ಸೋಮವಾರ, ಏಪ್ರಿಲ್ 12, 2021
23 °C

ಶಿಕ್ಷಣಕ್ಕೆ ದಾನಿಗಳ ನೆರವು ಸ್ವಾಗತಾರ್ಹ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕೋಲಾರ: ಸರ್ಕಾರ ನೀಡುವ ಸವಲತ್ತುಗಳ ಜೊತೆಗೆ ದಾನಿಗಳು ಬಡ ವಿದ್ಯಾರ್ಥಿಗಳಿಗೆ ನೆರವು ನೀಡುತ್ತಿರುವುದು ಉತ್ತಮ ಬೆಳವಣಿಗೆ ಎಂದು ಕ್ಷೇತ್ರ ಸಂಪನ್ಮೂಲ ವ್ಯಕ್ತಿ ಆರ್.ಶ್ರೀನಿವಾಸನ್ ಹೇಳಿದರು.ತಾಲ್ಲೂಕಿನ ಬೆಗ್ಲಿಹೊಸಹಳ್ಳಿ ಸರ್ಕಾರಿ ಪ್ರೌಢಶಾಲೆಯಲ್ಲಿ ಸೋಮವಾರ ಕಲ್ಲಂಡೂರು ಮಂಗಮ್ಮ ತಮ್ಮ ತಾಯಿಯ ಹೆಸರಿನಲ್ಲಿ ಮಕ್ಕಳಿಗೆ ಸುಮಾರು ರೂ.20 ಸಾವಿರ ಮೌಲ್ಯದ ನೋಟ್ ಪುಸ್ತಕಗಳನ್ನು ವಿತರಿಸುವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.ಮಕ್ಕಳು ಶ್ರದ್ಧೆ- ಬದ್ಧತೆಯಿಂದ ವಿದ್ಯೆಯನ್ನು ಕಲಿಯುವುದರ ಮೂಲಕ ಜೀವನದಲ್ಲಿ ಉತ್ತಮ ಮೌಲ್ಯಗಳನ್ನು ರೂಢಿಸಿಕೊಳ್ಳಬೇಕು. ಸೌಲಭ್ಯಗಳನ್ನು ಸದ್ಬಳಕೆ ಮಾಡಿಕೊಳ್ಳಬೇಕು ಎಂದು ಸೂಚಿಸಿದರು.ಬೆಗ್ಲಿಹೊಸಹಳ್ಳಿ ಕ್ಲಸ್ಟರ್ ಸಂಪನ್ಮೂಲ ವ್ಯಕ್ತಿ ವೀರಣ್ಣಗೌಡ , ದಾನಿಗಳು ನೀಡುವ ನೆರವನ್ನು ಪಡೆಯುತ್ತಾ, ಮಕ್ಕಳು ಸನ್ನಡತೆ ರೂಪಿಸಿಕೊಳ್ಳಬೇಕು ಎಂದರು.ಕ್ಲಸ್ಟರ್‌ನ 17 ಶಾಲೆಗಳ 650 ವಿದ್ಯಾರ್ಥಿಗಳಿಗೆ ರೂ. 1ಲಕ್ಷಕ್ಕೂ ಹೆಚ್ಚಿನ ಮೌಲ್ಯದ ನೆರವನ್ನು ಕೊಡಿಸಲಾಗಿದೆ ಎಂದರು.ಕಲ್ಲಂಡೂರಿನ ದಾನಿಗಳಾದ ಮಂಗಮ್ಮ,  ಎಸ್.ನಾರಾಯಣಸ್ವಾಮಿ, ಸುನಂದಮ್ಮ, ವೀಣಾ, ನಾಗರತ್ನ, ರತ್ನಮ್ಮ, ಮಂಜುಳಾ ವೆಂಕಟಪ್ಪ, ಸುನಂದ, ಸಂಗೀತ, ಯಲ್ಲವ್ವ, ಕಲಾವತಿ ಉಪಸ್ಥಿತರಿದ್ದರು. ಪ್ರಭಾರಿ ಮುಖ್ಯ ಶಿಕ್ಷಕಿ ವೀಣಾ ಸ್ವಾಗತಿಸಿದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.