ಶುಕ್ರವಾರ, ಮೇ 14, 2021
23 °C

ವೇತನ ಪಾವತಿಗೆ ಆಗ್ರಹಿಸಿ ಧರಣಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮಂಡ್ಯ: ಅರಣ್ಯ ಇಲಾಖೆಯು ದಿನಗೂಲಿ ನೌಕರರ ಬಗೆಗೆ ತಾರತಮ್ಯ ನೀತಿಯನ್ನು ಹೊಂದಿದ್ದು ಎಂದು ಆರೋಪಿಸಿರುವ ದಿನಗೂಲಿ ನೌಕರರು, ಬೇಡಿಕೆಗಳ ಈಡೇರಿಕೆಗೆ ಆಗ್ರಹಪಡಿಸಿ ಸೋಮವಾರ ಮಂಡ್ಯದಲ್ಲಿ ಇಲಾಖೆಯ ಕಚೇರಿಯ ಎದುರು ಧರಣಿ ಪ್ರತಿಭಟನೆಯನ್ನು ನಡೆಸಿದರು.1-7-1984ಕ್ಕೂ ಮುನ್ನ ದಿನಗೂಲಿ ನೌಕರರಾಗಿ ಸೇರಿ ಸೇವೆ ಸಲ್ಲಿಸುತ್ತಿರುವ ಸಿಬ್ಬಂದಿಯ ಮಾಹಿತಿ ಕಳುಹಿಸುವಂತೆ ಸರ್ಕಾರ ಕೋರಿದ್ದರೂ, ಜಿಲ್ಲಾವಾರು ಇಂಥ ಮಾಹಿತಿ ಕಳುಹಿಸುವಲ್ಲಿ ವಿಳಂಬ ಮಾಡಲಾಗುತ್ತಿದೆ ಎಂದು ನೌಕರರು ದೂರಿದ್ದಾರೆ.ಇದೂ ಸೇರಿ ಒಟ್ಟು ನಾಲ್ಕು ಪ್ರಮುಖ ಬೇಡಿಕೆಗಳನ್ನು ಉಲ್ಲೇಖಿಸಿರುವ ನೌಕರರು, ಈ ಬಗೆಗೆ ಹಲವು ಮನವಿ ಸಲ್ಲಿಸಿದ್ದರೂ ಸರ್ಕಾರ ಕ್ರಮ ಕೈಗೊಳ್ಳುತ್ತಿಲ್ಲ. ಹೀಗಾಗಿ, ಈಗ ಬೇಡಿಕೆ ಈಡೇರುವ ತನಕ ಪ್ರತಿಭಟಿಸಲಾಗುವುದು ಎಂದು ಮನವಿಯಲ್ಲಿ ಎಚ್ಚರಿಸಿದರು.ಈ ಕುರಿತು ಜಿಲ್ಲಾಧಿಕಾರಿಗಳ ಕಚೇರಿ ಮೂಲಕ ಸರ್ಕಾರಕ್ಕೆ ಸಲ್ಲಿಸಿದ ಮನವಿಯಲ್ಲಿ ನೌಕರರು, ಪುನರಾವರ್ತಿತ ಪ್ರತಿಭಟನೆಯ ನಂತರವೂ ಕ್ರಮ ಜರುಗಿಸುತ್ತಿಲ್ಲ ಎಂದು ಆಕ್ಷೇಪ ವ್ಯಕ್ತಪಡಿಸಿದರು.ಮಂಡ್ಯ ವಿಭಾಗದಲ್ಲಿಯೇ ಕಳೆದ ಮೂರು ವರ್ಷಗಳಿಂದ ಪಿಸಿಪಿ ನೌಕರರಿಗೆ  ವಿವಿಧ ವಲಯಗಳಲ್ಲಿ ಕಡಿಮೆ ಮಂಜೂರಿ ಮಾಡಲಾಗಿದೆ. ಈ ವ್ಯತ್ಯಾಸದ ಮಜೂರಿಯನ್ನು ಆದಷ್ಟು ಶೀಘ್ರ ಪಾವತಿಸಬೇಕು ಎಂದು ಒತ್ತಾಯಿಸಲಾಗಿದೆ.ಸಂಘದ ಮುಖಂಡರಾದ ಎ.ಎಂ.ನಾಗರಾಜು, ಉಪಾಧ್ಯಕ್ಷ ನಾಗರಾಜನಾಯ್ಕ, ಗಂಗಾಧರಯ್ಯ, ಕೃಷ್ಣ ಮತ್ತಿತರರು ಪ್ರತಿಭಟನೆಯಲ್ಲಿ ಇದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.