ಶನಿವಾರ, ಮೇ 15, 2021
25 °C

ಶಂಕಿತ ಡೆಂಗೆ: ಬಾಲಕಿ ಸಾವು?

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹಿರೇಕೆರೂರ: ಶಂಕಿತ ಡೆಂಗೆ ಜ್ವರದ ಬಾಧೆಯಿಂದ 12 ವರ್ಷದ ಬಾಲಕಿಯೊಬ್ಬಳು ಬುಧವಾರ ದಾವಣಗೇರಿ ಖಾಸಗಿ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾಳೆ.ತಾಲ್ಲೂಕಿನ ಕಳಗೊಂಡ ಗ್ರಾಮದ 6ನೇ ತರಗತಿ ವಿದ್ಯಾರ್ಥಿನಿ ಮಧು ಗಣೇಶಪ್ಪ ದೊಡ್ಡಮನಿ (12) ಮೃತಪಟ್ಟ ಬಾಲಕಿ.ಇದೇ 7ರಂದು ಜ್ವರ ಬಾಧೆಯಿಂದ ಬಳಲುತ್ತಿದ್ದ ಬಾಲಕಿಯನ್ನು 8 ಹಾಗೂ 9 ರಂದು ಪಟ್ಟಣದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗಿತ್ತು. ಜ್ವರ ನಿಯಂತ್ರಣಕ್ಕೆ ಬಾರದಿದ್ದಾಗ 11 ರಂದು ರಾಣೆಬೆನ್ನೂರ ಖಾಸಗಿ ಆಸ್ಪತ್ರೆಗೆ ನಂತರ ದಾವಣಗೇರಿ ಎಸ್.ಎಸ್.ಆಸ್ಪತ್ರೆಗೆ ಸೇರಿಸಲಾಗಿತ್ತು.ಚಿಕಿತ್ಸೆ ಫಲಕಾರಿಯಾಗದೆ ಜೂ.12 ರ ಬುಧವಾರ ತಡರಾತ್ರಿ ಆಸ್ಪತ್ರೆಯಲ್ಲಿ ಬಾಲಕಿ ಸಾವನ್ನಪ್ಪಿದ್ದಾಳೆ ಎಂದು ಮೂಲಗಳು ತಿಳಿಸಿವೆ.ಡೆಂಗೆ ಅಲ್ಲ: ದಾವಣಗೆರೆಯಲ್ಲಿ ಬುಧವಾರ ಮೃತಪಟ್ಟ ಬಾಲಕಿಗೆ ಡೆಂಗೆ ಜ್ವರ ಇರಲಿಲ್ಲ. ನಮ್ಮ ಬಳಿ ಈಗ ಇರುವ ದಾಖಲೆಗಳ ಪ್ರಕಾರ ಅವಳು ವಿಷಮಶೀತ ಜ್ವರದಿಂದ ಬಳಲುತ್ತಿದ್ದಳು. ಅದೇ ಜ್ವರದಿಂದ ಮೃತಪಟ್ಟಿದ್ದಾಳೆ. ಹೆಚ್ಚಿನ ದಾಖಲೆಗಳ ಸಂಗ್ರಹ ಮಾಡುತ್ತಿದ್ದಾರೆ ಎಂದು ಜಿಲ್ಲಾ ಆರೋಗ್ಯ ಅಧಿಕಾರಿ ಡಾ.ರಾಘವೇಂದ್ರಸ್ವಾಮಿ ತಿಳಿಸಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.