ಶನಿವಾರ, ಜೂನ್ 19, 2021
21 °C

ಶತಕಗಳ ಶತಕದ ಸರದಾರ ಸಚಿನ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮೀರ್‌ಪುರ (ಪಿಟಿಐ): ಕ್ರಿಕೆಟ್ ಪ್ರೇಮಿಗಳು ಕಳೆದ ಒಂದು ವರ್ಷದಿಂದ ಕಾತರದಿಂದ ಕಾಯುತ್ತಿದ್ದ ಸಚಿನ್ ಅವರ  ಶತಕಗಳ ಶತಕದ ಕನಸನ್ನು ಸಚಿನ್ ಇಂದು ನನಸುಗೊಳಿಸಿದರು.

 ಸಾವಿರಾರು ಪ್ರೇಕ್ಷಕರು ಉಸಿರು ಬಿಗಿ ಹಿಡಿದು ನೋಡುತ್ತಿದ್ದಂತೆ ಸಚಿನ್ ಬಹುದಿನಗಳಿಂದ ವಿಶ್ವವೇ ಕಾತರದಿಂದ ಎದುರು ನೋಡುತ್ತಿದ್ದ ನೂರನೇ ಶತಕವನ್ನು ದಾಖಲಿಸಿ ಬಿಟ್ಟರು. ಒಂದಲ್ಲ ಎರಡಲ್ಲ. ಹತ್ತಾರು ಬಾರಿ ಶತಕದಂಚಿಗೆ ಬಂದು ಎಲ್ಲರನ್ನೂ  ನಿರಾಸೆಗೊಳಿಸಿ ಪೆವಿಲಿಯನ್‌ಗೆ ಮರಳುತ್ತಿದ್ದ ಸಿಡಿಲ ಮರಿ ಕೊನೆಗೂ ಶತಕ ಪೂರೈಸಿ ದಾಖಲೆ ಬರೆದರು.ಶಕೀಬ್ ಹಲ್ ಹಸನ್ ಅವರು ಎಸೆದ ಬಾಲ್‌ನಿಂದ ಒಂದು ರನ್ ಗಳಿಸಿದ್ದೇ ಕ್ರೀಡಾಂಗಣದಲ್ಲಿ ನೆರೆದಿದ್ದ ಸಾವಿರಾರು ಪ್ರೇಕ್ಷಕರು ಎದ್ದು ನಿಂತು ಕಿವಿಗಡಕಚ್ಚುವ ಕರತಾಡನ ಮಾಡಿದರು. ಹೋ ಎಂಬ ಹರ್ಷೋದ್ಗಾರ ಮುಗಿಲು ಮುಟ್ಟಿತು. ಲಕ್ಷಾಂತರ ಮಂದಿ ಟಿವಿಗಳಲ್ಲಿ ನೋಡಿ ಪಟ್ಟ ಆನಂದ ಅಷ್ಟಿಷ್ಟಲ್ಲ. ಕೊನೆಗೂ ಇಡೀ ವಿಶ್ವದಲ್ಲಿ ಯಾರೂ ಮಾಡದ ಸಾಧನೆಯೊಂದನ್ನು ಸಾಧಿಸಿದ ವಾಮನ ಮೂರ್ತಿ ತನ್ನೆಲ್ಲಾ ಟೀಕಾಕಾರರಿಗೆ ಮೌನವಾಗಿಯೇ ಉತ್ತರವಿತ್ತರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.