ದಾವಣಗೆರೆ: ನಗರದ ಎವಿಕೆ ಕಾಲೇಜು ರಸ್ತೆಯ ಗುರುಭವನದಲ್ಲಿ ಸೋಮವಾರ ವಿಶೇಷ ಕೈಮಗ್ಗ ಉತ್ಪನ್ನಗಳ ಪ್ರದರ್ಶನ ಮತ್ತು ಮಾರಾಟ ಮೇಳ ಆರಂಭವಾಗಿದೆ.

ಜವಳಿ ಮಂತ್ರಾಲಯದ ಅಭಿವೃದ್ಧಿ ಆಯುಕ್ತರು (ಕೈಮಗ್ಗ) ಹಾಗೂ ಕೈಮಗ್ಗ ಮತ್ತು ಜವಳಿ ಇಲಾಖೆ ಆಶ್ರಯದಲ್ಲಿ ಈ ಮೇಳವನ್ನು ಹಮ್ಮಿಕೊಳ್ಳಲಾಗಿದೆ.

ಮೇಳದಲ್ಲಿ ದಾವಣಗೆರೆ ಜಿಲ್ಲೆಯ ನೇಕಾರ ಸಹಕಾರ ಸಂಘ, ಸಂಸ್ಥೆಗಳ ಉತ್ಪನ್ನಗಳಷ್ಟೇ ಅಲ್ಲದೆ ಬಾಗಲಕೋಟೆ, ಕೊಪ್ಪಳ, ಹಾವೇರಿ, ಮಂಡ್ಯ, ಮೈಸೂರು ಮತ್ತು ಚಾಮರಾಜನಗರ ಜಿಲ್ಲೆಗಳ 50ಕ್ಕೂ ಅಧಿಕ ನೇಕಾರ ಸಹಕಾರ ಸಂಘಗಳ ನೂರಾರು ಉತ್ಪನ್ನಗಳು ಅನಾವರಣಗೊಂಡಿವೆ. ಇವುಗಳೊಂದಿಗೆ ಉತ್ತರ ಪ್ರದೇಶದ ನೇಕಾರ ಸಹಕಾರ ಸಂಘದ ಉತ್ಪನ್ನಗಳಿವೆ.

‘ರಾಜ್ಯದ ನೇಕಾರ ಸಹಕಾರ ಸಂಘಗಳಿಗೆ ವಿಶಾಲವಾದ ಮಾರುಕಟ್ಟೆ ವ್ಯವಸ್ಥೆ ಕಲ್ಪಿಸಿಕೊಡುವ ಹಾಗೂ ಕೈ-ಮಗ್ಗ ಉತ್ಪನ್ನಗಳು ರಿಯಾಯ್ತಿ ದರದಲ್ಲಿ ನೇರವಾಗಿ ಗ್ರಾಹಕರಿಗೆ ತಲುಪಿಸುವ ಉದ್ದೇಶದಿಂದ ಮೇಳವನ್ನು ಆಯೋಜಿಸಲಾಗಿದೆ. ಹಬ್ಬದ ವಿಶೇಷ ದಿನಗಳಲ್ಲಿ ಗ್ರಾಹಕರು ಮೇಳದ ಸದುಪಯೋಗ ಪಡೆದುಕೊಳ್ಳಬೇಕು’ ಎಂದು ಜಿಲ್ಲಾ ಪಂಚಾಯ್ತಿ ಕೈಮಗ್ಗ ಮತ್ತು ಜವಳಿ ಇಲಾಖೆಯ ಸಹಾಯಕ ನಿರ್ದೇಶಕ ಎನ್.ಟಿ.ಸುರೇಶ್ ಹೇಳಿದರು.

ಮೊಳಕಾಲ್ಮುರಿನ ಅಪ್ಪಟ ರೇಷ್ಮೆ ಸೀರೆ, ಚಿಂತಾಮಣಿಯ ರೇಷ್ಮೆ ಸೀರೆ, ಉತ್ತರ ಕರ್ನಾಟಕದ ಇಳಕಲ್ ಸೀರೆ, ಗುಳೆದಗುಡ್ಡದ ಕಣದ ರೇಷ್ಮೆ ಸೀರೆ, ವಿನೂತನ ಶೈಲಿಯ ಬಣ್ಣ ಬಣ್ಣದ ಪ್ರಿಂಟೆಡ್ ಸೀರೆ, ಕಂಚಿಯ ರೇಷ್ಮೆ ಹಾಗೂ ಹತ್ತಿ ಸೀರೆ, ಖಾದಿ ಬಟ್ಟೆಯ ಅಂಗಿ, ಪಂಚೆ, ಲುಂಗಿ, ಬೆಡ್ಶೀಟ್, ಟವಲ್, ಉಣ್ಣೆ ಕಂಬಳಿ, ಜಮಖಾನ...

ಹೀಗೆ ಹತ್ತು ಹಲವು ಬಗೆಯ ಕೈಮಗ್ಗ ಉತ್ಪನ್ನಗಳು ರಾಜ್ಯದ ವಿವಿಧ ಜಿಲ್ಲೆಯ ನೇಕಾರ ಸಹಕಾರ ಸಂಘಗಳಿಂದ ತಯಾರಾಗಿ ನೇರವಾಗಿ ಗ್ರಾಹಕರಿಗೆ ಲಭ್ಯವಿದೆ.

ಮೇಳದಲ್ಲಿ ಗ್ರಾಹಕರು ಖರೀದಿಸುವ ಪ್ರತಿ ಕೈಮಗ್ಗ ಉತ್ಪನ್ನಗಳ ಖರೀದಿ ಮೇಲೆ ಶೇ 20ರ ವರೆಗೆ ರಿಯಾಯ್ತಿ ಇದೆ. ಕೈಮಗ್ಗ ಉತ್ಪನ್ನಗಳ ಪ್ರದರ್ಶನ ಮತ್ತು ಮಾರಾಟ ಮೇಳವು ಮಾರ್ಚ್ 24 ರವರೆಗೆ ನಡೆಯಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.