ಮಂಗಳವಾರ, ಜೂನ್ 15, 2021
25 °C

ವಿವಿಧ ಪ್ರಶಸ್ತಿ ಆಯ್ಕೆ ಸಮಿತಿ ಪ್ರಕಟ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು:  2011ನೇ ಸಾಲಿನ ಜಾನಪದಶ್ರೀ, ದಾನಚಿಂತಾಮಣಿ ಅತ್ತಿಮಬ್ಬೆ ಮತ್ತು ಜಕಣಾಚಾರಿ ಪ್ರಶಸ್ತಿಗಳಿಗೆ ಪ್ರತ್ಯೇಕ ಆಯ್ಕೆ ಸಮಿತಿ ನೇಮಕ ಮಾಡಿ ಸರ್ಕಾರ ಶನಿವಾರ ಆದೇಶ ಹೊರಡಿಸಿದೆ.ಸಮಿತಿಯ ಅಧ್ಯಕ್ಷರು ಮತ್ತು ಸದಸ್ಯರ ವಿವರ ಇಲ್ಲಿದೆ:ಜಾನಪದಶ್ರೀ ಪ್ರಶಸ್ತಿ: ಬಳ್ಳಾರಿಯ ಈರಮ್ಮ (ಅಧ್ಯಕ್ಷೆ), ಶಿವಮೊಗ್ಗದ ಡಾ.ತೀ.ನಂ. ಶಂಕರನಾರಾಯಣ, ಗುಲ್ಬರ್ಗದ ಡಾ.ಪಿ.ಕೆ. ಖಂಡೋಬ, ವಿಜಾಪುರದ ಶಿವನಗೌಡ ಮಲ್ಲಪ್ಪ ಕೋಟಿ, ಉಡುಪಿಯ ಗೌರಿ ಸಾಸ್ತಾನ. ಜಾನಪದ ಅಕಾಡೆಮಿ ಹಾಗೂ ಯಕ್ಷಗಾನ ಬಯಲಾಟ ಅಕಾಡೆಮಿಗಳ ಅಧ್ಯಕ್ಷರು ಪದನಿಮಿತ್ತ ಸದಸ್ಯರಾಗಿದ್ದಾರೆ.ದಾನಚಿಂತಾಮಣಿ ಅತ್ತಿಮಬ್ಬೆ ಪ್ರಶಸ್ತಿ: ಸುಧಾಮೂರ್ತಿ (ಅಧ್ಯಕ್ಷೆ), ಬೆಂಗಳೂರು ವಿಶ್ವವಿದ್ಯಾಲಯದ ಡಾ. ಸಮತಾ ದೇಶಮಾನೆ, ಗುಲ್ಬರ್ಗದ ಡಾ. ಜಯಶ್ರಿ ದಂಡೆ, ಧಾರವಾಡದ ಪ್ರೊ. ಸುಕನ್ಯಾ ಮಾರುತಿ, ಹಂಪಿ ವಿ.ವಿ.ಯ ಡಾ. ಮಲ್ಲಿಕಾ ಘಂಟಿ.ಜಕಣಾಚಾರಿ ಪ್ರಶಸ್ತಿ: ವೆಂಕಟಾಚಲಪತಿ (ಅಧ್ಯಕ್ಷ), ಬೆಳಗಾವಿಯ ಸಿದ್ಧಪ್ಪ ಜಿ. ಪತ್ತಾರ, ಬಳ್ಳಾರಿಯ ಜಿ.ಬಿ.   ಹಂಸಾನಂದಾಚಾರ್ಯ, ಚಿಕ್ಕಮಗಳೂರಿನ ಜಯಣ್ಣಾಚಾರ್, ನೆಲಮಂಗಲದ ಎಸ್.ಮರಿಸ್ವಾಮಿ. ಶಿಲ್ಪಕಲಾ ಅಕಾಡೆಮಿ ಅಧ್ಯಕ್ಷರು ಪದನಿಮಿತ್ತ ಸದಸ್ಯರಾಗಿರುತ್ತಾರೆ.ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಆಯುಕ್ತ ಮನು ಬಳಿಗಾರ್ ಅವರು ಮೂರೂ ಸಮಿತಿಗಳಿಗೆ ಸದಸ್ಯ ಕಾರ್ಯದರ್ಶಿಯಾಗಿದ್ದಾರೆ ಎಂದು ಇಲಾಖೆಯ ಪ್ರಕಟಣೆ ತಿಳಿಸಿದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.