ಭಾನುವಾರ, ಜೂನ್ 13, 2021
25 °C

ವಿಶ್ವದ ಅತಿ ದೊಡ್ಡ ಪೇಂಟಿಂಗ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಲಾಹೋರ್ (ಪಿಟಿಐ): ಸುಮಾರು ಒಂದು ಸಾವಿರಕ್ಕೂ ಹೆಚ್ಚು ಕಾಲೇಜು ಮತ್ತು ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದಲ್ಲಿ 41,685 ಚದರ ಅಡಿ ಚಿತ್ರವನ್ನು ಬಿಡಿಸುವ ಮೂಲಕ ನೂತನ ವಿಶ್ವದಾಖಲೆ ಬರೆದಿದ್ದಾರೆ.



ಲಾಹೋರ್‌ನಲ್ಲಿರುವ ಪಂಜಾಬ್ ಹಾಕಿ ಕ್ರೀಡಾಂಗಣದಲ್ಲಿ ಕೇವಲ ಏಳು ಗಂಟೆಗಳಲ್ಲಿ ಬೃಹತ್ ಚಿತ್ರವನ್ನು ಬಿಡಿಸಿರುವ ವಿದ್ಯಾರ್ಥಿಗಳು, 2010ರಲ್ಲಿ ನೈಜೀರಿಯಾ ಸೃಷ್ಟಿಸಿದ್ದ 33 ಸಾವಿರ ಚದರ ಅಡಿ  ಚಿತ್ರದ ದಾಖಲೆ ಅಳಿಸಿ ಹಾಕಿದ್ದಾರೆ ಎಂದು ಪೇಂಟಿಂಗ್ ಕಾರ್ಯಕ್ರಮದ ಆಯೋಜಕರಾದ ಸಲ್ಮಾ ತೌರಬ್ ಆಫ್ ಪರ್ಪಲ್  ಆರ್ಟ್ ಅಂಡ್ ಕಮ್ಯೂನಿಕೇಷನ್ ಸಂಸ್ಥೆ ತಿಳಿಸಿದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.