ಮಂಗಳವಾರ, ಮೇ 24, 2022
29 °C

ವಿಶ್ವ ಕನ್ನಡ ಸಮ್ಮೇಳನದಲ್ಲಿ ಭೂರಿ ಭೋಜನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಳಗಾವಿ: ನಗರದಲ್ಲಿ ನಡೆಯಲಿರುವ ವಿಶ್ವ ಕನ್ನಡ ಸಮ್ಮೇಳನಕ್ಕೆ ಆಗಮಿಸುವ ಪ್ರತಿನಿಧಿಗಳು ಹಾಗೂ ಸಾರ್ವಜನಿಕರಿಗೆ ಭರ್ಜರಿ ಊಟದ ವ್ಯವಸ್ಥೆ ಮಾಡಲು ನಿರ್ಧರಿಸಲಾಗಿದೆ.

ಊಟೋಪಚಾರ ಸಮಿತಿಯ ಅಧ್ಯಕ್ಷ ಸಂಸದ ರಮೇಶ ಕತ್ತಿ ಹಾಗೂ ಜಿಲ್ಲಾಧಿಕಾರಿ ಏಕರೂಪ್ ಕೌರ್ ಅವರ ನೇತೃತ್ವದಲ್ಲಿ ಶುಕ್ರವಾರ ನಡೆದ ಸಭೆಯಲ್ಲಿ ಈ ನಿರ್ಣಯ ಕೈಗೊಳ್ಳಲಾಯಿತು.

ಉತ್ತರ ಕರ್ನಾಟಕದ ತಿಂಡಿ, ತಿನಿಸು, ಜತೆಗೆ ದಕ್ಷಿಣ ಕನ್ನಡ ಹಾಗೂ ಕರಾವಳಿ ಭಾಗದ ಊಟವನ್ನೂ ಸಹ ಒದಗಿಸಲು ತೀರ್ಮಾನಿಸಲಾಯಿತು. ಜೋಳ, ಸಜ್ಜಿ ರೊಟ್ಟಿ, ಚಪಾತಿ, ಗುರೆಳ್ಳು, ಶೇಂಗಾ ಹಿಂಡಿ, ಪುಟಾಣಿ ಚಟ್ನಿ, ಬದನೆಕಾಯಿ, ಹೆಸರುಕಾಳು ಪಲ್ಲೆ, ಮಡಕಿ ಉಸುಳಿ, ಅನ್ನ-ಸಾರು ಮಾಡಲಾಗುವುದು. ಗೋಧಿ ಹುಗ್ಗಿ, ಸಜ್ಜಕ ಹಾಗೂ ಜಿಲೇಬಿ ಸಿಹಿ ನೀಡಲಾಗುವುದು. ಉಪಹಾರಕ್ಕೆ ಉಪ್ಪಿಟ್ಟು, ಶಿರಾ ಅವಲಕ್ಕಿ ಹಾಗೂ ಮಂಡಳ ವಗ್ಗರಣಿ, ರಾತ್ರಿ ಊಟಕ್ಕೆ ಬಿಸಿ ಬೇಳೆ ಬಾತ್, ಪುಳಿಯೊಗರೆ ನೀಡಲು ಇಂದಿನ ನಿರ್ಣಯಿಸಲಾಯಿತು.

ಸಂಸದ ರಮೇಶ ಕತ್ತಿ ಮಾತನಾಡಿ, ಮಧ್ಯಾಹ್ನ ಒಂದೂವರೆ ಲಕ್ಷ ಜನರಿಗೆ ಹಾಗೂ ರಾತ್ರಿ 40 ಸಾವಿರ ಜನರಿಗೆ ಊಟದ ವ್ಯವಸ್ಥೆ ಮಾಡಲಾಗುವುದು. ಇದಕ್ಕಾಗಿ ಏಳು ಸ್ಥಳಗಳನ್ನು ನಿಗದಿಪಡಿಸಲಾಗಿದೆ ಎಂದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.