ ಸಲ್ಲಿಸಲಾಗಿತ್ತು.

ಪ್ರತಿಕ್ರಿಯಿಸಿ (+)