ಸೋಮವಾರ, ಮಾರ್ಚ್ 1, 2021
24 °C

ವಿಶ್ವದ ಅತಿ ತೂಕದ ವ್ಯಕ್ತಿ ಸಾವು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ವಿಶ್ವದ ಅತಿ ತೂಕದ ವ್ಯಕ್ತಿ ಸಾವು

ಲಂಡನ್‌ (ಪಿಟಿಐ): ಜಗತ್ತಿನ ಅತಿ ತೂಕದ ವ್ಯಕ್ತಿ ಎಂದು ಹೆಸರು ಗಳಿಸಿದ್ದ ಮತ್ತು ಗಿನ್ನೆಸ್‌ ದಾಖಲೆ ನಿರ್ಮಿಸಿದ್ದ ಮ್ಯಾನು­ಯಲ್‌ ಉರಿಬೇ (48) ಮಂಗಳವಾರ ಸಾವನ್ನಪ್ಪಿದ್ದಾನೆ.2006ರಲ್ಲಿ ‘ಅತಿ ಭಾರದ ವ್ಯಕ್ತಿ’ ಎಂದು ಗಿನ್ನೆಸ್‌ ದಾಖಲೆಗೆ ಸೇರ್ಪಡೆಯಾಗಿದ್ದ ಈತ 560 ಕೆ.ಜಿ ತೂಗುತ್ತಿದ್ದ. ಈತನಿಗೆ ದೇಹದ ತೂಕ ಇಳಿಸಿಕೊಳ್ಳಲು ಸಹಾಯ ಮಾಡು­ವಂತೆ ಕೋರಿ ಕೆಲವು ಟಿವಿ ವಾಹಿನಿಗಳು ಕಾರ್ಯಕ್ರಮ ನಡೆಸಿದ್ದವು.  ವೈದ್ಯ­ಕೀಯ ಚಿಕಿತ್ಸೆ ನಂತರ ನಿಧಾನವಾಗಿ ತೂಕ ಕೆಳೆದು ಕೊಳ್ಳುತ್ತ ಬಂದ ಮ್ಯಾನುಯಲ್‌ 2007­ರಲ್ಲಿ 381 ಕೆ.ಜಿಗೆ ಇಳಿದಿದ್ದ. ಆದರೆ ಸ್ವಂತ ಬಲದಿಂದ ನಿಲ್ಲುವ ಶಕ್ತಿ ಹೊಂದಿರಲಿಲ್ಲ. 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.