ಲಂಡನ್ (ರಾಯಿಟರ್ಸ್): ವಿಂಬಲ್ಡನ್ ಟೆನಿಸ್ ಟೂರ್ನಿಯಲ್ಲಿ ಸೋಮವಾರ ಹಲವು ಅಚ್ಚರಿಯ ಫಲಿತಾಂಶಗಳು ಮೂಡಿಬಂದವು. ಅಗ್ರಶ್ರೇಯಾಂಕದ ಆಟಗಾರ್ತಿ ಡೆನ್ಮಾರ್ಕ್ನ ಕ್ಯಾರೊಲಿನ್ ವೊಜ್ನಿಯಾಕಿ, ಅಮೆರಿಕದ ಸೆರೆನಾ ಹಾಗೂ ವೀನಸ್ ವಿಲಿಯಮ್ಸ ಅವರು ಮಹಿಳೆಯರ ಸಿಂಗಲ್ಸ್ ವಿಭಾಗದ ನಾಲ್ಕನೇ ಸುತ್ತಿನಲ್ಲಿ ಮುಗ್ಗರಿಸಿದರು.

ಸ್ಲೊವೇಕಿಯದ ಡೊಮಿನಿಕಾ ಸಿಬಲ್ಕೊವಾ 1-6, 7-6, 7-5 ರಲ್ಲಿ ವೊಜ್ನಿಯಾಕಿಗೆ ಆಘಾತ ನೀಡಿ ಕ್ವಾರ್ಟರ್ ಫೈನಲ್ ಪ್ರವೇಶಿಸಿದರು. ಮೊದಲ ಸೆಟ್ ಗೆದ್ದ ಡೆನ್ಮಾರ್ಕ್ನ ಅಟಗಾರ್ತಿ ಬಳಿಕ ಪಂದ್ಯದ ಮೇಲಿನ ಹಿಡಿತ ಕೈಬಿಟ್ಟರು. ವೊಜ್ನಿಯಾಕಿ ಈ ಹಿಂದೆ ನಾಲ್ಕು ಸಲ ಇಲ್ಲಿ ಆಡಿದ್ದಾಗಲೂ ನಾಲ್ಕನೇ ಸುತ್ತಿನ ಗಡಿ ದಾಟಿರಲಿಲ್ಲ. ಈ ಬಾರಿಯೂ ಅವರು ಎಂಟರಘಟ್ಟ ಪ್ರವೇಶಿಸಲು ವಿಫಲರಾದರು.

ಕಳೆದ ಬಾರಿಯ ಚಾಂಪಿಯನ್ ಸೆರೆನಾ ವಿಲಿಯಮ್ಸ ಕೂಡಾ ಕ್ವಾರ್ಟರ್ ಫೈನಲ್ ಕಾಣದೆಯೇ ನಿರ್ಗಮಿಸಿದರು. ಫ್ರಾನ್ಸ್ನ ಮೇರಿಯೊನ್ ಬರ್ಟೊಲಿ 6-3, 7-6 ರಲ್ಲಿ ಏಳನೇ ಶ್ರೇಯಾಂಕದ ಸೆರೆನಾ ವಿರುದ್ಧ ಜಯ ಪಡೆದರು. ಬಲ್ಗೇರಿಯದ ಸ್ವೆಟಾನ ಪಿರೊಕೋವಾ 6-2, 6-3 ರಲ್ಲಿ ರಲ್ಲಿ ಐದು ಬಾರಿಯ ಚಾಂಪಿಯನ್ ವೀನಸ್ ವಿರುದ್ಧ ಅಚ್ಚರಿಯ ಗೆಲುವು ಸಾಧಿಸಿದರು.

ಮಹಿಳೆಯರ ಸಿಂಗಲ್ಸ್ನಇತರ ಪಂದ್ಯಗಳಲ್ಲಿ ರಷ್ಯಾದ ಮರಿಯಾ ಶರ್ಪೋವಾ 6-4, 6-2 ರಲ್ಲಿ ಚೀನಾದ ಶುಯ್ ಪೆಂಗ್ ಎದುರೂ, ಬಲ್ಗೇರಿಯ ವಿಕ್ಟೋರಿಯ ಅಜರೆಂಕಾ 6-2, 6-2 ರಲ್ಲಿ ರಷ್ಯಾದ ನದಿಯಾ ಪೆಟ್ರೋವಾ ಮೇಲೂ ಗೆದ್ದರು.

ಕ್ವಾರ್ಟರ್ ಫೈನಲ್ಗೆ ಮರ್ರೆ: ಆತಿಥೇಯ ದೇಶದ ಭರವಸೆ ಎನಿಸಿರುವ ಆ್ಯಂಡಿ ಮರ್ರೆ ಪುರುಷರ ಸಿಂಗಲ್ಸ್ ವಿಭಾಗದ ಕ್ವಾರ್ಟರ್ ಫೈನಲ್ ಪ್ರವೇಶಿಸಿದರು. ಅವರು ನಾಲ್ಕನೇ ಸುತ್ತಿನ ಪಂದ್ಯದಲ್ಲಿ 7-6, 6-3, 6-2 ರಲ್ಲಿ ರಿಚರ್ಡ್ ಗ್ಯಾಸ್ಕ್ವೆಟ್ ವಿರುದ್ಧ ಜಯ ಸಾಧಿಸಿದರು.

ಪ್ರಭಾವಿ ಪ್ರದರ್ಶನ ಮುಂದುವರಿಸಿದ ಸರ್ಬಿಯದ ನೊವಾಕ್ ಜೊಕೊವಿಚ್ 6-3, 6-3, 6-3 ರಲ್ಲಿ ಫ್ರಾನ್ಸ್ನ ಮೈಕಲ್ ಲೊದ್ರಾ ಎದುರು ಗೆಲುವು ಪಡೆದರು. ಆಸ್ಟ್ರೇಲಿಯದ ಬರ್ನಾರ್ಡ್ ಟೊಮಿಕ್ 6-1, 7-5, 6-4 ರಲ್ಲಿ ಬೆಲ್ಜಿಯಂನ ಕ್ಸೇವಿಯರ್ ಮಾಲೈಸ್ ಅವರನ್ನು ಮಣಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.