ಗುರುವಾರ , ಜನವರಿ 30, 2020
18 °C
ತೋಟಗಾರಿಕೆ ವಿ.ವಿ ತೃತೀಯ ಘಟಿಕೋತ್ಸವ

ವಿಷ್ಣುಕುಮಾರ್‌ಗೆ 14, ಸತೀಶ್‌ಗೆ 3 ಚಿನ್ನದ ಪದಕ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ವಿಷ್ಣುಕುಮಾರ್‌ಗೆ 14, ಸತೀಶ್‌ಗೆ 3 ಚಿನ್ನದ ಪದಕ

ಬಾಗಲಕೋಟೆ: ಇಲ್ಲಿನ ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದಲ್ಲಿ ಸೋಮವಾರ ನಡೆದ ತೃತೀಯ ಘಟಿ­ಕೋತ್ಸವದಲ್ಲಿ 203 ಸ್ನಾತಕ, 72 ಸ್ನಾತಕೋತ್ತರ ಹಾಗೂ 2 ಪಿ.ಎಚ್‌ಡಿ ವಿದ್ಯಾರ್ಥಿಗಳಿಗೆ ಪದವಿ ಹಾಗೂ ಪ್ರತಿ­ಭಾನ್ವಿತ ವಿದ್ಯಾರ್ಥಿಗಳಿಗೆ 41 ಚಿನ್ನದ ಪದಕಗಳನ್ನು ಪ್ರದಾನ ಮಾಡಲಾಯಿತು.

ಬಿ.ಎಸ್‌ಸಿ (ತೋಟಗಾರಿಕೆ)ಯಲ್ಲಿ ಬಿಹಾರದ ಅರವಾಲ ಜಿಲ್ಲೆಯ ಖಾಟಂಗಿ ಗ್ರಾಮದ ವಿದ್ಯಾರ್ಥಿ ವಿಷ್ಣು­ಕುಮಾರ್‌ ಮಿಶ್ರಾ 14, ಪುಷ್ಪಲತಾ ಎನ್‌. 3, ಮನೀಷ್‌­ಕುಮಾರ್‌ 4, ಅರುಣ್‌ಕುಮಾರ್‌ ಬಿ. 3, ಗ್ಯೋಗಿ ಮರಿಯಂ ಜಾರ್ಜ್‌ 1, ಮನೋಜ್‌ ಎ.ಎಸ್‌. 1 ಚಿನ್ನದ ಪದಕಗಳನ್ನು ಮುಡಿಗೇರಿಸಿಕೊಂಡರು.

ಎಂ.ಎಸ್‌ಸಿ (ತೋಟಗಾರಿಕೆ, ಕೀಟ­ಶಾಸ್ತ್ರ)ಯಲ್ಲಿ ಆಂಧ್ರಪ್ರದೇಶದ ನಲ­ಗೊಂಡ ಜಿಲ್ಲೆಯ ಕೊಡದ ಗ್ರಾಮದ ವಿದ್ಯಾರ್ಥಿ ರಾವುಲ್‌ಪೆಂಟ ಸತೀಶ್‌ 3, ಗೀತಾ ಶೆಟ್ಟಿ ಎಸ್‌.(ಹಣ್ಣು ವಿಜ್ಞಾನ) 3, ಅನಿಲ ರಾಠೋಡ (ಕೊಯ್ಲೋತ್ತರ ತಂತ್ರಜ್ಞಾನ) 2, ಲತಾ ಎಸ್‌.(ಪುಷ್ಪಕೃಷಿ ಮತ್ತು ಉದ್ಯಾನ ವಿನ್ಯಾಸ) 3, ಅಭಿಷೇಕ ಕಟಗಿ (ಬೆಳೆ ಅಭಿವೃದ್ಧಿ ಮತ್ತು ಜೈವಿಕ ತಂತ್ರಜ್ಞಾನ)1, ಪ್ರಿಯಾ ನಾಗನೂರ (ಸಸ್ಯರೋಗಶಾಸ್ತ್ರ) 1 ಮತ್ತು ದಿವ್ಯ ಬಿ.(ತರಕಾರಿ ವಿಜ್ಞಾನ) 2 ಚಿನ್ನದ ಪದಕಗಳನ್ನು ತಮ್ಮದಾಗಿಸಿಕೊಂಡರು.ವಿಶ್ವವಿದ್ಯಾಲಯದ ಸಹ ಕುಲಾಧಿ­ಪತಿ­ಯಾದ ತೋಟಗಾರಿಕೆ ಮತ್ತು ಕೃಷಿ ಮಾರುಕಟ್ಟೆ ಸಚಿವ ಡಾ.ಶಾಮನೂರು ಶಿವಶಂಕರಪ್ಪ ವಿದ್ಯಾರ್ಥಿಗಳಿಗೆ ಪದವಿ ಮತ್ತು ಚಿನ್ನದ ಪದಕಗಳನ್ನು ಪ್ರದಾನ ಮಾಡಿದರು.

ಐಎಫ್ಎಸ್‌ ಗುರಿ

ಬಾಗಲಕೋಟೆ: ಐಎಫ್‌ಎಸ್‌  ಅಧಿ­ಕಾರಿ­ಯಾಗುವ ಗುರಿ ಹೊಂದಿ­ರುವುದಾಗಿ ತೋಟಗಾರಿಕೆ ವಿಜ್ಞಾನ­ಗಳ ವಿಶ್ವವಿದ್ಯಾಲಯದ ತೃತೀಯ ಘಟಿಕೋತ್ಸವದಲ್ಲಿ ಬಿ.ಎಸ್‌ಸಿ (ತೋಟಗಾರಿಕೆ) 14 ಚಿನ್ನದ ಪದಕ ವಿಜೇತ ವಿದ್ಯಾರ್ಥಿ ವಿಷ್ಣುಕುಮಾರ ಮಿಶ್ರಾ ತಿಳಿಸಿದರು.ಬಿಹಾರ ಪೊಲೀಸ್‌ ಇಲಾಖೆ­ಯಲ್ಲಿ ಕಾರ್ಯನಿರ್ವಹಿಸುತ್ತಿರುವ ಕಾಶಿನಾಥ ಮಿಶ್ರಾ ಮತ್ತು ಸಿಯಾ­ಮನಿ ಮಿಶ್ರಾ ದಂಪತಿಯ ಮಗ­ನಾದ ವಿಷ್ಣುಕುಮಾರ ಮಿಶ್ರಾ, ಇದೀಗ ತಮಿಳುನಾಡು ಕೃಷಿ ವಿಶ್ವ­ವಿದ್ಯಾಲಯದಲ್ಲಿ ತೋಟಗಾರಿಕೆ ಕೀಟಶಾಸ್ತ್ರ ವಿಭಾಗದಲ್ಲಿ ಸ್ನಾತ­ಕೋತ್ತರ ಪದವಿ ವ್ಯಾಸಂಗ ಮಾಡುತ್ತಿದ್ದಾರೆ.

ವಿಜ್ಞಾನಿಯಾಗುವ ಬಯಕೆ

ವಿಜ್ಞಾನಿಯಾಗಿ ಗ್ರಾಮೀಣ ಭಾಗದ ರೈತರು ಎದುರಿಸುತ್ತಿರುವ ಸಮಸ್ಯೆಗಳಿಗೆ ಪರಿಹಾರ ಕಂಡು­ಹಿಡಿಯಬೇಕು ಎಂಬ ಗುರಿ ಹೊಂದಿ­ರುವುದಾಗಿ ಎಂ.ಎಸ್‌ಸಿ (ತೋಟ­ಗಾರಿಕೆ, ಕೀಟಶಾಸ್ತ್ರ)ಯಲ್ಲಿ ಮೂರು ಚಿನ್ನದ ಪದಕಗಳನ್ನು ಮುಡಿಗೇರಿಸಿ­ಕೊಂಡ ವಿದ್ಯಾರ್ಥಿ ರಾವುಲ್‌ಪೆಂಟ ಸತೀಶ್‌ ತಿಳಿಸಿದರು. ಆಂಧ್ರಪ್ರದೇಶದ ನಲಗೊಂಡ ಜಿಲ್ಲೆಯ ಕೊಡದ ಗ್ರಾಮದ ರಾವುಲ್‌­ಪೆಂಟ ವೆಂಕಯ್ಯ ಮತ್ತು ಆದಿಲಕ್ಷ್ಮಿ ದಂಪತಿಯ ಮಗನಾದ ರಾವುಲ್‌ಪೆಂಟ ಸತೀಶ್‌ ಪ್ರಸ್ತುತ ಶಿವಮೊಗ್ಗ ಕೃಷಿ ಮತ್ತು ತೋಟ­ಗಾರಿಕೆ ವಿಶ್ವವಿದ್ಯಾಲಯದಲ್ಲಿ ಪಿ.ಎಚ್‌ಡಿ ಪದವಿಗೆ ಪ್ರವೇಶ ಪಡೆದುಕೊಂಡಿದ್ದಾರೆ.

ಪ್ರತಿಕ್ರಿಯಿಸಿ (+)